Asianet Suvarna News Asianet Suvarna News

ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ಶವವನ್ನು ರಸ್ತೆಗೆ ಎಸೆದ ಪ್ರಿಯಕರ

Live in Partner Dead Body: ಮಹಿಳೆಯ ಶವವನ್ನು ಮೂರು ದಿನಗಳ ನಂತರ ಅಂದ್ರೆ ಭಾನುವಾರ ರಾತ್ರಿ ರಸ್ತೆಗೆ ಎಸೆದಿದ್ದಾನೆ. ಸೋಮವಾರ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿ ಬಳಿ ಅಂತ್ಯಸಂಸ್ಕಾರ ನೆರವೇರಿಸಲು ಹಣ ಇರಲಿಲ್ಲ.

Man thrown Live-in Partner s Body On Road mrq
Author
First Published May 27, 2024, 6:38 PM IST

ಭೋಪಾಲ್: ಅಂತ್ಯಸಂಸ್ಕಾರಕ್ಕೆ (Funeral) ಹಣವಿಲ್ಲದೇ ಪ್ರೇಯಸಿಯ ಶವವನ್ನು (Woman dead body) ಪ್ರಿಯಕರ ರಸ್ತೆಗೆ ಎಸೆದಿದ್ದಾನೆ. ಶವವನ್ನು ಮೂರು ದಿನ ಮನೆಯಲ್ಲಿಯೇ ಇರಿಸಿಕೊಂಡಿದ್ದ 53 ವರ್ಷದ ವ್ಯಕ್ತಿ (53 Year Old Man) ಕೊಳತೆ ವಾಸನೆ ಹೆಚ್ಚಾಗುತ್ತಿದ್ದಂತೆ ಶವವನ್ನು ಮೂಟೆಯಲ್ಲಿ ಕಟ್ಟಿ ರಸ್ತೆಯಲ್ಲಿ ಎಸೆದು ಮನೆ ಸೇರಿಕೊಂಡಿದ್ದಾನೆ. 

ಮೃತ ಮಹಿಳೆ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಅನಾರೋಗ್ಯದಿಂದ ಮೃತಳಾದ ಮಹಿಳೆಯ ಶವವನ್ನು ಮೂರು ದಿನಗಳ ನಂತರ ಅಂದ್ರೆ ಭಾನುವಾರ ರಾತ್ರಿ ರಸ್ತೆಗೆ ಎಸೆದಿದ್ದಾನೆ. ಸೋಮವಾರ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿ ಬಳಿ ಅಂತ್ಯಸಂಸ್ಕಾರ ನೆರವೇರಿಸಲು ಹಣ ಇರಲಿಲ್ಲ ಎಂದು  ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ನಂದಿನಿ ಶರ್ಮಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಮರಣೋತ್ತರ ಶವ ಪರೀಕ್ಷೆಯಲ್ಲಿ ಸಾವಿನ ರಹಸ್ಯ ಬಯಲು 

53 ವರ್ಷದ ವ್ಯಕ್ತಿ ಮತ್ತು 57 ವರ್ಷದ ಮಹಿಳೆ 10 ವರ್ಷಗಳಿಂದ ಜೊತೆಯಲ್ಲಿಯೇ ನಗರದ ರಾಜ್‌ಮೊಹಲ್ಲಾದಲ್ಲಿ  ವಾಸಿಸುತ್ತಿದ್ದರು. ಶವದ ಮೇಲೆ ಯಾವುದೇ ರೀತಿ ಗಾಯಗಳು ಕಂಡು ಬಂದಿಲ್ಲ. ಮರಣೋತ್ತರ ಶವ ಪರೀಕ್ಷೆಯಲ್ಲಿಯೂ ಮಹಿಳೆ ಯಕೃತ್ತ ಸಂಬಂಧಿ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದಳು ಎಂದು ತಿಳಿದು ಬಂದಿದೆ. ಇದೊಂದು ಸಹಜ ಸಾವು ಎಂದು ಪೊಲೀಸರು ದೃಢಪಡಿಸಿದ್ದಾರೆ.

ಮಹಿಳೆಯ ಪ್ರಿಯಕರನ್ನು ರಾಜ್‌ಮೊಹಲ್ಲಾದ ಪಾರ್ಕ್‌ವೊಂದರಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವ್ಯಕ್ತಿ ಮಾನಸಿಕವಾಗಿ ತುಂಬಾನೇ ಕುಗ್ಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಹಿಳೆ ಸಾವಿನ ಬಗ್ಗೆ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.

11 ವರ್ಷದ ಬಾಲಕ ತಂದೆ ಆಗಬಹುದೇ? ಯಾವ ವಯಸ್ಸಿನಲ್ಲಿ ವೀರ್ಯ ಉತ್ಪಾದನೆ ಆರಂಭ ಆಗುತ್ತೆ?

ಸ್ಥಳೀಯರಿಂದ ಪೊಲೀಸರಿಗೆ ದೂರು

ಮಹಿಳೆ ಮೃತರಾದ ಮೂರು ದಿನ ಶವವನ್ನು ಮನೆಯಲ್ಲಿರಿಸಿಕೊಂಡಿದ್ದ ಅನ್ನೋದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ವ್ಯಕ್ತಿಯ ಮನೆಯಿಂದ ಕೊಳತೆ ವಾಸನೆ ಬರುತ್ತಿರೋದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಈ ಕುರಿತು ದೂರು ನೀಡಿದ್ದರು. 

200 ರೂಪಾಯಿ ಕೊಡದ್ದಕ್ಕೆ ತವರು ಸೇರಿದ ಪತ್ನಿ; ಇತ್ತ ಮರಳಿ ಬಾರದ ಲೋಕಕ್ಕೆ ತೆರಳಿದ ಗಂಡ!

ಭಾನುವಾರ ರಾತ್ರಿ ಪ್ರೇಯಸಿಯ ಶವವನ್ನು ಗೋಣಿಚೀಲದಲ್ಲಿ ತುಂಬಿಸಿ ಹೊರಗೆ ತೆಗೆದುಕೊಂಡು ಬಂದಿದ್ದಾನೆ. ಸುಮಾರು 200 ಮೀಟರ್ ವರೆಗೆ ಎಳೆದು ತಂಂದಿದ್ದಾನೆ. ಕೊನೆಗೆ ತನ್ನಿಂದ ಶವ ಸಾಗಾಟ ಮಾಡಲು ಸಾಧ್ಯವಾಗದ ಹಿನ್ನೆಲೆ ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದಾನೆ. ವ್ಯಕ್ತಿ ಆರ್ಥಿಕವಾಗಿ ತುಂಬಾ ಹೀನ ಸ್ಥಿತಿಯಲ್ಲಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

Latest Videos
Follow Us:
Download App:
  • android
  • ios