ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಪತ್ನಿ ತವರು ಸೇರಿದ್ದಕ್ಕೆ ಇಲ್ಲೊಬ್ಬ ಪತಿ ಮನನೊಂದು ಬಾರದ ಲೋಕಕ್ಕೆ ತೆರಳಿದ್ದಾನೆ.
ಲಕ್ನೋ: ಪತ್ನಿ ತವರು ಮನೆ ಸೇರಿದ್ದಕ್ಕೆ ನೊಂದ ಗಂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಅತರ್ರಾ ಕ್ಷೇತ್ರದ ಇಟ್ರಾ ಖುರ್ದ್ ಎಂಬಲ್ಲಿ ನಡೆದಿದೆ. 22 ವರ್ಷದ ಅಜ್ಜು ಮೃತ ಯುವಕ.
ಎರಡು ದಿನಗಳ ಹಿಂದೆ ಅಜ್ಜು ಪತ್ನಿ ಮನೆಯ ಖರ್ಚಿಗಾಗಿ 200 ರೂಪಾಯಿ ಕೇಳಿದ್ದರು. ಆದ್ರೆ ಅಜ್ಜು ನೀಡಿರಲಿಲ್ಲ. ಇದೇ ವಿಷಯವಾಗಿ ದಂಪತಿ ನಡುವೆ ಜಗಳ ನಡೆದಿದೆ. ಕೋಪಗೊಂಡ ಪತ್ನಿ ತವರು ಮನೆ ಸೇರಿದ್ದರು. ಇದೀಗ ಅಜ್ಜು ವಿಷ ಪದಾರ್ಥ ಸೇವಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬದುಕುಳಿಯಲಿಲ್ಲ ಅಜ್ಜು!
ವಿಷ ಸೇವಿಸಿದ್ದ ಅಜ್ಜುನನ್ನು ಕುಟುಂಬಸ್ಥರು ಸ್ಥಳೀಯರ ಸಹಾಯದೊಂದಿಗೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಂದಾದ ರಾಣಿ ದುರ್ಗಾವತಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಇಲ್ಲಿಯ ವೈದ್ಯರು ಅಜ್ಜು ಮಾರ್ಗ ಮಧ್ಯೆಯೇ ಮೃತನಾಗಿರೋದನ್ನು ಘೋಷಿಸಿದ್ದಾರೆ.
ಸೋಶಿಯಲ್ ಮೀಡಿಯಾ ಸ್ನೇಹಿತನಿಂದ ಯುವತಿಯ ಕೊಲೆ: ಹಂತಕನ ಸುಳಿವು ನೀಡಿತ್ತು ಶರ್ಟ್‌ನಲ್ಲಿದ್ದ ಕಲೆ
ಪೋಷಕರ ಆಕ್ರಂದನ
ಅಜ್ಜು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪತ್ನಿ 200 ರೂಪಾಯಿ ಜಗಳ ಮಾಡಿಕೊಂಡು ಗಂಡನ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಮನನೊಂದು ಅಜ್ಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಸ್ಥರು ಹೇಳಿದ್ದಾರೆ.
ಅವನು ನನ್ನ ಗಂಡ, ಅಲ್ಲ ನನ್ನ ಪತಿ; ಇಬ್ರು ಮಹಿಳೆಯರ ಕಿತ್ತಾಟದಲ್ಲಿ ಹೈರಾಣದ ಪೊಲೀಸರು!
ಸಂಸಾರ ಅಂದ್ಮೇಲೆ ಸಣ್ಣಪುಟ್ಟ ಜಗಳ ಇದ್ದೇ ಇರುತ್ತದೆ. ಇಬ್ಬರು ಹೊಂದಾಣಿಕೆ ಮಾಡಿಕೊಂಡು ಹೋದ್ರೆ ಮಾತ್ರ ಸಂಸಾರದ ನೌಕೆ ಯಾವುದೇ ಅಡೆತಡೆ ಇಲ್ಲದೇ ಸಾಗುತ್ತದೆ. ಆದರೆ ಸಣ್ಣ ವಿಷಯಕ್ಕೆ 22 ವರ್ಷದ ಅಜ್ಜು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
