ಏಕಕಾಲಕ್ಕೆ ನೂರಾರು ಹಾವುಗಳ ಹೊತ್ತು ತಂದ ವ್ಯಕ್ತಿ ಕಾಡಿನಲ್ಲಿ ಅವುಗಳನ್ನು ಚೀಲದಿಂದ ಸುರಿದ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್
ವ್ಯಕ್ತಿಯೊಬ್ಬ ನೂರಾರು ಹಾವುಗಳನ್ನು ಏಕಕಾಲಕ್ಕೆ ಕಾಡಿಗೆ ತಂದು ಬಿಡುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಎರಡು ದಿನಗಳ ಹಿಂದಷ್ಟೇ ಇನ್ಸ್ಟಾಗ್ರಾಮ್‌ನಲ್ಲಿ ಮೆಮೆವಾಲನ್ಯೂಸ್ ಎಂಬ ಹೆಸರಿನ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ (Imran Khan) ಅವರ ಹಾಡೊಂದು ಪ್ಲೇ ಆಗುತ್ತಿರುವುದು ಕೇಳಿ ಬರುತ್ತಿದೆ.
ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಕಾಡಿನಲ್ಲಿ ಖಾಲಿ ಇರುವ ಜಾಗಕ್ಕೆ ಹಾವುಗಳನ್ನು ತುಂಬಿದ್ದ ಹಸಿರು ಬಣ್ಣದ ದೊಡ್ಡ ಗೋಣಿಚೀಲವನ್ನು ತಂದು ತೆರೆದ ಪ್ರದೇಶದಲ್ಲಿ ಗೋಣಿಯನ್ನು ತಲೆ ಕೆಳಗಾಗಿ ಸುರಿಯುತ್ತಾನೆ. ಈ ವೇಳೆ ಅದರೊಳಗಿಂದ ನೂರಾರು ಹಾವುಗಳ ನೆಲಕ್ಕೆ ಬೀಳುತ್ತವೆ. . ಗೋಣಿ ಚೀಲದಿಂದ ಹೊರಬಂದ ಹಾವುಗಳ ಪ್ರಮಾಣ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಆ ವ್ಯಕ್ತಿ ತನ್ನ ಪಾದಗಳ ಬಳಿ 300 ಹಾವುಗಳಿಂದ ತುಂಬಿದ ಗೋಣಿಚೀಲವನ್ನು ನಿರ್ಭಯವಾಗಿ ಖಾಲಿ ಮಾಡಿದ ರೀತಿ ನೋಡಿ ಜನ ಶಾಕ್ ಆಗಿದ್ದಾರೆ.
ಆ ಹಾವುಗಳನ್ನು ಸ್ವತಂತ್ರವಾಗಿ ಕಾಡಿನಲ್ಲಿ ಬಿಟ್ಟ ಆತ ಒಂದರ ಮೇಲೆ ಒಂದು ಬಿದ್ದ ಸ್ಥಿತಿಯಲ್ಲಿದ್ದ ಅವುಗಳನ್ನು ತನ್ನ ಬರೀ ಕೈಯಲ್ಲೇ ಹರಗುತ್ತಾನೆ. ಬಳಿಕ ಹಾವುಗಳು ಕ್ಷಣದಲ್ಲಿ ಅಲ್ಲಿಂದ ದೂರ ದೂರ ಹೋಗಿ ತಮ್ಮ ಆವಾಸ ಸ್ಥಾನಕ್ಕಾಗಿ ಅಲೆಯುತ್ತವೆ. ನಂತರ ಹಾವು ತಂದ ವ್ಯಕ್ತಿ ಅಲ್ಲೇ ಕೈ ಮುಗಿದು ಪ್ರಾರ್ಥನೆ ಮಾಡಿ ಅಲ್ಲಿಂದ ಹೊರಟು ಹೋಗುತ್ತಾನೆ.
ಬೆಚ್ಚಗೆ ಮಲಗೋ ಹಾಸಿಗೆಯೊಳಗಿತ್ತು ನೂರಾರು ಹಾವು
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶುಕ್ರವಾರಸಂತೆ ಬಳಿ ಹಾವು, ನಾಯಿ ಸುಮಾರು 25 ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಟ ನಡೆಸಿ ಎರಡೂ ಸಾವನ್ನಪ್ಪಿದ ಘಟನೆ ಎರಡು ದಿನದ ಹಿಂದಷ್ಟೇ ನಡೆದಿತ್ತು. ಮಂಜುನಾಥ್ ಎಂಬುವವರು ತಮ್ಮ ಶ್ವಾನದೊಂದಿಗೆ ಜಮೀನಿಗೆ ಹೋದಾಗ ದಾರಿಯಲ್ಲಿ ನಾಗರಹಾವೊಂದು ಎದುರಾಗುತ್ತದೆ. ಆಗ ಶ್ವಾನ ಅದರ ಜೊತೆ ಸೆಣಸಾಡಿದ್ದು, ಕೊನೆಯಲ್ಲಿ ಎರಡೂ ಪ್ರಾಣ ಬಿಟ್ಟಿವೆ.
ಹಾವು ಕಚ್ಚಿದ ಮಹಿಳೆಗೆ ಸಕಾಲದಲ್ಲಿ ಚುಚ್ಚುಮದ್ದು ಸಿಗದೆ ಮೃತಪಟ್ಟಿರುವ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ (Chikkamagalur) ಜಿಲ್ಲೆಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕು ಗೋಣಿಬೀಡು ಹೋಬಳಿ ಸಾಲುಮರಹಳ್ಳಿಯ ನಿವಾಸಿ ಶ್ರೀಮತಿ ಶಾರದಮ್ಮ ಮನೆಯ ಹಿತ್ತಲಿನಲ್ಲಿ ಕೆಲಸ ಮಾಡುತ್ತಿರುವಾಗ ವಿಷನಾಗರ ಕಚ್ಚಿದೆ. ತಕ್ಷಣವೇ ಅವರನ್ನು ಮೂಡಿಗೆರೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆದರೆ ಅಲ್ಲಿ ಹಾವಿನ ಕಡಿತಕ್ಕೆ ಚುಚ್ಚುಮದ್ದು ಸಿಕ್ಕಿಲ್ಲ. ತಕ್ಷಣ ಅವರನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯೂ ಚುಚ್ಚುಮದ್ದು ಸಿಕ್ಕಿಲ್ಲ , ಸರ್ಕಾರಿ ಆಸ್ಪತ್ರೆ ಮಾತ್ರವಲ್ಲದೆ 3 ಖಾಸಗಿ ಆಸ್ಪತ್ರೆಗಳಲ್ಲೂ ಹೋಗಿ ಚುಚ್ಚುಮದ್ದಿಗೆ ಹೆಣಗಾಡಿದ್ದಾರೆ .ಆದರೆ ಎಲ್ಲಿಯೂ ಸಿಕ್ಕಿಲ್ಲ. ಹೀಗಾಗಿ ಸುಮಾರು 3 ಗಂಟೆಗಳ ಜೀವನ್ಮರಣ ಹೋರಾಟ ನಡೆಸಿದ ಶಾರದಮ್ಮ ಇಹಲೋಕ ತ್ಯಜಿಸಿದ್ದಾರೆ.
11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದ ಭೂಪ ... ಇಲ್ಲಿದೆ ಈ ವಾರದ ವೆರೈಟಿ ಸ್ಪೆಷಲ್ ನ್ಯೂಸ್‌ಗಳು
ವೈದ್ಯಕೀಯ ಕಾಲೇಜು ಆಗುವ ಹಣೆಪಟ್ಟಿ ಹೊತ್ತಿರುವ ಜಿಲ್ಲೆಯಲ್ಲೇ ಹಾವು ಕಡಿತಕ್ಕೆ ಚುಚ್ಚುಮದ್ದು ಇಲ್ಲದೆ ಇರುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅಸಡ್ಡೆ , ಜಡ್ಡುಗಟ್ಟಿದ ವೈದ್ಯಕೀಯ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ . ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಘಟನೆಯ ತನಿಖೆ ನಡೆಸಿ, ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.
