ನೀವು ಬಟ್ಟೆಗಳನ್ನು ಹೊರಗಡೆ ಐರನ್ ಮಾಡಲು ಕೊಡ್ತಿದ್ದೀರಾ ಹಾಗಿದ್ರೆ ಈ ವಿಡಿಯೋವನ್ನು ನೀವು ನೋಡಲೇಬೇಕು. ಹೇಗೆ ಈ ಮನುಷ್ಯ ಎಷ್ಟು ಅಚ್ಚುಕಟ್ಟಾಗಿ ನಿಮ್ಮ ಬಟ್ಟೆಗಳಿಗೆ ಇಸ್ತ್ರಿ ಮಾಡ್ತಿದ್ದಾನೆ ಅಂತ!
ನೀವು ಬಟ್ಟೆಗಳನ್ನು ಹೊರಗಡೆ ಐರನ್ ಮಾಡಲು ಕೊಡ್ತಿದ್ದೀರಾ ಹಾಗಿದ್ರೆ ಈ ವಿಡಿಯೋವನ್ನು ನೀವು ನೋಡಲೇಬೇಕು. ಹೇಗೆ ಈ ಮನುಷ್ಯ ಎಷ್ಟು ಅಚ್ಚುಕಟ್ಟಾಗಿ ನಿಮ್ಮ ಬಟ್ಟೆಗಳಿಗೆ ಇಸ್ತ್ರಿ ಮಾಡ್ತಿದ್ದಾನೆ ಅಂತ! ಸಾಮಾನ್ಯವಾಗಿ ಗಂಡ ಹೆಂಡತಿ ಇಬ್ಬರೂ ಉದ್ಯೋಗದಲ್ಲಿರುವವರು ತಮ್ಮ ಮನೆಯ ಎಲ್ಲಾ ಕೆಲಸಗಳನ್ನು ತಾವೇ ಮಾಡಲು ಸಮಯವಿರುವುದಿಲ್ಲ. ಈ ಸಂದರ್ಭದಲ್ಲಿ ಬಟ್ಟೆಯನ್ನು ಹೊರಗಡೆ ಡ್ರೈವಾಶ್‌ಗೆ, ಅಥವಾ ಐರನ್ ಮಾಡಲು ಕೊಡುತ್ತಾರೆ. ನಗರದಲ್ಲಿ ಇದು ಸಾಮಾನ್ಯ. ಆದರೆ ಹೀಗೆ ಐರನ್ ಮಾಡಲು ಹೊರಗೆ ಕೊಡುವವರು ಈ ವಿಡಿಯೋ ನೋಡಿದರೆ ಮನೆಗೆ ತಂದು ತಮ್ಮ ಬಟ್ಟೆಯನ್ನು ಹತ್ತು ಸಲ ಸೋಫಿನ ಹುಡಿ (surf, arial etc) ಹಾಕಿ ತೊಳೆಯುವುದು ಪಕ್ಕಾ.
ಕೆಲ ದಿನಗಳ ಹಿಂದೆ ಆಹಾರವನ್ನು ಉಗಿದು ತಯಾರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿ ಸಾಕಷ್ಟು ವಿವಾದ ಸೃಷ್ಟಿಸಿದ್ದವು. ಯುವಕನೋರ್ವ ರಸ್ತೆ ಬದಿ ಫುಡ್ ಸ್ಟಾಲ್‌ನಲ್ಲಿ ಗೋಧಿ ಹಿಟ್ಟಿಗೆ ಉಗಿದು ಚಪಾತಿ ತಯಾರಿಸುತ್ತಿದ್ದ. ಇದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು, ಅಂತಹ ಹೊಟೇಲ್‌ಗೆ ಹೋಗದಂತೆ ಬಹಿಷ್ಕಾರ ಹಾಕಿದ್ದರು. ಜೊತೆಗೆ ಹೀಗೆ ಹಿಟ್ಟಿಗೆ ಉಗಿದು ಚಪಾತಿ ಮಾಡಿದವನನ್ನು ಬಂಧಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಈ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ ವಯಸ್ಸಾದ ವ್ಯಕ್ತಿಯೊಬ್ಬರು ಬಟ್ಟೆಗಳಿಗೆ ಇಸ್ತ್ರಿ (iron) ಹಾಕುತ್ತಿದ್ದು, ಇಸ್ತ್ರಿ ಹಾಕುವ ಮೊದಲು ಬಾಯಲ್ಲಿ ನೀರು ತುಂಬಿಸಿಕೊಳ್ಳುವ ಈ ಅಜ್ಜ ಅದನ್ನು ಸ್ಪ್ರೇ ಮಾಡುವ ರೀತಿ ಬಟ್ಟೆ ಮೇಲೆ ಉಗುಳುತ್ತಾರೆ. ನಂತರ ಇಸ್ತ್ರಿ ಪೆಟ್ಟಿಗೆಯಿಂದ ಉಜ್ಜುತ್ತಾರೆ. ಪಕ್ಕದಲ್ಲೇ ಒಂದು ನೀರು ಸ್ಪ್ರೇ ಮಾಡುವ ಬಾಟಲಿ ಇದ್ದರು. ಅಜ್ಜ ಈ ರೀತಿ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ.
ಇದನ್ನು ಓದಿ: ಬಟ್ಟೆಗಳಿಗೆ ಐರನ್ ಮಾಡುವಾಗ ಸಾಮಾನ್ಯವಾಗಿ ಮಾಡೋ ತಪ್ಪಿವು
ಈ ವಿಡಿಯೋ ನೋಡಿದ ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ ಮತ್ತೆ ಕೆಲವರು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಅಜ್ಜ ಉಗುಳುವ ಮೂಲಕ ಬಟ್ಟೆಯನ್ನು ಶುದ್ಧ ಮಾಡುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೈಸರ್ಗಿಕ ನೀರಿನ ಸಿಂಪಡಣೆ ಎಂದಿದ್ದಾರೆ. ಇದು ಶಾಂತಿಪ್ರಿಯ ಸಮುದಾಯದವರ ಕೃತ್ಯ ಒಂದು ವೇಳೆ ಇದನ್ನು ಪ್ರಶ್ನಿಸಿದರೆ ಸರ್ ತನ್ ಸೇ ಜುದಾ (ತಲೆ ತೆಗೆಯುವುದು) ಆಗಿ ಬಿಡುತ್ತದೆ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಕೊರೋನಾ ಭೀತಿ: ಉಗುಳಿದ್ದ ವ್ಯಕ್ತಿಯಿಂದಲೇ ಜಾಗ ಸ್ವಚ್ಛಗೊಳಿಸಿದ ಅಧಿಕಾರಿಗಳು
ಆದರೆ ಈ ಘಟನೆ ಎಲ್ಲಿ ನಡೆದಿರುವುದು. ಆತ ಯಾರು ಎಂಬ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಮೂರು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ರೈಲ್ವೆ ನಿಲ್ದಾಣ(Railway Station), ಬಸ್ ನಿಲ್ದಾಣದಂಥ(Bus Station) ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರ(Spit) ಸಂಖ್ಯೆ ಹೆಚ್ಚು. ಇದನ್ನು ತಡೆಯಲು ಭಾರತೀಯ ರೈಲ್ವೆ ವಿನೂತನ ವಿಧಾನ ಕಂಡುಕೊಂಡಿದೆ. ಪ್ರಯಾಣಿಕರು ಉಗುಳಿದರೂ ಅದು ಅನ್ಯರಿಗೆ ತೊಂದರೆ ಆಗದಂತೆ ಹೊಸ ಆವಿಷ್ಕಾರ ಮಾಡಲಾಗಿದ್ದು, ಅದನ್ನು ರೈಲ್ವೆ ಈಗ ಅಳವಡಿಸಿದೆ. ಪ್ಯಾಕೆಟ್ ಪೌಚ್(Packet Pauch), ಮೊಬೈಲ್ ಕಂಟೇನರ್ ಹಾಗೂ ಉಗುಳುವ ಬಿನ್‌ಗಳನ್ನು ಉತ್ತರ, ಪಶ್ಚಿಮ ಹಾಗೂ ಮಧ್ಯ ರೈಲ್ವೆಯ 42 ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ.
ಪ್ಯಾಕೆಟ್ ಪೌಚ್‌ಗಳನ್ನು 15-20 ಸಲ ಮರುಬಳಕೆ ಮಾಡಬಹುದಾಗಿದೆ. ಇವುಗಳ ಬೆಲೆ 5ರಿಂದ 10 ರೂಪಾಯಿ ಮಾತ್ರ. ಉಗುಳುವವರು ಪ್ರಯಾಣಿಸುವ ವೇಳೆ ತಮ್ಮ ಜತೆಗೇ ಕೊಂಡೊಯ್ದು, ಈ ಪೌಚ್‌ಗಳಲ್ಲೇ ಉಗುಳಬಹುದು. ಅದನ್ನು ಬಳಸಿ ಒಮ್ಮೆ ನೆಲಕ್ಕೆ ಎಸೆದರೆ ಅದರಿಂದ ಪರಿಸರಕ್ಕೆ ಅಥವಾ ಅನ್ಯರ ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲ. ಈ ಪೌಚ್‌ಗಳಲ್ಲಿ ಸಸ್ಯಗಳ ಬೀಜಗಳನ್ನು ಇಟ್ಟಿರುತ್ತಾರೆ. ಉಗಿದವರು ಪೌಚ್ ಎಸೆದರೆ ಆ ನೆಲದಲ್ಲಿ ಸಸ್ಯಗಳು ಹುಟ್ಟುತ್ತವೆ.