ಹಾರೂಗೇರಿ(ಏ.25):  ರಸ್ತೆ ಮೇಲೆ ಉಗುಳುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದ ವ್ಯಕ್ತಿಯ ಕೈಯಿಂದಲೇ ಅವನ ಬಟ್ಟೆಯಿಂದ ಉಗುಳಿದ ಸ್ಥಳವನ್ನು ಸ್ವಚ್ಛಗೊಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಹಾರೋಗೇರಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ. 

ಪುರಸಭೆ ಹಿರಿಯ ಆರೊಗ್ಯಾಧಿಕಾರಿಗಳ ಮನವಿಗೂ ಸ್ಪಂದಿಸದೆ ನಡುರಸ್ತೆಯಲ್ಲಿ ಉಗುಳಿದ ಹಿನ್ನೆಲೆ ವ್ಯಕ್ತಿಯಿಂದ ಉಗುಳಿದ ಜಾಗವನ್ನು ಒರೆಸಲು ಹಚ್ಚಲಾಗಿದೆ ಎನ್ನಲಾಗಿದೆ. 

ರಾಯಬಾಗದ ಇಬ್ಬರು ಮಕ್ಕಳಿಗೆ ತಟ್ಟಿದ ಕೊರೋನಾ ಸೋಂಕು

ಕೊರೋನಾ ಮಹಾಮಾರಿಯಿಂದ ಜಗತ್ತೇ ತತ್ತರಿಸಿದೆ. ರೋಗ ತಡೆಗಟ್ಟುವ ಸಲುವಾಗಿ ಸರ್ಕಾರ ಲಾಕ್‌ಡೌನ್‌ ನಿಯಮ ವಿಧಿಸಿದ್ದು, ನಿಯಮ ಉಲ್ಲಂಘನೆ ಮಾಡುವವರಿಗೆ ಕಠಿಣ ಶಿಕ್ಷೆ ನೀಡಲಾಗುವುದು. ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳಬೇಕು. ಎಲ್ಲೆಂದರಲ್ಲಿ ಉಗುಳದಂತೆ ಸರ್ಕಾರ ನೀರ್ದೇಶನವಿದ್ದರೂ ಜನರು ನಿಯಮ ಪಾಲಿಸುತ್ತಿಲ್ಲ. ಆದ್ದರಿಂದ ಜಿಲ್ಲಾಡಳಿತದ ಆದೇಶದಂತೆ ನಿಯಮ ಪಾಲಿಸದವರಿಗೆ ಮಾಸ್ಕ್‌ ಹಾಕಿಕೊಳ್ಳದವರಿಗೆ ಹಾಗೂ ಎಲ್ಲೆಂದರಲ್ಲಿ ಉಗುಳಿದ ಜನರಿಗೂ ದಂಡ ವಿಧಿಸಲಾಗುತ್ತಿದೆ ಎಂದು ಪುರಸಭೆ ಕಂದಾಯ ಅಧಿಕಾರಿ ಎಸ್‌ ಎನ್‌ ದಾಶ್ಯಾಳ ತಿಳಿಸಿದರು.