ಇದು ಅತ್ಯಂತ ಘನಘೋರ ಘಟನೆ. ಸ್ಥಗಿತಗೊಂಡಿದ್ದ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದ್ದೇ ಈ ಘಟನೆಗೆ ಕಾರಣ. ಮದ್ಯ ಖರೀದಿಸಲು ಹಣ ನೀಡದ ಪತ್ನಿಯನ್ನೇ ಗುಂಡಿಕ್ಕಿ ಕೊಲ್ಲಲಾಗಿದೆ. ಈ ಘಟನೆ ವಿವರ ಇಲ್ಲಿದೆ.
ಉತ್ತರ ಪ್ರದೇಶ(ಮೇ.05): ಲಾಕ್‌ಡೌನ್ ಕಾರಣ ಅಗತ್ಯ ವಸ್ತು ಹಾಗೂ ತುರ್ತು ಸೇವೆಗೆ ಮಾತ್ರ ಅವಕಾಶವಿತ್ತು. ಆದರೆ ಲಾಕ್‌ಡೌನ್ ಸಡಿಲಿಕೆ ಮಾಡಿದ್ದು ಮಾತ್ರವಲ್ಲ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು ಇದೀಗ ಈ ಘನಘೋರ ಘಟನಗೆ ಕಾರಣವಾಗಿದೆ. ಲಾಕ್‌ಡೌನ್ ಕಾರಣ ಕೆಲಸವಿಲ್ಲ, ಹಣವಿಲ್ಲದೆ ಸುಮ್ಮನೆ ಮನೆಯಲ್ಲಿದ್ದ ಭಟೋಲಿ ಗ್ರಾಮದ ದೀಪಕ್ ಸಿಂಗ್, ಮದ್ಯ ಮಾರಾಟ ಆರಂಭಗೊಂಡಿದ್ದೇ ಕೆರಳಿ ಕೆಂಡವಾಗಿದ್ದಾನೆ. ಹಣ ನೀಡುವಂತೆ ಪತ್ನಿಗೆ ಕಾಟ ನೀಡಲು ಆರಂಭಿಸಿದ್ದಾನೆ.
ಸ್ಪೀಕರ್ ತವರು ಕ್ಷೇತ್ರದಲ್ಲೇ ಅಮಾನವೀಯತೆ ಮೆರೆದ ಅರಣ್ಯಾಧಿಕಾರಿಗಳು..!
ಮಾತಿ ಮಾತಿಗೆ ಮಾತು ಬೆಳೆದು ಗಂಡ-ಹೆಂಡತಿಯರಲ್ಲಿ ಜಗಳ ಆರಂಭವಾಗಿದೆ. ಹಣ ನೀಡಲು ನಿರಾಕರಿಸಿದ ಪತ್ನಿ ಮೇಲೆ ದೀಪಕ್ ಸಿಂಗ್ ಗುಂಡು ಹಾರಿಸಿದ್ದಾನೆ. 4 ವರ್ಷದ ಮಗನ ಮುಂದೇಯೇ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ದ ಹಾಗೂ ತಾಯಿ ಚೀರಾಟ ಕೇಳಿ ಬೆಚ್ಚಿ ಬಿದ್ದ ಬಾಲಕ ಮನೆಯಿಂದ ಓಡಿ ಹೋಗಿ ಅವಿತುಕೊಂಡಿದ್ದಾನೆ. ಇತ್ತ ಗುಂಡಿನ ಶಬ್ದಕ್ಕೆ ನೆರೆಮನೆಯವರು ಆಗಮಿಸಿದ್ದಾರೆ. ತಕ್ಷಣೇ ದೀಪಕ್ ಪತ್ನಿ ನೇಹಾರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಲೆಗೆ ಗುಂಡಿಟ್ಟ ಕಾರಣ ನೇಹಾ ಪ್ರಾಣ ಸ್ಥಳದಲ್ಲೇ ಹಾರಿಹೋಗಿದೆ. ಇತ್ತ ಪೊಲೀಸರು ದೀಪಕ್ ಸಿಂಗ್‌ನನ್ನು ಆರೆಸ್ಟ್ ಮಾಡಿದ್ದಾರೆ. 4 ಗಂಟೆಗಳ ಬಳಿಕ ಪೊಲೀಸರು ದೀಪಕ್ ಮಗನನ್ನು ಹುಡುಕಿ ವಿಚಾರಿಸಿದಾಗ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾನೆ. ಇತ್ತ ಸಾವೀಗೀಡಾದ ನೇಹಾ 4 ತಿಂಗಳ ಗರ್ಭಿಣಿ ಅನ್ನೋದು ತಿಳಿದಿದೆ. 4 ವರ್ಷಗಳ ಹಿಂದೆ ದೀಪಕ್ ಸಿಂಗ್‌ನನ್ನು ವಿವಾಹವಾಗಿದ್ದರು.
