ವಿಮಾನದಲ್ಲಿ ವ್ಯಕ್ತಿಗೆ ಲೈಂಗಿಕ ಕಿರುಕುಳ: ಹಾಡು ಹಾಡಿ ಹಿಂಭಾಗ ಮುಟ್ಟಿ ಮಹಿಳೆಯಿಂದ ಕುಚೇಷ್ಟೆ

ಇಲ್ಲೊಂದು ಕಡೆ ಪುರುಷನೋರ್ವ ತನಗೆ ವಿಮಾನದಲ್ಲಿ ಮಹಿಳೆಯೊಬ್ಬಳು ಲೈಂಗಿಕ ಕಿರುಕುಳ ನೀಡಿದ್ದಾಳೆ ಎಂದು ಆರೋಪಿಸಿದ್ದು, ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾನೆ. 

man sexual harassed by woman in Delhi to pune flight Passenger shares horrible situation in Reddit akb

ವಿಮಾನದಲ್ಲಿ ಮಹಿಳೆಯರ ಮೇಲೆ ಸಹ ಪ್ರಯಾಣಿಕರ ಲೈಂಗಿಕ ದೌರ್ಜನ್ಯವೆಸಗುವ, ಲೈಂಗಿಕ ಕಿರುಕುಳ ನೀಡುವ ಪ್ರಕರಣಗಳು  ಆಗಾಗ ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಕಡೆ ಪುರುಷನೋರ್ವ ತನಗೆ ಮಹಿಳೆಯೊಬ್ಬಳು ಲೈಂಗಿಕ ಕಿರುಕುಳ ನೀಡಿದ್ದಾಳೆ ಎಂದು ಆರೋಪಿಸಿದ್ದು, ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾನೆ. 

ನವೆಂಬರ್‌ 7 ರಂದು ದೆಹಲಿಯಿಂದ ಪುಣೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಆತ ಅಳಲು ತೋಡಿಕೊಂಡಿದ್ದಾನೆ. ವಿಮಾನ ಹತ್ತಲು ಕಾಯುತ್ತಿದ್ದ ವೇಳೆ ಮಧ್ಯವಯಸ್ಸಿನ ಮಹಿಳೆಯೊಬ್ಬಳು, ತನ್ನ ಹಿಂದೆ ನಿಂತುಕೊಂಡು ಹಾಡು ಹಾಡಲು ಶುರು ಮಾಡಿದ್ದಲ್ಲದೇ  ಕೆಳ ಸೊಂಟ ಹಾಗೂ ಹಿಂಭಾಗವನ್ನು ಅಸಭ್ಯವಾಗಿ ಸ್ಪರ್ಶಿಸಿದಳು. ಈಕೆಯ ವರ್ತನೆಯಿಂದ ತಾನು ಗೊಂದಲಕ್ಕೊಳಗಾಗುವುದರ ಜೊತೆ ಒಂತರ ಕಿರಿಕಿರಿ ಉಂಟಾಯ್ತು.  ಈ ಹಿಂದೆದೂ ತನಗೆ ಇಂತಹ ಅನುಭವ ಆಗಿರಲಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ. 

90 ನಿಮಿಷದ ಪ್ರಯಾಣ ಇನ್ಮುಂದೆ 7 ನಿಮಿಷದಲ್ಲಿ ಸಾಧ್ಯ: 2026ಕ್ಕೆ ಬೆಂಗ್ಳೂರಲ್ಲಿ ಹಾರಾಡಲಿದೆ ಏರ್‌ ಟ್ಯಾಕ್ಸಿ!

ಮಹಿಳೆಯ ವರ್ತನೆಯನ್ನು ತನಗೆ ಅರ್ಥ ಮಾಡಿಕೊಳ್ಳಲಾಗಲಿಲ್ಲ, ಆದರೂ ನಾನು ವಿಮಾನ ಲ್ಯಾಂಡ್ ಆದ ಮೇಲೆ ಆಕೆಯನ್ನು ವಿಚಾರಿಸಿಕೊಳ್ಳಲು ನಿರ್ಧರಿಸಿದೆ. ಆದರೆ ಆಕೆ ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದಳು ಎಂದು ಆತ ರೆಡಿಟ್‌ನಲ್ಲಿ ಬರೆದುಕೊಂಡಿದ್ದಾನೆ. ಈ ಪೋಸ್ಟ್ ರೆಡಿಟ್‌ನಲ್ಲಿ ವೈರಲ್ ಆಗಿದ್ದು, ಕೆಲವರು ಈತನ ಹೇಳಿಕೆಯನ್ನು ಒಪ್ಪಲು ಸಿದ್ದವಿಲ್ಲದೇ ಈತ ಕತೆ ಕಟ್ತಿರಬಹುದು ಎಂದು ಊಹಿಸಿದ್ದಾರೆ.  ಆದರೆ ಮತ್ತೆ ಕೆಲವರು ಆತನನ್ನು ಬೆಂಬಲಿಸಿದ್ದಾರೆ. 

ಮತ್ತೆ ಕೆಲವರು ಇಂತಹ ಲೈಂಗಿಕ ದೌರ್ಜನ್ಯಗಳನ್ನು ಲಿಂಗಭೇದವಿಲ್ಲದೇ ತಿಳಿಸಬೇಕು ಹಾಗೂ ಇಂತಹ ಪ್ರಕರಣಗಳಲ್ಲಿ ಲಿಂಗಬೇಧವಿಲ್ಲದೇ ಸಂತ್ರಸ್ತರನ್ನು ಬೆಂಬಲಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.  ಇಂತಹ ಸ್ಥಿತಿ ಎದುರಿಸಿದ್ದಕ್ಕೆ ಕ್ಷಮಿಸಿ ಯಾರಿಗೂ ಹೀಗೆ ಆಗಬಾರದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.  ಅಲ್ಲದೇ ಕೆಲವರು ತಮಗಾದ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ. 
ಹಬ್ಬಕ್ಕೆ ದೇಶಿ ನಿರ್ಮಿತ ವಸ್ತುಗಳ ಖರೀದಿಗೆ ಜನರ ಒಲವು: ಚೀನಾಗೆ ಭಾರಿ ಹೊಡೆತ
 

man sexual harassed by woman in Delhi to pune flight Passenger shares horrible situation in Reddit akb

Latest Videos
Follow Us:
Download App:
  • android
  • ios