20 ತಿಂಗಳ ಮಗುವನ್ನು ರೇಪ್ ಮಾಡಿ ಕೊಂದ ಯುಸೂಫ್‌ಗೆ ಮರಣದಂಡನೆ
20 ತಿಂಗಳ ಶಿಶುವನ್ನು ಹೀನಾಯವಾಗಿ ಅತ್ಯಾಚಾರ ಮಾಡಿ ಕೊಂದು ಹಾಕಿದ್ದ 23 ವರ್ಷದ ಯುವಕನಿಗೆ ಇಲ್ಲಿನ ಸೆಷನ್ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.
ಸೂರತ್: 20 ತಿಂಗಳ ಶಿಶುವನ್ನು ಹೀನಾಯವಾಗಿ ಅತ್ಯಾಚಾರ ಮಾಡಿ ಕೊಂದು ಹಾಕಿದ್ದ 23 ವರ್ಷದ ಯುವಕನಿಗೆ ಇಲ್ಲಿನ ಸೆಷನ್ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ಯೂಸುಫ್ ಇಸ್ಮಾಯಿಲ್ ಎಂಬ ವ್ಯಕ್ತಿ ಫೆ.27ರಂದು ತನ್ನ ಸಹೋದ್ಯೋಗಿಯ ಮಗುವನ್ನು ತಿಂಡಿ ಕೊಡಿಸಲೆಂದು ಅಂಗಡಿಗೆ ಕರೆದೊಯ್ದು ಅತ್ಯಾಚಾರ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಆದರೆ ತಕ್ಷಣ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾ
ಶಕುಂತಲಾ ಸೋಲಂಕಿ, ಯೂಸುಫ್ ಐಪಿಸಿ ಸೆಕ್ಷನ್ 302, 376 ಹಾಗೂ ಪೋಕ್ಸೋ ಕಾಯ್ದೆ ಅಡಿ ಅಪರಾಧಿಯಾಗಿದ್ದಾನೆ. ಹೀಗಾಗಿ ಆತನಿಗೆ ಮರಣ ದಂಡನೆ ವಿಧಿಸಲಾಗಿದೆ’ ಎಂದು ಆದೇಶಿಸಿದರು. ಜೊತೆಗೆ ಮೃತ ಬಾಲಕಿಯ ಪೋಷಕರಿಗೆ 10 ಲಕ್ಷ ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದರು.
3 ವರ್ಷದ ದತ್ತುಪುತ್ರಿಯ ಗುಪ್ತಾಂಗವನ್ನು ಸಿಗರೇಟ್‌ನಿಂದ ಸುಟ್ಟ ಪಾಪಿಗಳು, ಅಸ್ಸಾಂನಲ್ಲಿ ವೈದ್ಯ ದಂಪತಿಯ ಬಂಧನ!
91 ಬಾಲಕಿಯರ ಮೇಲೆ ಅತ್ಯಾಚಾರ, 15 ವರ್ಷಗಳಿಂದ ರೇಪ್ ಮಾಡುತ್ತಿದ್ದ ಮಕ್ಕಳ ಕಲ್ಯಾಣ ಸಿಬ್ಬಂದಿ ಅರೆಸ್ಟ್!
ಕಾಯುವವನೇ ಕೊಂದರೆ ಯಾರನ್ನು ಬೇಡುವುದು ಇಂತಹ ದುಸ್ಥಿತಿ ನಿರ್ಮಾಣವಾಗಿರುವುದು ಆಸ್ಟೇಲಿಯಾದಲ್ಲಿ. ಇಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಯೋರ್ವ 91 ಮಕ್ಕಳ ಮೇಲೆ ಈತ ಅತ್ಯಾಚಾರ ನಡೆಸಿದ್ದಾನೆ.1,623ಕ್ಕೂ ಹೆಚ್ಚು ಬಾರಿ ಸೆಕ್ಸ್ ನಡೆಸಿ ಅದರ ವಿಡಿಯೋ ಮಾಡಿಕೊಂಡಿದ್ದಾನೆ. ಮಕ್ಕಳ ಕಲ್ಯಾಣ ಇಲಾಖೆಯ ಪ್ರಮುಖ ಸಿಬ್ಬಂದಿಯಾಗಿರುವ ಈತ ಅಪ್ರಾಪ್ತ ಬಾಲಕಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಕಳೆದ 15 ವರ್ಷದಿಂದ ಇದೇ ಕಾಯದಲ್ಲಿ ತೊಡಗಿದ್ದ ಆಸ್ಟ್ರೇಲಿಯಾದ ಕಾಮುಕ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬ್ರಿಸ್ಬೇನ್‌ನಲ್ಲಿರುವ ಆಸ್ಟೇಲಿಯಾ ಮಕ್ಕಳ ಕಲ್ಯಾಣ ಇಲಾಖೆ ಪ್ರಮುಖ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಈತನಿಗೆ ಇದೀಗ 45 ವರ್ಷ. ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ತರಬೇತಿ ಪಡೆಯುವ, ಕಲಿಯುತ್ತಿರುವ ಅಪ್ರಾಪ್ತ ಬಾಲಕಿಯರೇ ಈತನ ಟಾರ್ಗೆಟ್. ಈತ ನಡೆಸಿದ 1,623 ಸೆಕ್ಸ್ ಅಪರಾಧದಲ್ಲಿ 110 ಕ್ರೈಮ್ 10 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2014ರಿಂದ ಆಸ್ಟ್ರೇಲಿಯಾ ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ್ದಾರೆ. 2014ರಲ್ಲಿ ವೆಬ್‌ಸೈಟ್‌ನಲ್ಲಿ ಮಕ್ಕಳ ಮೇಲಿನ ಅತ್ಯಾಚಾರದ ಸಣ್ಣ ತುಣುಕೊಂಡು ಪ್ರಕಟಗೊಂಡಿತ್ತು. 10 ವರ್ಷಕ್ಕಿಂತ ಕಳೆಗಿನ ಬಾಲಕಿ ಮೇಲೆ ನಡೆಸಿದ ಈ ಅತ್ಯಾಚಾರ ವಿಡಿಯೋ 2014ರಲ್ಲಿ ಪೊಲೀಸರ ತಲೆನೋವಿಗೆ ಕಾರಣವಾಗಿತ್ತು. ಈ ವಿಡಿಯೋವನ್ನು ಪರಿಶೀಲಿಸಿದ ಪೊಲೀಸರಿಗೆ ವಿಡಿಯೋ ರೆಕಾರ್ಡ್ ವೇಳೆ ಆಗಿದ್ದ ಸುತ್ತಲಿನ ಧ್ವನಿಯನ್ನು ಆಧರಿಸಿ ತನಿಖೆ ನಡೆಸಿದ್ದರು.
10 ವರ್ಷದ ಬಾಲಕಿಯ ರೇಪ್ ಮಾಡಿ ಗರ್ಭಿಣಿ ಮಾಡಿದ ವ್ಯಕ್ತಿ, ಅಬಾರ್ಷನ್ ಮಾಡಿಸಿ ಸಿಕ್ಕಿಬಿದ್ದ