2021ರಲ್ಲಿ ಕೋವಿಡ್ ಎರಡನೇ ಅಲೆಗೆ ತುತ್ತಾಗಿ ಆಸ್ಪತ್ರೆ ದಾಖಲಿಸಿದ್ದ ವ್ಯಕ್ತಿ ವೈರಸ್‌ಗೆ ಬಲಿಯಾದ. ಕುಟುಂಬಸ್ಥರು ಮೃತದೇಹ  ಪಡೆದು ಅಂತ್ಯಸಂಸ್ಕಾರ ನಡೆಸಿದ್ದರು. ಇದಾಗಿ ಎರಡು ವರ್ಷದ ಬಳಿಕ ಕೋವಿಡ್‌ಗೆ ಬಲಿಯಾಗಿದ್ದ ವ್ಯಕ್ತಿ ಮನೆಗೆ ವಾಪಾಸ್ ಆದ ಘಟನೆ ನಡೆದಿದೆ. ಈ ಅಚ್ಚರಿ ಹೇಗಾಯ್ತು? ಇಲ್ಲಿದೆ 

ಭೋಪಾಲ್(ಏ.16): ಮೃತಪಟ್ಟ ವ್ಯಕ್ತಿ ಅಂತ್ಯಸಂಸ್ಕಾರದ ವೇಳೆ ಎದ್ದ ಘಟನೆ, ಶವಸಂಸ್ಕಾರದಲ್ಲಿಟ್ಟ ವ್ಯಕ್ತಿಯ ದೇಹದಲ್ಲಿ ಜೀವ..ಈ ರೀತಿಯ ಹಲವು ಘಟನೆಗಳು ವರದಿಯಾಗಿದೆ. ಆದರೆ ಇಲ್ಲೊಂದು ಘಟನೆ ಅಚ್ಚರಿ ಜೊತೆಗೆ ಕೋವಿಡ್ ಸಂದರ್ಭದಲ್ಲಿ ನಡೆದಿರುವ ಅವಾಂತರಗಳನ್ನು ಬಿಚ್ಚಿಟ್ಟಿದೆ. 2021ರಲ್ಲಿ ಎದ್ದ ಕೊರೋನಾ 2ನೇ ಅಲೆ ಭಾರತದಲ್ಲಿ ತೀವ್ರ ಪರಿಣಾಮ ಸೃಷ್ಟಿಸಿತ್ತು. ಈ ವೇಳೆ ಆಸ್ಪತ್ರೆಗಳು ಭರ್ತಿಯಾಗಿತ್ತು. ಮಧ್ಯಪ್ರದೇಶದ ಕಮಲೇಶ್ ಪಾಟೀದಾರ್ ಕೋವಿಡ್ ವೈರಸ್‌ನಿಂದ ಆಸ್ಪತ್ರೆ ದಾಖಲಾಗಿದ್ದರು. 10 ದಿನಗಳ ಬಳಿಕ ಕಮಲೇಶ್ ಪಾಟಿದಾರ್ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಬಳಿಕ ಕುಟುಂಬಸ್ಥರು ಮೃತದೇಹ ಪಡೆದು ಅಂತ್ಯಸಂಸ್ಕಾರ ನಡೆಸಿದ್ದಾರೆ. ಇದಾಗಿ 2 ವರ್ಷದ ಬಳಿಕ ಇದೀಗ ಇದೇ ರಜತ್ ಪಾಟಿದಾರ್ ಪ್ರತ್ಯಕ್ಷನಾಗಿದ್ದಾನೆ. ಮನೆಗೆ ಹಿಂತಿರುಗಿದ್ದಾನೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಿವಾಸಿಯಾಗಿರುವ 35 ವರ್ಷದ ಕಮಲೇಶ್ ಪಾಟೀದಾರ್, 2021ರಲ್ಲಿ ಕೋವಿಡ್ ವೈರಸ್‌ಗೆ ತುತ್ತಾಗಿದ್ದರು. ಹರಸಾಹಸ ಪಟ್ಟು ಕಮಲೇಶ್‌ನನ್ನು ಕುಟುಂಬಸ್ಥರು ಗುಜರಾತ್‌ನ ವಡೋದರ ಆಸ್ಪತ್ರೆಗೆ ದಾಖಲಿಸಿದ್ದರು. 2ನೇ ಅಲೆ ಸಂದರ್ಭದಲ್ಲಿ ಕೋವಿಡ್ ಸೋಂಕಿತ ಹೊರತುಪಡಿಸಿ ಇನ್ಯಾರು ಆಸ್ಪತ್ರೆಯಲ್ಲಿ ಉಳಿದುಕೊಳ್ಳುವಂತಿಲ್ಲ. ಆಸ್ಪತ್ರೆ ಒಳ ಪ್ರವೇಶಿಸಲು, ಸೋಂಕಿತರ ಆರೋಗ್ಯ ವಿಚಾರಿಸಲು ಅವಕಾಶ ಇರಲಿಲ್ಲ. ಮನೆಯಿಂದ ಹೊರಬರಲು ಅವಕಾಶವೇ ಇರಲಿಲ್ಲ.

Covid Cases: ದೇಶದಲ್ಲಿ ಒಂದೇ ದಿನ 10,753 ಕೋವಿಡ್‌ ಕೇಸ್‌, 27 ಮಂದಿ ಸಾವು

ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆ ದಾಖಲಿಸಲಾಗಿತ್ತು. 10 ದಿನಗಳ ಚಿಕಿತ್ಸೆ ಬಳಿಕ ಆಸ್ಪತ್ರೆ ಕಮಲೇಶ್ ಪಾಟಿದಾರ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ ನೀಡಿತ್ತು. ಆತಂಕಕ್ಕೆ ಒಳಗಾದ ಕುಟುಂಬ ಆಸ್ಪತ್ರೆ ಬಿಲ್ ಪಾವತಿಸಿ ಮೃತದೇಹ ಪಡೆಯಲು ನಿಂತಿದ್ದರು. ಆದರೆ ಕೋವಿಡ್ 2ನೇ ಅಲೆ ಸಂದರ್ಭ, ಮೃತದೇಹವನ್ನು ಕವರ್‌ನಲ್ಲಿ ಸುತ್ತಿ ಕೊಡಲಾಗುತ್ತಿತ್ತು. ಕೆಲ ಜಿಲ್ಲೆಗಳಲ್ಲಿ ಕುಟುಂಬಸ್ಥರಿಗೂ ಹಸ್ತಾಂತರ ಮಾಡುತ್ತಿರಲಿಲ್ಲ. ಇಲ್ಲಿ ಸಂಪೂರ್ಣವಾಗಿ ಕವರ್‌ನಿಂದ ಮುಚ್ಚಲಾಗಿದ್ದ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿತ್ತು.

ತೀವ್ರ ನೋವಿನಿಂದ ಮೃತದೇಹ ಪಡೆದ ಕುಟುಂಬಸ್ಥರು ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಿದ್ದರು. ಬಳಿಕ ಎಲ್ಲಾ ಕಾರ್ಯಗಳನ್ನು ನೆರವೇರಿಸಿದ್ದರು. ಈ ಘಟನೆ ಬಳಿಕ ಕುಟುಂಬ ನಿಧಾನವಾಗಿ ಕಮಲೇಶ್ ಪಾಟಿದಾರ್ ನೋವನ್ನು ಮರೆತು ಮುಂದೆ ಸಾಗಿತ್ತು. ಇದೀಗ ಎಪ್ರಿಲ್ 15 ರಂದು ಬೆಳಗ್ಗೆ 6 ಗಂಟೆಗೆ ಸಂಬಧಿಕರಿಗೆ ಮನೆಯ ಬಾಗಿಲು ಬಡಿದ ಶಬ್ದವಾಗಿದೆ. ಈ ಬೆಳಗಿನ ಜಾವ ಯಾರು ಎಂದು ಬಾಗಿಲು ತೆರೆದಾಗ ಅಚ್ಚರಿ ಜೊತೆಗೆ ಭಯ ಆವರಿಸಿದೆ. 2 ವರ್ಷಗಳ ಹಿಂದೆ ಮೃತದೇಹ ತಂದು ಅಂತ್ಯಸಂಸ್ಕಾರ ಮಾಡಿದ ಅದೇ ಕಮಲೇಶ್ ಪಾಟೀದಾರ್ ಎದುರಿಗೆ ನಿಂತಿದ್ದ.

ಕೋವಿಡ್ H3N2 ಬಳಿಕ ಜನರಲ್ಲಿ ಶುರುವಾಯ್ತು ಯೆಲ್ಲೋ ಫೀವರ್ ಭೀತಿ!

ಕಮಲೇಶ್ ಪಾಟಿದಾರ್ ನೋಡಿದ ಕುಟುಂಬಕ್ಕೆ ಒಂದು ಕ್ಷಣ ಮಾತು ಹೊರಡಲಿಲ್ಲ. ಸಾವರಿಸಿಕೊಂಡು ಮತ್ತೆ ಇದು ಕಮಲೇಶ್ ಪಾಟಿದಾರ್ ನಿಜವೇ ಎಂದು ಪರೀಕ್ಷಿಸಿದ್ದಾರೆ. ಬಳಿಕ ಖಚಿತಗೊಂಡಿದೆ. ಕಳೆದರಡು ವರ್ಷ ಎಲ್ಲಿದ್ದ ಅನ್ನೋ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಇತ್ತ ಪೊಲೀಸರು ಆಗಮಿಸಿ ಕಮಲೇಶ್ ಪಾಟಿದಾರ್ ಹೇಳಿಕೆ ದಾಖಲಿಸಿದ್ದಾರೆ. ಈತನ ಎಲ್ಲಾ ದಾಖಲೆಗಳಲ್ಲಿ 2021ರಲ್ಲಿ ಮೃತಪಟ್ಟಿದ್ದಾನೆ ಅನ್ನೋದು ದಾಖಲಾಗಿದೆ. ಇತ್ತ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಲವು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಹಲವು ಅವಾಂತರಗಳು ನಡೆದಿದೆ. ಜೀವಂತವಿರುವಾಗಲೇ ಮುಚ್ಚಿದ ಲಕೋಟೆಯಲ್ಲಿ ಹಾಕಿ ಸಾಯಿಸಿರುವ ಸಾಧ್ಯತೆ ಇದೆ. ಇನ್ನು ಮೃತದೇಹಗಳು ಅದಲು ಬದಲಾಗಿರುವ ಸಾಧ್ಯತೆಗಳು ಇವೆ. ಕಮಲೇಶ್ ಪಾಟೀದಾರ್ ಮೃತ ಎಂದು ಹೇಳಿದ ಆಸ್ಪತ್ರೆ, ಇದೀಗ ಜೀವಂತವಾಗಿ ವಾಪಸ್ ಬಂದಿರುವುದು ಈ ಎಲ್ಲಾ ಅವಾಂತರಗಳನ್ನು ಸಾರಿ ಹೇಳುತ್ತಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.