ಕೋವಿಡ್ H3N2 ಬಳಿಕ ಜನರಲ್ಲಿ ಶುರುವಾಯ್ತು ಯೆಲ್ಲೋ ಫೀವರ್ ಭೀತಿ!

ಕೋವಿಡ್, H3N2 ಆಯ್ತು, ಈಗ ಯೆಲ್ಲೋ ಫೀವರ್(Yellow fever) ಭೀತಿ. ಸದ್ಯ ದೇಶದಲ್ಲಿ ಹಳದಿ ಜ್ವರ ಕಾಣಿಸಕೊಳ್ಳದಿದ್ದರೂ ಕೂಡ ಮುನ್ನೆಚ್ಚರಿಕೆ ವಹಿಸಲಾಗಿದೆ. 

After Covid H3N2  yellow fever panic started among people at bengaluru rav

ಬೆಂಗಳೂರು (ಏ.13); ಕೋವಿಡ್, H3N2 ಆಯ್ತು, ಈಗ ಯೆಲ್ಲೋ ಫೀವರ್(Yellow fever) ಭೀತಿ. ಸದ್ಯ ದೇಶದಲ್ಲಿ ಹಳದಿ ಜ್ವರ ಕಾಣಿಸಕೊಳ್ಳದಿದ್ದರೂ ಕೂಡ ಮುನ್ನೆಚ್ಚರಿಕೆ ವಹಿಸಲಾಗಿದೆ. 

ಜಾಂಡೀಸ್ ರೀತಿಯಲ್ಲಿ ಕಾಣಿಸಿಕೊಳ್ಳುವ ಹಳದಿ ಜ್ವರ ದಕ್ಷಿಣ ಅಮೆರಿಕಾ, ಆಫ್ರಿಕಾ ದೇಶಗಳಲ್ಲಿ ಆರ್ಭಟಿಸುತ್ತಿದೆ. ಯೆಲ್ಲೋ ಫೀವರ್ ಕಾಣಿಸಿಕೊಂಡ ಹೈ ರಿಸ್ಕ್ ದೇಶಗಳಿಂದ ಭಾರತಕ್ಕೆ ಬರುವವರು ಯೆಲ್ಲೋ ಫೀವರ್ ಲಸಿಕೆ ಪಡೆಯುವುದು ಹಾಗೂ  ಭಾರತದಿಂದ ವಿದೇಶಕ್ಕೆ ಹೋಗಲು ವ್ಯಾಕ್ಸಿನೇಷನ್ ಅನ್ನು ಕೇಂದ್ರ ಆರೋಗ್ಯ ಇಲಾಖೆ(Health depertment) ಕಡ್ಡಾಯಗೊಳಿಸಿದೆ.  

ಕೋವಿಡ್ ಬೆನ್ನಲ್ಲೇ ಹಳದಿ ಜ್ವರದ ಭೀತಿ, ಲಸಿಕೆ ಕಡ್ಡಾಯಗೊಳಿಸಿದ ಕೇಂದ್ರ ಆರೋಗ್ಯ ಇಲಾಖೆ

ಹಾಗಿದ್ರೆ ಎಲ್ಲೊ ಫೀವರ್ ಗುಣಲಕ್ಷಣಗಳೇನು..?

 ಶೀತ, ಜ್ವರ, ಮೈ ಕೈ ನೋವು, ಸುಸ್ತು, ವಾಂತಿ ಇವುಗಳು ಹಳದಿ ಜ್ವರದ ಲಕ್ಷಣಗಳಾಗಿದೆ. ಸೌತ್ ಆಫ್ರಿಕಾ, ಕೀನ್ಯಾ, ನೈಜೀರಿಯಾ, ಉಗಾಂಡ, ರಿಪಬ್ಲಿಕ್ ಆಫ್ ಕಾಂಗೋ , ದಕ್ಷಿಣ ಅಮೆರಿಕಾದ ಕೆಲ ಭಾಗದಲ್ಲಿ ಹೆಚ್ಚಾಗಿ ಯೆಲ್ಲೋ ಫೀವರ್ ಕಾಣಿಸಿಕೊಳ್ತಿದೆ. 

ಏಪ್ರಿಲ್ 1 ರಿಂದ ಹೈ ರಿಸ್ಕ್(Highrisk) ದೇಶಗಳಿಗೆ ಹೋಗುವ ಪ್ರಯಾಣಿಕರಿಗೆ ಯೆಲ್ಲೋ ಫೀವರ್ ವ್ಯಾಕ್ಸಿನ್ ಕಡ್ಡಾಯ ಮಾಡಲಾಗಿದೆ. ವಿದೇಶಗಳಿಗೆ ತೆರಳುವ ಹಾಗೂ ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆ(CV Raman Hospital Bengaluru)ಯಲ್ಲಿ ಲಸಿಕೆ ನೀಡಲಾಗ್ತಿದೆ. 

ಪ್ರತಿ ಲಸಿಕೆಗೆ 300 ರೂ ನಿಗದಿ ಮಾಡಲಾಗಿದೆ. ಒಂದು ಸಲ ಲಸಿಕೆ ಪಡೆದವರು ಲೈಫ್ ಟೈಮ್ ಹಳದಿ ಜ್ವರದಿಂದ ರಕ್ಷಣೆ ಪಡೆಯಬಹುದು.

ಹಳದಿ ಜ್ವರವು ವೈರಸ್‌ನಿಂದ ಉಂಟಾಗುವ ಗಂಭೀರ ಕಾಯಿಲೆಯಾಗಿದೆ. ಯೆಲ್ಲೋ ಫಿವರ್‌ ವೈರಸ್ ಸೋಂಕಿಗೆ ಒಳಗಾದ ಹೆಚ್ಚಿನ ಜನರು ತಕ್ಷಣ ಅನಾರೋಗ್ಯಕ್ಕೆ ಒಳಗಾಗದಿರಬಹುದು ಅಥವಾ ಬೇಗನೇ ಗುಣಲಲಕ್ಷಣಗಳು ಕಾಣಿಸಿಕೊಳ್ಳದೇ ಇರಬಹುದು. 

Health Tips: ಸಸ್ಯಗಳಿಂದ ಮನುಷ್ಯನಿಗೆ ಬರುವ ಈ ರೋಗ ಯಾವುದು ಗೊತ್ತಾ?

ಯೆಲ್ಲೋ ಫಿವರ್ ವೈರಸ್‌ನಿಂದ ಅನಾರೋಗ್ಯಕ್ಕೆ ಒಳಗಾದ ಜನರು ಸೋಂಕಿಗೆ ಒಳಗಾದ 3-6 ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಸಾರ್ವಜನಿಕರು ಆರೋಗ್ಯದ ಕುರಿತು ಎಚ್ಚರಿಕೆಯಿಂದಿರಬೇಕು. ರೋಗಲಕ್ಷಣಗಳು ಕಾಣಿಸಿಕೊಂಡಲ್ಲಿ ಲಸಿಕೆ ಪಡೆಯಬೇಕು.

Latest Videos
Follow Us:
Download App:
  • android
  • ios