ಅಮೆರಿಕನ್ ಯುವತಿರು ಸೇರಿದಂತ ಕುಟುಂಬವೊಂದು ಭಾರತದ ಗುರುಗಾಂವ್ ಹೊಟೆಲ್‌ನಲ್ಲಿ ತಂಗಿದೆ. ಈ ಯುವತಿಯರು ಡ್ರೆಸ್ ಬದಲಾಯಿಸಿ ಸ್ವಿಮ್ಮಿಂಗ್ ಪೂಲ್‌ಗೆ ಇಳಿಯುತ್ತಿರುವ, ನೀರಿನಲ್ಲಿ ಆಡುತ್ತಿರುವ ವಿಡಿಯೋವನ್ನು ಅದೇ ಹೊಟೆಲ್ ಮೇಲಿನ ಮಹಡಿಯಲ್ಲಿ ನಿಂತು ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ ಘಟನೆ ನಡೆದಿದೆ.
ಗುರುಗಾಂವ್ (ಜೂ.19) ಹೊಟೆಲ್ ರೂಂಗಳಳಲ್ಲಿ ತಂಗುವಾಗ, ಅಥವಾ ಸ್ವಿಮ್ಮಿಂಗ್ ಪೂಲ್, ನದಿಗಳ ನೀರಿನಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿರುವಾಗ ಎಚ್ಚರಿಕೆಯಿಂದ ಇರಬೇಕು ಅನ್ನೋ ಎಚ್ಚರಿಕೆ ಮತ್ತೆ ಬಂದಿದೆ. ಅಮೆರಿಕದಿಂದ ಭಾರತ ಪ್ರವಾಸಕ್ಕೆ ಬಂದ ಕುಟುಂಬದಲ್ಲಿ ಬಹುತೇಕ ಯುವತಿಯರಿದ್ದಾರೆ. ಈ ಕುಟುಂಬ ಗುರುಗಾಂವ್‌ನ 5 ಸ್ಟಾರ್ ಹೊಟೆಲ್‌ನಲ್ಲಿ ತಂಗಿದೆ. ತಮ್ಮ ವಿಶ್ರಾಂತಿ ಸಮಯದಲ್ಲಿ ಈ ಯುವತಿಯರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡಲು ಬಯಸಿದ್ದಾರೆ. ಆದರೆ ಇದೇ ವೇಳೆ ಈ ಯುವತಿಯರು ಡ್ರೆಸ್ ಬದಲಾಯಿಸಿ, ಪೂಲ್‌ನಲ್ಲಿ ಸ್ವಿಮ್ಮಿಂಗ್ ಮಾಡುತ್ತಿರುವ ವಿಡಿಯೋವನ್ನು ಅದೇ ಹೊಟೆಲ್ ಕಟ್ಟದಲ್ಲಿ ಬೇರೆ ರೂಂನಲ್ಲಿದ್ದ ವ್ಯಕ್ತಿಯೊಬ್ಬ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಬಯಲಾಗಿದೆ.
ಗುರುಗಾಂವ್ ಹೊಟೆಲ್‌ನಲ್ಲಿ ಕಹಿ ಅನುಭವ
ರೋರಿ, ಸೇಜ್ ಸೇರಿದಂತೆ ಯುವತಿರ ಕುಟುಂಬ ಗುರುಗಾಂವ್ ಹೊಟೆಲ್‌ನಲ್ಲಿ ತಂಗಿದೆ. ಪೋಷಕರ ಜೊತೆ ಭಾರತಕ್ಕೆ ಪ್ರವಾಸಕ್ಕೆ ಆಗಮಿಸಿದ ಈ ಅಮೆರಿಕನ್ ಕುಟುಂಬ ಭಾರತದ ಹಲವು ರಾಜ್ಯಗಳನ್ನು ಸಂದರ್ಶಿಸಲು ಬಯಸಿದೆ. ಆದರೆ ಗುರುಗಾಂವ್ ಹೊಟೆಲ್‌ನಲ್ಲೇ ಈ ಕುಟುಂಬಕ್ಕೆ ಕಹಿ ಅನುಭವವಾಗಿದೆ.
ಡ್ರೆಸ್ ಚೇಂಜ್, ಈಜುಕೊಳದ ವಿಡಿಯೋ
ಗುರುಗಾಂವ್ ಹೊಟೆಲ್‌ನಲ್ಲಿ ತಂಗಿರುವ ಕುಟುಂಬ ಸದಸ್ಯರು ಈಜುಕೊಳದಲ್ಲಿ ಕೆಲ ಹೊತ್ತು ಕಳೆಯಲು ಬಯಸಿದ್ದಾರೆ ಇದಕ್ಕಾಗಿ ಪೋಷಕರು ಸೇರಿದಂತೆ ಇಡೀ ಕುಟುಂಬ ಸ್ವಿಮ್ಮಿಂಗ್ ಪೂಲ್ ಬಳಿ ಬಂದಿದ್ದಾರೆ. ಇದು ತೀರಾ ಖಾಸಗಿ ಸ್ಥಳವಾಗಿದೆ. ಈಜುಕೊಳದ ಬಳಿ ಬಂದ ಈ ಕುಟುಂಬ ನೀರಿನಲ್ಲಿ ಆಡಲು ತಮ್ಮ ಡ್ರೆಸ್ ಬದಲಾಯಿಸಿದ್ದಾರೆ. ಬಿಕಿನಿ, ಸ್ವಿಮ್ ಸ್ಯೂಟ್ ಧರಿಸಿದ್ದಾರೆ. ಬಳಿಕ ಈಜುಕೊಳದಲ್ಲಿ ಈಜಾಡಲು ಶುರುಮಾಡಿದ್ದಾರೆ. ಆದರೆ ಇವೆಲ್ಲವನ್ನು ಇದೇ ಹೊಟೆಲ್ ರೂಂನಲ್ಲಿ ತಂಗಿರುವ ಮತ್ತೊಬ್ಬ ವ್ಯಕ್ತಿ ತನ್ನ ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.
ಯುವತಿಯರ ತಾಯಿ ರಹಸ್ಯವಾಗಿ ಒರ್ವ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಪತ್ತೆಮಾಡಿದ್ದಾರೆ. ಬಳಿಕ ಕುಟುಬಂದ ಇತರ ಸದಸ್ಯರಿಗೆ ಸೂಚಿಸಿದ್ದರೆ. ತಾಯಿ ಸೂಚನೆಯಂತೆ ಕುಟುಂಬ ಸದಸ್ಯರು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿ ಕಡೆ ನೋಡಿದ್ದಾರೆ. ಬಳಿಕ ಈತ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ಯುವತಿರು ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ. ಬಳಿಕ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ಪೋಸ್ಟ್ ಮಾಡಿದ ಅಮೆರಿಕನ್ ಕುಟುಂಬ, ಒಂದು ಎಚ್ಚರಿಕೆಯನ್ನು ನೀಡಿದೆ. ಭಾರತಕ್ಕೆ ಪ್ರವಾಸ ಬರುವ ಪ್ಲಾನ್ ಇದ್ದರೆ, ಬರುವಾಗ ಬಾಡಿಗಾರ್ಡ್ ಕೂಡ ಕರೆದುಕೊಂಡು ಬನ್ನಿ. ಸೂರ್ಯಸ್ನಾನ ಮಾಡುತ್ತಿದ್ದರೆ, ಅಥವಾ ಈಜಕೊಳದಲ್ಲಿದ್ದರೆ ಈ ರೀತಿ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡುವುದು ಭಾರತದಲ್ಲಿ ಸಾಮಾನ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತೀಯರು ಆಗ್ರಹಿಸಿದ್ದಾರೆ. ಭಾರತಕ್ಕೆ ಆಗಮಿಸಿದ ಪ್ರವಾಸಿಗರಿಗೆ, ಅಥವಾ ಯಾವುದೇ ಹಣ್ಣುಮಕ್ಕಳ ವಿಡಿಯೋ ರೆಕಾರ್ಡ್ ಮಾಡುವುದು ನಿಯಮ ಉಲ್ಲಂಘಟನೆಯಾಗಿದೆ. ಈತನಿಂದ ಭಾರತೀಯರ ಮಾನ ಮರ್ಯಾದೆ ಹರಾಜುತ್ತಿದೆ. ಇಂತಹವರೇ ಮುಂದೆ ಮತ್ತೊಂದು ದುರಂತಕ್ಕೂ ಕಾರಣರಾಗುತ್ತಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
