75 ಸಾವಿರ ದುರಾಸೆಗೆ ಮದ್ಯ ಸೇವಿಸೋ ಚಾಲೆಂಜ್ ಸ್ವೀಕರಿಸಿ, ಯಮನ ಪಾದ ಸೇರಿದ!

ಪ್ರಸಿದ್ಧಿಗಾಗ್ಲಿ, ಹಣಕ್ಕಾಗಿ ಯಾವುದೇ ಚಾಲೆಂಜ್ ಸ್ವೀಕರಿಸುವ ಮುನ್ನ ಮುಂದೇನಾಗುತ್ತೆ ಎಂಬುದನ್ನು ಆಲೋಚಿಸಬೇಕು. ಎಲ್ಲವನ್ನೂ ಮರೆತು ಆತುರದಲ್ಲಿ ಕೆಲಸ ಮಾಡಿದ್ರೆ ಅಪಾಯ ನಿಶ್ಚಿತ. ವಿಸ್ಕಿ ಚಾಲೆಂಜ್ ಸ್ವೀಕರಿಸಿದ್ದವನ ಕಥೆ ಕೂಡ ಅದೇ ಆಗಿದೆ. 
 

man lost his life in a liquor challenge roo

ಸೋಶಿಯಲ್ ಮಿಡಿಯಾ ಇನ್ಫ್ಲುಯೆನ್ಸರ್ (Social Media Influencer) 21 ವರ್ಷದ ಯುವಕ ಜೀವ ಕಳೆದುಕೊಂಡಿದ್ದಾನೆ. ಆತನ ಹೆಸರು ಠಾಣಕರನ್ ಕಂಠಿ. ಆತ ವಿಸ್ಕಿ ಸೇವನೆ ಮಾಡುವ ಫೋಟೋವನ್ನು ನೀವು ವೈರಲ್ ಆಗಿರುವ ಫೋಸ್ಟ್ ನಲ್ಲಿ ನೋಡ್ಬಹುದು. ಸಣ್ಣ ಸಣ್ಣ ಗ್ಲಾಸ್ ನಲ್ಲಿ ಠಾಣಕರನ್ ಕಂಠಿ ವಿಸ್ಕಿ ಸೇವನೆ ಮಾಡ್ತಿದ್ದಾನೆ. ಸುತ್ತ ನಿಂತ ಜನರು ಅದ್ರ ವಿಡಿಯೋ ಮಾಡಿದ್ದಾರೆ. ವಿಸ್ಕಿ ಕುಡಿಯುವಂತೆ ಪ್ರೋತ್ಸಾಹಿಸ್ತಿದ್ದಾರೆ. ಒಂದಾದ್ಮೇಲೆ ಒಂದು ಪೆಗ್ ಸೇವನೆ ಮಾಡಿದ ಠಾಣಕರನ್ ಕಂಠಿ, ಚಾಲೆಂಜ್ ಪೂರ್ಣಗೊಳಿಸಿದ್ದಾನೆ. ಇದಾದ ಕೆಲವೇ ಸಮಯದಲ್ಲಿ ಆತನ ಆರೋಗ್ಯ ಹದಗೆಟ್ಟಿದೆ. ಠಾಣಕರನ್ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲ ನೀಡಲಿಲ್ಲ. ಠಾಣಕರನ್ ಕಂಠಿ, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. 

ಠಾಣಕರನ್ ಕಂಠಿ, ಸೋಶಿಯಲ್ ಇನ್ಫ್ಲುಯೆನ್ಸರ್. ತನ್ನ ಖಾತೆಯಲ್ಲಿ ವಿಡಿಯೋಗಳನ್ನು ಹಂಚಿಕೊಳ್ತಿರುತ್ತಿದ್ದ. ಆತನಿಗೆ ವೀಕ್ಷಕರು ಚಾಲೆಂಜ್ ಹಾಕಿದ್ದರು. ಪಾರ್ಟಿ ವೇಳೆ 350 ಮಿಲಿ ವಿಸ್ಕಿ ಸೇವನೆ ಮಾಡುವಂತೆ ಹೇಳಿದ್ದರು. ಒಂದ್ವೇಳೆ ಠಾಣಕರನ್ ಕಂಠಿ ಚಾಲೆಂಜ್ ಪೂರ್ಣಗೊಳಿಸಿದ್ರೆ 30,000 ಬಹ್ತ್  ಅಂದ್ರೆ ಸುಮಾರು 75 ಸಾವಿರ ರೂಪಾಯಿ ನೀಡೋದಾಗಿ ಹೇಳಿದ್ದರು. 

ರೀಲ್ಸ್‌ಗಾಗಿ ರಸ್ತೆಯಲ್ಲಿ ಬೆಂಕಿ ಹಚ್ಚಿದವನ ಕಂಬಿ ಹಿಂದೆ ಕೂರಿಸಿದ ಪೊಲೀಸರು

ಠಾಣಕರನ್ ಬ್ಯಾಂಕಾಕ್‌ನ ಕೊಳೆಗೇರಿಯಲ್ಲಿ ಅಜ್ಜಿ ಜೊತೆ ಬೆಳೆದಿದ್ದ ಎಂದು ಹೇಳಲಾಗುತ್ತಿದೆ. ಎರಡು ತಿಂಗಳ ಮಗುವಾಗಿದ್ದಾಗ ಠಾಣಕರನ್ ಕಂಠಿ  ಪೋಷಕರು ಬೇರೆಯಾಗಿದ್ದರು. ಏಳನೇ ವಯಸ್ಸಿನಲ್ಲಿಯೇ ಠಾಣಕರನ್ ಕಂಠಿ, ದುಡಿಮೆ ಶುರು ಮಾಡಿದ್ದ. ರಾಮ್ ಇಂಟ್ರಾ ರಸ್ತೆಯ ಮಾರುಕಟ್ಟೆಯಲ್ಲಿ ಹೂಮಾಲೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದ. ಇದೀಗ ಠಾಣಕರನ್ ಕಂಠಿ, ಹಣದ ಆಸೆಗೆ ಬಲಿಯಾಗಿದ್ದಾನೆ. ಆಲ್ಕೋಹಾಲ್ ಚಾಲೆಂಜ್‌ ಆತನ ಪ್ರಾಣ ತೆಗೆದಿದೆ. ಠಾಣಕರನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪಾರ್ಟಿಯಲ್ಲಿದ್ದ ಹಲವರು ಅವರನ್ನು ನೋಡಿ ನಗುತ್ತಿದ್ದರು ಎನ್ನಲಾಗಿದೆ. 350 ಎಂಎಲ್ ವಿಸ್ಕಿ ಸೇವನೆ ಮಾಡಿದ್ರೆ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತೆ ಎಂಬುದು  ಠಾಣಕರನ್ ಕಂಠಿಗೆ ತಿಳಿದಿರಲಿಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ. ಹಾಗೆಯೇ ಇಂಥ ಅಪಾಯಕಾರಿ ಚಾಲೆಂಜ್ ನೀಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. 

17ನೇ ವಯಸ್ಸಿಗೆ ಜಗತ್ತಿನ 7 ಶಿಖರವೇರಿದ ಸಾಧನೆ ಮಾಡಿದ ಕಾಮ್ಯಾ!

 ಹಿಂದಿನ ವರ್ಷ ಚೀನಾದಲ್ಲಿ ಇಂಥ ಘಟನೆಯೊಂದು ನಡೆದಿತು. ಆನ್ಲೈನ್ ನಲ್ಲಿ ಚಾಲೆಂಜ್ ಹಾಕಿ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದ. ಬ್ರದರ್ ಹುವಾಂಗ್ ಎಂಬ ಹೆಸರಿನಿಂದ ಪ್ರಸಿದ್ಧನಾದ ಯುವಕ 1,76000 ಫಾಲೋವರ್ಸ್ ಹೊಂದಿದ್ದ. ಸಾಮಾಜಿಕ ಜಾಲತಾಣಗಳಿಂದಲೂ ಸಾಕಷ್ಟು ಹಣ ಸಂಪಾದಿಸಿದ್ದ. ಆದ್ರೆ ಲೈವ್ ವೇಳೆ  ಚೈನೀಸ್ ಫೈರ್‌ವಾಟರ್ ಮದ್ಯವನ್ನು ಸೇವಿಸಿದ್ದ. ಇದರಲ್ಲಿ ಶೇಕಡಾ 35 ರಿಂದ 60 ರಷ್ಟು ಆಲ್ಕೋಹಾಲ್ ಇರುತ್ತದೆ. ಇದನ್ನು ಅತಿಯಾಗಿ ಕುಡಿದು ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಚೀನಾದಲ್ಲಿ ಹಿಂದಿನ ವರ್ಷ ಇದು ಎರಡನೇ ಪ್ರಕರಣವಾಗಿತ್ತು. ಇದಕ್ಕೂ ಮುನ್ನ 34 ವರ್ಷದ ವ್ಯಕ್ತಿ ಕೂಡ ಏಳು ಬಾಟಲ್ ಬೈಜಿ ಕುಡಿದು ಸಾವನ್ನಪ್ಪಿದ್ದ. 

Latest Videos
Follow Us:
Download App:
  • android
  • ios