ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಯುವಕನ ಮೇಲೆ ಸಹ ಪ್ರಯಾಣಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆಯಿಂದ ತೀವ್ರ ಆತಂಕ್ಕೊಳಗಾದ ಯುವಕ ಇದೀಗ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಸಿಲ್ಚಾರ್ (ಆ.02) ಮುಂಬೈ-ಕೋಲ್ಕತಾ ಇಂಡಿಗೋ ವಿಮಾನದಲ್ಲಿ ನಡೆದ ಘಟನೆ ಹಾಗೂ ಬಳಿಕ ನಡೆದ ಬೆಳವಣಿಗೆ ಇದೀಗ ತೀರ್ವ ಚರ್ಚೆಗೆ ಗ್ರಾಸವಾಗಿದೆ. ಅಸ್ಸಾಂ ಮೂಲದ ಯುವಕ ಹುಸೈನ್ ಅಹಮ್ಮದ್ ಮುಜುಮ್ದಾರ್ ಮುಂಬೈನಿಂದ ಕೋಲ್ಕತಾ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ. ಇದರ ವಾಗ್ವಾದಗಳು ನಡೆದಿದೆ. ಹೀಗಾಗಿ ಸಹ ಪ್ರಯಾಣಿಕ ಹುಸೈನ್್ ಅಹಮ್ಮದ್ ಕಪಾಳಕ್ಕೆ ಹೊಡೆದಿದ್ದಾನೆ. ಈ ಘಟನೆಯಿಂದ ತೀವ್ರ ಆತಂಕಕ್ಕೊಳಗಾಗಿದ್ದ ಹುಸೈನ್ ಮೊಹಮ್ಮದ್ ಇದೀಗ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಕುಟುಂಬಸ್ಥರು ಈ ಕುರಿತು ದೂರು ನೀಡಿದ್ದು, ಮಗನ ಹುಡುಕಿಕೊಡುವಂತೆ ಪೋಷಕರು ಆಗ್ರಹಿಸಿದ್ದಾರೆ.

ಕಪಾಳಕ್ಕೆ ಭಾರಿಸಿದ ಸಹ ಪ್ರಯಾಣಿಕ

ಮುಂಬೈ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಸೈನ್ ಅಹಮ್ಮದ್ ಮೂಲತಃ ಅಸ್ಸಾಂ ಮೂಲದವನು. ತವರಿಗೆ ಮರಳಲು ಮುಂಬೈನಿಂದ ಕನೆಕ್ಟಿಂಗ್ ವಿಮಾನ ಹತ್ತಿದ್ದ. ಕೋಲ್ಕತಾಗೆ ಬಂದಿಳಿದು ಬಳಿಕ ಅಸ್ಸಾಂ ವಿಮಾನ ಏರಬೇಕಿತ್ತು. ಆದರೆ ಮುಂಬೈನಿಂದ ಪ್ರಯಾಣ ಬೆಳೆಸದ ಕೆಲ ಹೊತ್ತಲ್ಲೇ ವಿಮಾನದಲ್ಲಿ ತೀವ್ರ ವಾಗ್ವಾದಗಳು ನಡೆದಿದೆ. ಹೀಗಾಗಿ ವಿಮಾನ ಸಿಬ್ಬಂದಿಗಳು ಆಗಮಿಸಿ ಹುಸೈನ್‌ಗೆ ಬೇರೆ ಸೀಟಿನಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಇಷ್ಟೇ ಅಲ್ಲ, ಹುಸೈನ್ ಅಹಮ್ಮದ್‌ನ ಸೀಟಿನಿಂದ ಕರೆದುಕೊಂಡು ಹೋಗುತ್ತಿದ್ದಂತೆ ಸಹ ಪ್ರಯಾಣಿಕ ಹುಸೈನ್ ಮೊಹಮ್ಮದ್ ಮೇಲೆ ಹಲ್ಲೆ ನಡೆಸಿದ್ದಾನೆ.

ಸಹ ಪ್ರಯಾಣಿಕರ ಮೇಲೆ ಹಲವರ ಆಕ್ರೋಶ

ಸಹ ಪ್ರಯಾಣಿಕ ಹುಸೈನ್ ಅಹಮ್ಮದ್ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಭಾರಿ ವೈರಲ್ ಆಗಿತ್ತು. ವಿಮಾನದಲ್ಲಿನ ಇತರ ಪ್ರಯಾಣಿಕರು ಹಲ್ಲೆ ನಡೆಸಿದ ಪ್ರಯಾಣಿಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಗ್ವಾದ ಏನೇ ಇರಬಹುದು, ಆದರೆ ಹಲ್ಲೆ ನಡೆಸುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇತ್ತ ವಿಮಾನ ಸಿಬ್ಬಂದಿಗಳು ಸಹ ಪ್ರಯಾಣಿಕನ ವಿರುದ್ಧ ಆಕ್ರೋಶಗೊಂಡಿದ್ದಾರೆ.

Scroll to load tweet…

ಕೆನೆಕ್ಟಿಂಗ್ ಫ್ಲೈಟ್ ಹತ್ತಿಲ್ಲ ಹುಸೈನ್

ಪ್ರಯಾಣದ ನಡುವೆ ಹಲ್ಲೆ ಘಟನೆಯಿಂದ ಹುಸೈನ್ ತೀವ್ರ ಆತಂಕ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಕಾರಣ ಮುಂಬೈ ಕೋಲ್ಕತಾ ನಡುವಿನ ಪ್ರಯಾಣದಲ್ಲಿ ಈ ಘಟನೆ ನಡೆದಿದೆ. ಹುಸೈನ್ ಬೇರೆ ಸೀಟಿನಲ್ಲಿ ಕುಳಿತುಕೊಳ್ಳಲು ಸಿಬ್ಬಂದಿಗಳು ವ್ಯವಸ್ಥೆ ಮಾಡಿದ್ದರು. ಇದರಂತೆ ಹುಸೈನ್ ಬೇರೆ ಸೀಟಿನಲ್ಲಿ ಕುಳಿತುಕೊಂಡಿದ್ದಾರೆ. ಕೋಲ್ಕತಾದಲ್ಲಿ ಇಂಡಿಗೋ ವಿಮಾನ ಲ್ಯಾಂಡ್ ಆಗಿದೆ. ಆದರೆ ಕೋಲ್ಕತಾದಿಂದ ಅಸ್ಸಾಂಗೆ ತೆರಳುವ ವಿಮಾನವನ್ನು ಹುಸೈನ್ ಹತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದೆ.

ಸಿಲ್ಚಾರ್ ವಿಮಾನದಲ್ಲಿ ಕಾದು ಕುಳಿತ ಕುಟುಂಬಸ್ಥರಿಗೆ ಆಘಾತ

ಅಸ್ಸಾಂನ ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಹುಸೈನ್ ಅಹಮ್ಮದ್ ಸ್ವಾಗತಿಸಲು ಕುಟುಂಬಸ್ಥರು ಕಾದು ಕುಳಿತಿದ್ದರು. ಈ ವೇಳೆ ವಿಮಮಾನದಲ್ಲಿ ಈ ರೀತಿ ಹಲ್ಲೆ ನಡೆದಿರುವ ಪ್ರಕರಣ ಕುಟುಂಬಸ್ಥರಿಗೆ ತಿಳಿದಿರಲಿಲ್ಲ. ಹುಸೈನ್ ಆಗಮಿಸುವ ಅರ್ಧ ತಾಸು ಮೊದಲೇ ಕಟುಂಬಸ್ಥರು ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದಾರೆ. ಆದರೆ ಎಷ್ಟು ಹೊತ್ತಾದರೂ ಹುಸೈನ್ ಆಗಮಿಸಲೇ ಇಲ್ಲ. ಹೀಗಾಗಿ ಹುಸೈನ್ ಪ್ರಯಾಣಿಸಬೇಕಿದ್ದ ಕನೆಕ್ಟಿಂಗ್ ವಿಮಾನ ಲ್ಯಾಂಡಿಂಗ್ ಕುರಿತು ವಿಚಾರಸಿದ್ದಾರೆ. ಈ ವೇಳೆ ವಿಮಾನ ಯಶಸ್ವಿಯಾಗಿ ಲ್ಯಾಂಡ್ ಆಗಿರುವುದಾಗಿ ಹೇಳಿದ್ದಾರೆ. ಇತ್ತ ಹುಸೈನ್ ಸುಳಿವಿಲ್ಲ. ಹೀಗಾಗಿ ಕುಟುಂಬಸ್ಥರು ಆತಂಕಗೊಂಡು ದೂರು ದಾಖಲಿಸಿದ್ದಾರೆ

ಹುಸೈನ್ ಫೋನ್ ಸ್ವಿಚ್ ಆಫ್

ಇತ್ತ ಹುಸೈನ್ ಫೋನ್‌ಗೆ ಕರೆ ಮಾಡಿದರೆ ಸ್ವಿಚ್ ಆಗಿದೆ. ಹೀಗಾಗಿ ಪೋಷಕರ ಆತಂಕ ಹೆಚ್ಚಾಗಿದೆ. ಇತ್ತ ಬೋರ್ಡಿಂಗ್ ಕುರಿತು ಕೋಲ್ಕತಾದಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ತಮ್ಮ ಮಗನ ಹುಡುಕಿಕೊಂಡುವಂತೆ ಪೋಷಕರು ಮನವಿ ಮಾಡಿದ್ದಾರೆ.