ಟೇಕ್ಆಫ್‌ಗಾಗಿ ಬೋಯಿಂಗ್ ವಿಮಾನ ವೇಗವಾಗಿ ರನ್‌ವೇಯಲ್ಲಿ ಸಾಗುತ್ತಿದ್ದಂತೆ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ತುರ್ತು ನಿರ್ಗಮನದ ಮೂಲಕ ಪ್ರಯಾಣಿಕರು ಹೊರಕ್ಕೆ ಜಿಗಿದ ಘಟನೆ ನಡೆದಿದೆ.

ಡೆನ್ವರ್ (ಜು.27) ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಬೋಯಿಂಗ್ ವಿಮಾನದ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳು ಎದ್ದಿದೆ. ಇದರ ಬಳಿಕ ಹಲವು ವಿಮಾನಗಳು ತಾಂತ್ರಿಕ ದೋಷ, ತುರ್ತು ಲ್ಯಾಂಡಿಂಗ್ ಘಟನೆಗಳು ನಡೆದಿದೆ. ಇದೀಗ ಮತ್ತೊಂದು ಬೋಯಿಂಗ್ ವಿಮಾನದಲ್ಲಿ ಟೇಕ್ಆಫ್‌ಗೂ ಮುನ್ನ ದಿಢೀರ್ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ವಿಮಾನ ರನ್‌ವೇನಲ್ಲಿ ವೇಗವಾಗಿ ಸಾಗುತ್ತಿದ್ದಂತೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಪ್ರಯಾಣಿಕರು ತುರ್ತು ನಿರ್ಗಮನದ ಮೂಲಕ ಹೊರಕ್ಕೆ ಜಿಗಿದ ಘಟನೆ ಅಮೆರಿಕ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

173 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ

ಬೋಯಿಂಗ್ ಸಂಸ್ಥೆಯ 737 MAX 8 ವಿಮಾನ ಅಮೆರಿಕದ ಡೆನ್ವರ್ ವಿಮಾನ ನಿಲ್ದಾಣದಲ್ಲಿ 173 ಪ್ರಯಾಣಿಕರನ್ನು ಬೋರ್ಡಿಂಗ್ ಮಾಡಿತ್ತು. AA-3023 ವಿಮಾನ ಪ್ರಯಾಣಿಕರ ಬೋರ್ಡಿಂಗ್ ಬಳಿಕ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಯಾಮಿಗೆ ಪ್ರಾಯಣ ಬೆಳೆಸಲು ಸಜ್ಜಾಗಿತ್ತು. ಪ್ರಯಾಣಿಕರಿಗೆ ಸುರಕ್ಷತಾ ಮಾರ್ಗದರ್ಶಿಗಳ ಸೂಚನೆ ಬಳಿಕ ವಿಮಾನ ರನ್‌ವೇಯಲ್ಲಿ ವೇಗಾಗಿ ಸಾಗಿತ್ತು. ಈ ವೇಳೆ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.

ಹೊರಕ್ಕೆ ಜಿಗಿದ ಪ್ರಯಾಣಿಕರು, ಒರ್ವ ಪ್ರಯಾಣಿಕರಿಗೆ ಗಾಯ

ರನ್‌ವೇಯಲ್ಲಿ ವಿಮಾನ ಸಾಗುತ್ತದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತೀವ್ರಗೊಳ್ಳಲು ಆರಂಭಿಸಿದೆ. ಡೆನ್ವರ್ ಅಗ್ನಿಶಾಮಕ ದಳ ಅಲರ್ಟ್ ಸಂದೇಶ ನೀಡಿದೆ. ಇತ್ತ ತಕ್ಷಣ ಕಾರ್ಯಪ್ರವೃತ್ತರಾದ ಪೈಲೆಟ್ ವಿಮಾನ ನಿಲ್ಲಿಸಿದ್ದಾರೆ. ಅಷ್ಟೊತ್ತಿಗೆ ಬೆಂಕಿಯ ಜ್ವಾಲೆ ಹೆಚ್ಚಾಗಿದೆ. ಹೀಗಾಗಿ ತುರ್ತು ನಿರ್ಗಮನದ ಮೂಲಕ ಪ್ರಯಾಣಿಕರು ಹೊರಕ್ಕೆ ಜಿಗಿದಿದ್ದಾರೆ. ಸ್ಲೈಡಿಂಗ್ ಮೂಲಕ ಪ್ರಯಾಣಿಕರು ಹೊರ ಬಂದಿದ್ದಾರೆ. ಈ ವೇಳೆ ಒರ್ವ ಪ್ರಯಾಣಿಕರಿಗೆ ಗಾಯವಾಗಿದೆ. ಅದೃಷ್ಠವಶಾತ್ 173 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

Scroll to load tweet…

ಪ್ರಯಾಣಿಕರು ಇಳಿಯುತ್ತಿದ್ದಂತೆ ಹೆಚ್ಚಾದ ಬೆಂಕಿ

ರನ್‌ವೇಯಲ್ಲಿ ಸಾಗಿ ಕೆಲ ದೂರ ತೆರಳಿದ ಬಳಿಕ ವಿಮಾನ ತುರ್ತಾಗಿ ನಿಲ್ಲಿಸಲಾಗಿದೆ. ಹೀಗಾಗಿ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸುವ ವೇಳೆ ಬೆಂಕಿಯ ಜ್ವಾಲೆ ಹೆಚ್ಚಾಗಿದೆ. ಇತ್ತ ಪ್ರಯಾಣಿಕರು ಒಬ್ಬರ ಹಿಂದ ಒಬ್ಬರು ತುರ್ತಾಗಿ ವಿಮಾನದಿಂದ ಹೊರಬಂದಿದ್ದಾರೆ. ಆದರೆ ಕೆಲವೇ ಕ್ಷಣದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ.

ತಾಂತ್ರಿಕ ಸಮಸ್ಯೆ ಖಚಿತಪಡಿಸಿದ ಡೆನ್ವರ್ ವಿಮಾನ ನಿಲ್ದಾಣ

ಬೋಯಿಂಗ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಕುರಿತು ಡೆನ್ವರ್ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿದೆ. ತನಿಖೆ ನಡೆಯುತ್ತಿದೆ. ಲ್ಯಾಂಡಿಂಗ್ ಗೇರ್‌ನಲ್ಲಿ ಕೆಲ ಸಮಸ್ಯೆಗಳು ಕಂಡು ಬಂದಿದೆ. ಬೆಂಕಿ ಕಾಣಿಸಿಕೊಂಡು ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೃಷ್ಠವಶಾತ್ ಎಲ್ಲಾ ಪ್ರಯಾಣಿಕರು, ಕ್ಯಾಪ್ಟನ್ ಹಾಗೂ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೇಳಿದೆ.

ಬೋಯಿಂಗ್ ವಿಮಾನದಲ್ಲೇ ಬೆಂಕಿ ಹೊತ್ತಿಕೊಂಡ ಸಮಸ್ಯೆ ಕಾಣಿಸಿಕೊಂಡಿರುವುದು ಮತ್ತೆ ಸುರಕ್ಷತಾ ಮಾನದಂಡಗಳ ಕುರಿತು ಪ್ರಶ್ನೆ ಮೂಡುವಂತೆ ಮಾಡಿದೆ. ಭಾರತದ ಏರ್ ಇಂಡಿಯಾ ವಿಮಾನ ಪತನದ ತನಿಖೆ ನಡೆಯುತ್ತಿದೆ. ಇದು ಕೂಡ ಬೋಯಿಂಗ್ ಸಂಸ್ಥೆಯ ವಿಮಾನಾವಗಿತ್ತು. ಇಂಧನ ಪೂರೈಕೆ ಸ್ಥಗಿತಗೊಂಡ ಕಾರಣ ಏರ್ ಇಂಡಿಯಾ ವಿಮಾನ ಪತನಗೊಂಡಿತ್ತು. ಇಂಧನ ಪೂರೈಕೆ ಸ್ಥಿಗತ ಪೈಲೆಟ್ ತಪ್ಪಿನಿಂದ ಆಗಿದೆಯೋ ಅಥವಾ ತಾಂತ್ರಿಕ ಸಮಸ್ಯೆಯಿಂದ ಆಗಿದೆಯೋ ಅನ್ನೋದು ತನಿಖೆ ನಡೆಯುತ್ತಿದೆ.