ಕೈಯಲ್ಲಿ ಕೊರೋನಾ ಪಾಸಿಟಿವ್ ರಿಪೋರ್ಟ್ ಹಿಡ್ಕೊಂಡೇ ವಿಮಾನದಲ್ಲಿ ದೆಹಲಿಯಿಂದ ಕೊಲ್ಕತ್ತಾಗೆ ಬಂದ..!

ಕೊರೋನಾ ಲಕ್ಷಣ ಇಲ್ಲದವರೇ ಹೊರಗೆ ಓಡಾಡಲು ಹೆದರುತ್ತಿರುವ ಸಂದರ್ಭದಲ್ಲಿ ಇಲ್ಲೊಬ್ಬ ವ್ಯಕ್ತಿ ಪಾಸಿಟಿವ್ ಇದ್ರೂ ದೆಹಲಿಯಿಂದ ಕೊಲ್ಕತ್ತಾಗೆ ಪ್ರಯಾಣಿಸಿದ್ದಾನೆ. ಕೈಯಲ್ಲಿ ಕೊರೋನಾ ಪಾಸಿಟಿವ್ ರಿಪೋರ್ಟ್ ಹಿಡಿದುಕೊಂಡೇ ವಿಮಾನ ಹತ್ತಿದ್ದಾನೆ.

man flies from delhi to kolkata via guwahati with covid positive report

ಕೊಲ್ಕತ್ತಾ(ಜು.16): ಕೊರೋನಾ ಲಕ್ಷಣ ಇಲ್ಲದವರೇ ಹೊರಗೆ ಓಡಾಡಲು ಹೆದರುತ್ತಿರುವ ಸಂದರ್ಭದಲ್ಲಿ ಇಲ್ಲೊಬ್ಬ ವ್ಯಕ್ತಿ ಪಾಸಿಟಿವ್ ಇದ್ರೂ ದೆಹಲಿಯಿಂದ ಕೊಲ್ಕತ್ತಾಗೆ ಪ್ರಯಾಣಿಸಿದ್ದಾನೆ. ಕೈಯಲ್ಲಿ ಕೊರೋನಾ ಪಾಸಿಟಿವ್ ರಿಪೋರ್ಟ್ ಹಿಡಿದುಕೊಂಡೇ ವಿಮಾನ ಹತ್ತಿದ್ದಾನೆ.

ಜುಲೈ 14ರಂದು ದೆಹಲಿಯಿಂದ ಕೊಲ್ಕತ್ತಾ ತಲುಪಲು ಈ ವ್ಯಕ್ತಿ ಸ್ಪೈಸ್‌ ಜೆಟ್‌ ಹತ್ತಿದ್ದ. ದೆಹಲಿಯಿಂದ ಕೊಲ್ಕತ್ತಾಗೆ ನೇರ ವಿಮಾನ ರದ್ದಾದ ಕಾರಣ ಗುವಾಹಟಿ ಮೂಲಕ ಪ್ರಯಾಣಿಸಿದ್ದ.

ಕೊರೋನಾಕ್ಕೆ ದುಬಾರಿ ಔಷಧ, ಫಾರ್ಮಾಸ್ಯುಟಿಕಲ್‌ ಲಾಬಿಯಿಂದ ಅಗ್ಗದ ಮೆಡಿಸಿನ್ ಮೂಲೆಗುಂಪು!

ಕೊಲ್ಕತ್ತಾದಲ್ಲಿ ಇಳಿದ ಕೂಡಲೇ ತನ್ನನ್ನು ಕ್ವಾರೆಂಟೈನ್ ಮಾಡುವಂತೆ ಸಿಬ್ಬಂದಿಗೆ ಹೇಳಿದ್ದ. ಅಲ್ಲಿನ ನಿಲ್ದಾಣದ ಸಿಬ್ಬಂದಿ ಪರಿಶೀಲಿಸಿದರೂ ಆತನಲ್ಲಿ ಯಾವುದೇ ಕೊರೋನಾ ಲಕ್ಷಣ ಕಂಡು ಬಂದಿರಲಿಲ್ಲ. ಆತನ ದೇಹದ ಉಷ್ಣತೆಯೂ ನಾರ್ಮಲ್ ಆಗಿತ್ತು. ಹಾಗಾಗಿ ಸಿಬ್ಬಂದಿ ಆತನನ್ನು ಕ್ವಾರೆಂಟೈನ್‌ಗೆ ಕಳಿಸಲು ನಿರಾಕರಿಸಿದ್ದಾರೆ.

ಆದರೆ ಪ್ರಯಾಣಿಕ ನಿಲ್ದಾಣದಿಂದ ಹೊರಡಲು ನಿರಾಕರಿಸಿದ್ದ. ತನಗೆ ಕೆಮ್ಮು ಇದೆ ಕ್ವಾರೆಂಟೈನ್ ಮಾಡಿ ಎಂದು ಕೇಳಿಕೊಂಡಿದ್ದ. ನಂತರ ರಿಪೋರ್ಟ್ ನೋಡಿ ಎಂದು ಕೊರೋನಾ ಪಾಸಿಟಿವ್ ಬಂದ ರಿಪೋರ್ಟ್ ತೆಗೆದು ಸಿಬ್ಬಂದಿಗೆ ತೋರಿಸಿದ್ದ. ಒಂದು ಕ್ಷಣ ವಿಮಾನ ನಿಲ್ದಾಣ ಸಿಬ್ಬಂದಿಯೇ ಹೆದರಿಬಿದ್ದಿದ್ದಾರೆ.

ದೇಶದಲ್ಲಿ ಒಂದೇ ದಿನ ದಾಖಲೆಯ 32672 ಕೇಸು, 603 ಸಾವು!

ನಂತರ ಪ್ರಯಾಣಿಕನನ್ನು ರಾಜ್ಯ ಆರೋಗ್ಯ ಇಲಾಖೆ ಕೈಗೊಪ್ಪಿಸಲಾಗಿದೆ. ನಂತರ ವಿಮಾನ ನಿಲ್ದಾಣ ಸಮೀಪದ ಕೊರೋನಾ ಸೆಂಟರ್‌ಗೆ ಕಳುಹಿಸಲಾಗಿದೆ. ಇದೀಗ ಎರಡು ವಿಮಾನದಲ್ಲಿ ಪ್ರಯಾಣಿಸಿದ ಅಷ್ಟೂ ಜನರ ಮಾಹಿತಿಯನ್ನು ಏರ್‌ಲೈನ್ಸ್ ಸಿಬ್ಬಂದಿ ಗುರುತು ಮಾಡುತ್ತಿದ್ದಾರೆ.

Latest Videos
Follow Us:
Download App:
  • android
  • ios