ನವದೆಹಲಿ(ಜು.16): ಬುಧವಾರ ದೇಶದಲ್ಲಿ ದಾಖಲೆಯ ಪ್ರಮಾಣದಲ್ಲಿ ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ನಿನ್ನೆ 32672 ಹೊಸ ಕೇಸು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 963773ಕ್ಕೆ ತಲುಪಿದೆ.

ಇದೇ ವೇಳೆ ಮತ್ತೆ 603 ಜನರು ಸೋಂಕಿಗೆ ಬಲಿಯಾಗುವುದರೊಂದಿಗೆ ಈವರೆಗೆ ವೈರಸ್‌ಗೆ ಬಲಿಯಾದವರ ಸಂಖ್ಯೆ 24863ಕ್ಕೆ ತಲುಪಿದೆ. ಇದೇ ವೇಳೆ ಬುಧವಾರ 21415 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ಒಟ್ಟು ಚೇತರಿಕೆಯಾದವರ ಪ್ರಮಾಣ 610430ಕ್ಕೆ ಮುಟ್ಟಿದೆ.

ದೇಶದಲ್ಲಿ ಕೊರೋನಾ ಅಕ್ಟೋಬರಲ್ಲಿ ತಾರಕಕ್ಕೆ, ಮಾರ್ಚ್‌ವರೆಗೂ ಇರುತ್ತೆ!

ಮಹಾಸ್ಫೋಟ:

ಇನ್ನು ದೇಶದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಬುಧವಾರವೂ 7975 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ, ಜೊತೆಗೆ ರಾಜ್ಯದಲ್ಲಿ 233 ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ ತಮಿಳುನಾಡಿನಲ್ಲಿ 4496 ಹೊಸ ಕೇಸು ಪತ್ತೆಯಾಗಿದ್ದು, 68 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 3176 ಕೇಸು ಪತ್ತೆಯಾಗಿದ್ದು, 87 ಜನ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 1647 ಕೇಸು ದಾಖಲಾಗಿದ್ದು, 41 ಜನರು ಸಾವನ್ನಪ್ಪಿದ್ದಾರೆ.