ಲಾರಿಗೆ ಬೆಂಕಿ... ಸಮಯಪ್ರಜ್ಞೆ ಮೆರೆದು ಅನಾಹುತ ತಪ್ಪಿಸಿದ ವ್ಯಕ್ತಿ .. ವಿಡಿಯೋ ವೈರಲ್‌

  • ಒಣಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
  • ಸಮಯಪ್ರಜ್ಞೆ ಮೆರೆದು ಲಾರಿಗೆ ಹಾನಿಯಾಗದಂತೆ ತಡೆದ ವ್ಯಕ್ತಿ
  • ಕೇರಳದ ಕೊಜಿಕೋಡ್‌ನಲ್ಲಿ ಘಟನೆ
man drives lorry to safety after rice straw load catches fire in Kerala akb

ಕೊಜಿಕೋಡ್‌(ಫೆ.1): ಒಣಹುಲ್ಲು ಸಾಗಿಸುವ ವೇಳೆ ಬೆಂಕಿ ಏನಾದರು ತಗುಲಿದರೆ ಇಡೀ ಲಾರಿಯೇ ಬೆಂಕಿಗಾಹುತಿಯಾಗುವುದನ್ನು ನೀವು ಕೇಳಿರಬಹುದು ನೋಡಿರಬಹುದು. ಒಣಹುಲ್ಲು ಆಗಿರುವುದರಿಂದ ಅಷ್ಟು ಕ್ಷಿಪ್ರವಾಗಿ ಬೆಂಕಿ ಹಬ್ಬಿಕೊಳ್ಳುವುದು. ಆದರೆ ಕೇರಳದಲ್ಲಿ ಒಣಹುಲ್ಲಿಗೆ ಬೆಂಕಿ ತಗುಲಿದರು ವ್ಯಕ್ತಿಯೊಬ್ಬನ ಜಾಣತನದಿಂದಾಗಿ ಒಣಹುಲ್ಲು ಸಾಗಿಸುತ್ತಿದ್ದ ಲಾರಿಗೆ ಮಾತ್ರ ಯಾವುದೇ ಹಾನಿಯಾಗಿಲ್ಲ. 

ಕೇರಳದ ಕೊಜಿಕೋಡ್‌ನಲ್ಲಿ ಒಣಹುಲ್ಲು ಸಾಗಿಸುತ್ತಿದ್ದ ಲಾರಿಗೆ ಹೈಟನ್ಶನ್‌ ವೈರ್‌ ಸ್ಪರ್ಶಿಸಿದ ಪರಿಣಾಮ ಬೆಂಕಿ ತಗುಲಿದೆ. ಆದರೆ ಈ ವೇಳೆ ಚಾಲಕ ಲಾರಿಯಿಂದ ಇಳಿದು ಏನು ಮಾಡಲಾಗದೇ ಅಸಹಾಯಕನಾಗಿದ್ದಾನೆ. ಆದರೆ ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬರು ಸಮಯಪ್ರಜ್ಞೆ ಮೆರೆದಿದ್ದು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. 

ಭಾನುವಾರ ಮಧ್ಯಾಹ್ನ  12.30ರ ಸುಮಾರಿಗೆ ಅಂತಾರಾಜ್ಯ ಸಾಗಣೆಗೆ ಪರವಾನಗಿ ಹೊಂದಿರುವ ಲಾರಿಗೆ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಚಾಲಕ ಅಸಹಾಯಕನಾಗಿದ್ದಾನೆ. ಆದರೆ ಸ್ಥಳೀಯವಾಗಿ ಶಾಜಿ ಪಪ್ಪನ್‌ ಎಂದು ಕರೆಯಲ್ಪಡುವ ಶಾಜಿ ವರ್ಗಿಸ್‌ (Shaji Varghese)ಎಂಬುವರು ಕೂಡಲೇ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.  ಬಳಿಕ ಬೆಂಕಿ ಹೊತ್ತಿ ಉರಿಯುತ್ತಿದ್ದ ಲಾರಿಗೆ ಹತ್ತಿದ ಅವರು ಅದನ್ನು ಸಮೀಪದ ಮೈದಾನವೊಂದಕ್ಕೆ ತೆಗೆದುಕೊಂಡು ಹೋಗಿದ್ದು, ಅಲ್ಲಿ ಹೊತ್ತಿ ಉರಿಯುತ್ತಿದ್ದ ಹುಲ್ಲನ್ನು ಲಾರಿಯಿಂದ ಕೆಳಗೆ ಬೀಳಿಸುವ ಸಲುವಾಗಿ ಜಿಗ್‌ಜಾಗ್ (Zigzag) ಸ್ಟೈಲ್‌ನಲ್ಲಿ ಗಾಡಿ ಓಡಿಸಿದ್ದಾರೆ. ಪರಿಣಾಮ ಎಷ್ಟು ಸಾಧ್ಯವೋ ಅಷ್ಟು ಒಣ ಹುಲ್ಲು ಲಾರಿಯಿಂದ ಕೆಳಗೆ ಬಿದ್ದಿದೆ. ಅಷ್ಟೊತ್ತಿಗೆ ಮುಕ್ಕೊಮ್‌ನಿಂದ (Mukkom) ಅಗ್ನಿಶಾಮಕ ವಾಹನವು ಸ್ಥಳಕ್ಕೆ ಆಗಮಿಸಿದ್ದು ಬಳಿಕ ಅಳಿದುಳಿದ ಸ್ವಲ್ಪ ಬೆಂಕಿಯನ್ನು ಅವರು ನಂದಿಸಿದ್ದಾರೆ. 

ವಿದ್ಯುತ್‌ ತಂತಿ ತಗುಲಿ ಬೆಂಕಿ: ಮೇವು ತುಂಬಿದ್ದ ಲಾರಿ ಧಗ ಧಗ

ನನ್ನ ಹಳ್ಳಿಯಲ್ಲಿ ಮತ್ತು ವಿದೇಶದಲ್ಲಿದ್ದಾಗ ಇದೇ ರೀತಿಯ ಅಪಾಯಕಾರಿ ಸನ್ನಿವೇಶಗಳನ್ನು ನಿಭಾಯಿಸುವಲ್ಲಿ ನನ್ನ ಹಿಂದಿನ ಅನುಭವಗಳು ಈ ಸವಾಲನ್ನು ಎದುರಿಸಲು ನನಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ. 25 ವರ್ಷಗಳಿಂದ ವಿವಿಧೆಡೆ ಭಾರೀ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಜಿ ಹೇಳಿದರು. ಇವರು ಘಟನೆ ನಡೆಯುವ ಕೆಲ ನಿಮಿಷಗಳ ಹಿಂದೆ  ತಮ್ಮ ವ್ಯಾಪಾರಿ ಸ್ನೇಹಿತರಿಗೆ ಊಟ ತಲುಪಿಸುವ ಸಲುವಾಗಿ ಅಲ್ಲಿಗೆ ಬಂದಿದ್ದರು. ಈ ಘಟನೆಯ ಬಳಿಕ ನನಗೆ ಅನೇಕರು ಕರೆ ಮಾಡಿ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಎಂಟು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನಿಸಿದ್ದಾರೆ ಎಂದರು. 

ಸುಮಾರು ಏಳು ವರ್ಷಗಳ ಹಿಂದೆ ನಾನು ವಿವಿಧ ಸ್ಥಳೀಯ ರಕ್ಷಣಾ ಮತ್ತು ಪರಿಹಾರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆ. ನನ್ನ ಕುಟುಂಬ ಸದಸ್ಯರು ಆರಂಭದಲ್ಲಿ ಇಂತಹ ಸಾಹಸಮಯ ಚಟುವಟಿಕೆಗಳನ್ನು ವಿರೋಧಿಸಿದರೂ, ಸಕಾರಾತ್ಮಕ ಫಲಿತಾಂಶಗಳನ್ನು ನೋಡಿದ ನಂತರ ಅವರೂ ನನಗೆ ಬೆಂಬಲವಾಗಿ ನಿಂತರು ಎಂದು  ಅವರು ಹೇಳಿದರು. ಕೆಲ ವರ್ಷಗಳ ಹಿಂದೆ ಖ್ಯಾತ ಮಲಯಾಳಂ ಚಿತ್ರ ಆಡು ಬಿಡುಗಡೆಯಾದಾಗ ನಟ ಜಯಸೂರ್ಯ (Jayasurya) 'ಶಾಜಿ ಪಪ್ಪನ್' ಎಂಬ ಪಾತ್ರದಲ್ಲಿ ನಟಿಸಿದ್ದರು. ಇದನ್ನು ನೋಡಿದ ನನ್ನ ಕೆಲ ಸ್ನೇಹಿತರು ನನಗೆ ಆ ಅಡ್ಡಹೆಸರಿನಿಂದ ಕರೆಯಲು ಶುರು ಮಾಡಿದರು ಎಂದು ಶಾಜಿ ನೆನಪಿಸಿಕೊಂಡರು.

ಬಹುಮಹಡಿ ಕಟ್ಟಡಕ್ಕೆ ಬೆಂಕಿ : ಪ್ರಾಣ ಪಣಕ್ಕಿಟ್ಟು ಯುವತಿಯ ರಕ್ಷಿಸಿದ ಇಬ್ಬರು ಯುವಕರು

ಇನ್ನು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮುಕ್ಕಾಂನ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಅಧಿಕಾರಿಗಳು, 45 ವರ್ಷದ ವ್ಯಕ್ತಿಯ ಪ್ರಯತ್ನದಿಂದಾಗಿ ಯಾವುದೇ ದೊಡ್ಡ ನಷ್ಟವಿಲ್ಲದೆ ಬೆಂಕಿ ಸಮಾಪ್ತಿಯಾಗಿದೆ ಎಂದು ಹೇಳಿದರು. ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ಪಯಸ್ ಆಗಸ್ಟಿನ್ (Pius Augustine) ಪ್ರಕಾರ, ಘಟನೆ ನಡೆದ ಸ್ಥಳವು ಅಗ್ನಿಶಾಮಕ ಠಾಣೆಯಿಂದ ಸುಮಾರು 20 ಕಿಮೀ ದೂರದಲ್ಲಿದೆ. ಅಗ್ನಿಶಾಮಕ ದಳ ಬರುವವರೆಗೂ ಏನೂ ಮಾಡದೇ ಇದ್ದಿದ್ದರೆ ಅದರ ಪರಿಣಾಮ ಊಹಿಸಲೂ ಆಗುತ್ತಿರಲಿಲ್ಲ ಎಂದರು.

Latest Videos
Follow Us:
Download App:
  • android
  • ios