Asianet Suvarna News Asianet Suvarna News

ಬಹುಮಹಡಿ ಕಟ್ಟಡಕ್ಕೆ ಬೆಂಕಿ : ಪ್ರಾಣ ಪಣಕ್ಕಿಟ್ಟು ಯುವತಿಯ ರಕ್ಷಿಸಿದ ಇಬ್ಬರು ಯುವಕರು

  • ಹೊತ್ತಿ ಉರಿಯುತ್ತಿದ್ದ ಬಹುಮಹಡಿ ಕಟ್ಟಡದಲ್ಲಿದ್ದ ಯುವತಿಯ ರಕ್ಷಣೆ
  • ಕಿಟಕಿಯ ಮೂಲಕ ಯುವತಿಯ ರಕ್ಷಿಸಿದ ಇಬ್ಬರು ಯುವಕರು
  • ಯುವಕರ ಸಾಹಸ ಕ್ಯಾಮರಾದಲ್ಲಿ ಸೆರೆ, ವಿಡಿಯೋ ವೈರಲ್
rescue of a girl by two daring men from burning building akb
Author
Bangalore, First Published Jan 30, 2022, 4:58 PM IST

ರಷ್ಯಾ(ಜ.30) ಹೊತ್ತಿ ಉರಿಯುತ್ತಿದ್ದ ಬಹುಮಹಡಿ ಕಟ್ಟಡವೊಂದರಿಂದ ಯುವತಿಯೊಬ್ಬರನ್ನು ಇಬ್ಬರು ಯುವಕರು ಸೇರಿ ರಕ್ಷಣೆ ಮಾಡಿದ್ದು, ಯುವಕರ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಂಬತ್ತನೇ ಮಹಡಿಯಲ್ಲಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಬಹುತೇಕ ಬೆಂಕಿ ಆವರಿಸಿತ್ತು. ಬೆಂಕಿಯ ಕೆನ್ನಾಲಿಗೆ ಮತ್ತು ತೀವ್ರವಾದ ಹೊಗೆಯಿಂದಾಗಿ ಒಳಗೆ ಸಿಲುಕಿದ್ದ ಹುಡುಗಿಗೆ ಹೊರಗೆ ಬರುವಂತಹ ಎಲ್ಲಾ ಮಾರ್ಗಗಳು ಬಂದ್‌ ಆಗಿದ್ದವು. ಇಂತಹ ಬಿಕ್ಕಟ್ಟಿನ ಕ್ಷಣದಲ್ಲಿ ಇಬ್ಬರು ಯುವಕರು ಸಾಹಸ ಮೆರೆದಿದ್ದು,  ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಯುವತಿಯನ್ನು ರಕ್ಷಿಸಿದ್ದಾರೆ.

ರಷ್ಯಾದಲ್ಲಿ ಈ ಘಟನೆ ನಡೆದಿದೆ. ಯುವಕರು ಹುಡುಗಿಯನ್ನು ರಕ್ಷಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ  ಬೆಂಕಿಗಾಹುತಿಯಾದ ಗಗನಚುಂಬಿ ಕಟ್ಟಡದಲ್ಲಿ ಕಿಟಕಿಯ ಮೂಲಕ ಒಂದೆಡೆ ದಟ್ಟ ಹೊಗೆ ಬರುತ್ತಿದೆ. ಈ ವೇಳೆ ಕೆಳಗಿನ ಮಹಡಿಯಲ್ಲಿದ್ದ ಯುವಕರಿಬ್ಬರು ಕಿಟಕಿಯ ಮೂಲಕ ಯುವತಿಗೆ ಸಹಾಯ ಮಾಡಿದ್ದು, ಬಾಲಕಿ ಹೊಗೆಯ ನಡುವೆಯೂ ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ಇಳಿದು ಹೊರ ಬರಲು ಯತ್ನಿಸುತ್ತಿದ್ದಾಳೆ. 

52 ಸೆಕೆಂಡುಗಳ ಈ ವೀಡಿಯೊ ಇದಾಗಿದೆ. ವಿಡಿಯೋದಲ್ಲಿ, ಸ್ವಲ್ಪ ಆಯತಪ್ಪಿದರು  ಕೆಳಗೆ ಬಿದ್ದು ಪ್ರಾಣ ಹೋಗಬಹುದಾದಷ್ಟು ಎತ್ತರದಲ್ಲಿರುವ ಕಿಟಕಿಯಲ್ಲಿ ನಿಂತ ಈ ಇಬ್ಬರು ಯುವಕರು ಯುವತಿಯನ್ನು ನಿಧಾನಕ್ಕೆ ಕೆಳಗಿಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್‌ ಆಗಿದೆ. 

ಮುಂಬೈನ 20 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ದುರಂತ, 7 ಮಂದಿ ಸುಟ್ಟು ಕರಕಲು!

ಮಾಸ್ಕೋದ (Moscow) ಡೊರೊಜ್ನಾಯಾ ಸ್ಟ್ರೀಟ್‌ನಲ್ಲಿರುವ (Dorozhnaya) ಅಪಾರ್ಟ್‌ಮೆಂಟ್‌ನಲ್ಲಿ ನಿನ್ನೆ (ಜನವರಿ 29 )ರ ಸಂಜೆ ನಡೆದ ಘಟನೆ ಇದಾಗಿದೆ. ಬೆಂಕಿಯನ್ನು ನಂದಿಸುವ ಪ್ರಯತ್ನದ ನಡುವೆಯೂ ಕಟ್ಟಡದ ಒಂಭತ್ತನೇ ಮಹಡಿಯ ಪೂರ್ತಿ ವೇಗವಾಗಿ ಬೆಂಕಿ ಆವರಿಸಿತ್ತು. 

ಮಾಧ್ಯಮದ ಪ್ರಾಥಮಿಕ ವರದಿಯ ಪ್ರಕಾರ ಬೆಂಕಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಮತ್ತು ಮನೆಯಿಂದ 12 ಜನರನ್ನು ರಕ್ಷಿಸಲಾಗಿದೆ., ಅವರೆಲ್ಲರನ್ನು ವೈದ್ಯರು ಪರೀಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು  ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಹುಡುಗಿಯನ್ನು ರಕ್ಷಿಸಿದ ವ್ಯಕ್ತಿಗಳು ಈ ವೇಳೆ ಗಾಯಗೊಂಡರು ಮತ್ತು ಅವರಿಗೆ ಸ್ವಲ್ಪ ಸುಟ್ಟಗಾಯಗಳಾಗಿದೆ ಎಂದು ಹೇಳಿದರು.

ಒಡಲೊಳಗೆ ಬೆಂಕಿಯುಂಡೆ ಇಟ್ಟುಕೊಂಡು ಉರಿಯುತ್ತಿರುವ ಭೂಮಿ... ವಿಡಿಯೋ ವೈರಲ್

ಪ್ರಸ್ತುತ ರಷ್ಯಾದ ತುರ್ತು ಪರಿಸ್ಥಿತಿಗಳ ಸಚಿವಾಲಯವು ವೀಡಿಯೊದಲ್ಲಿ ಕಂಡುಬರುವ ಇಬ್ಬರು ವ್ಯಕ್ತಿಗಳನ್ನು ಅವರು ಮಾಡಿದ ಸಾಹಸಕ್ಕಾಗಿ ಧನ್ಯವಾದ ಹೇಳಲು ಹುಡುಕುತ್ತಿದೆ. ಹುಡುಗಿಯನ್ನು ರಕ್ಷಿಸಿದವರಲ್ಲಿ ಒಬ್ಬರು 40 ವರ್ಷದ ಕಾನ್ಸ್ಟಾಂಟಿನ್ (Konstantin) ಎಂದು ತಿಳಿದು ಬಂದಿದೆ. ಅವರು ಕೆಳಗಿನ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ಉರಿಯುತ್ತಿರುವ ಅಪಾರ್ಟ್‌ಮೆಂಟ್‌ನಿಂದ ಜನರ ಸಹಾಯಕ್ಕೆ ಮೊದಲು ಬಂದವರು ಅವರು ಎಂದು ಸ್ಥಳೀಯ ಮಾಧ್ಯಮ ತಿಳಿಸಿದೆ.

ಇನ್ನು ಈ ದೊಡ್ಡ ಬೆಂಕಿ ಅನಾಹುತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿತ್ತು ಎಂದು ತಿಳಿದು ಬಂದಿದೆ. ಬೆಂಕಿಯಂತಹ ಬಿಕ್ಕಟ್ಟಿನ ಕ್ಷಣಗಳಲ್ಲಿ, ಹೆಚ್ಚಿನ ಜನರು  ತಮ್ಮ ರಕ್ಷಣೆಯನ್ನು ಮೊದಲು ನೋಡಿಕೊಳ್ಳುತ್ತಾರೆ. ಆದರೆ ಈ ಇಬ್ಬರು ವ್ಯಕ್ತಿಗಳು ತಮ್ಮ ಪ್ರಾಣದ ಹಂಗನ್ನು ತೊರೆದು ಈ ಯುವತಿಯನ್ನು ರಕ್ಷಿಸಿದ್ದಾರೆ. 
 

Follow Us:
Download App:
  • android
  • ios