ಹಾವು ಕೊಂದವನಿಗೆ ಒಂದೇ ಗಂಟೆಯಲ್ಲಿ ಎದುರಾಯ್ತು ಶಾಪ, ನರಳಾಡಿ ಪ್ರಾಣಬಿಟ್ಟ ಯವಕ!

ಹೊಲದಲ್ಲಿ ಪ್ರತ್ಯಕ್ಷವಾದ ಹಾವನ್ನು ಯುವಕ ಬಡಿಗೆಯಿಂದ ಹೊಡೆದಿದ್ದಾನೆ. ಬಳಿಕ ಕಾಲಿನಿಂದ ಒದ್ದಿದ್ದಾನೆ. ಅಷ್ಟರಲ್ಲೇ ಹಾವು ಸತ್ತಿದೆ. ಇದಾದ ಒಂದೇ ಗಂಟೆಯಲ್ಲಿ ಯುವಕ ನರಳಾಡಿ ಪ್ರಾಣಬಿಟ್ಟ ಘಟನೆ ನಡೆದಿದೆ.

Man dies from snake bite soon after he kills another snake in paddy field Uttar Pradesh ckm

ರಾಯಬರೇಲಿ(ಅ.31) ಕೆಲವರಿಗೆ ಹಾವು ಕಂಡೊಡನೆ ಸಾಯಿಸುವ ಅಭ್ಯಾಸವಿರುತ್ತೆ. ಹಾವು ಯಾವುದೇ ಅಪಾಯ ಮಾಡದಿದ್ದರೂ ಹಾವಿನ ಮೇಲೆ ಕ್ರೌರ್ಯ ಎಸಗುತ್ತಾರೆ. ಹೀಗೆ ಹಾವನ್ನು ಬಡಿಗೆಯಿಂದ ಹೊಡೆದು, ಬಳಿಕ ಕಾಲಿನಿಂದ ಒದ್ದ ಯುವನೊಬ್ಬ ಒಂದೇ ಗಂಟೆಯಲ್ಲಿ ನರಳಾಡಿ ಪ್ರಾಣಬಿಟ್ಟ ಘಟನೆ ಉತ್ತರ ಪ್ರದೇಶ ರಾಯಬರೇಲಿಯಲ್ಲಿ ನಡೆದಿದೆ. ಯವುಕನ ಕುಟುಂಬ ಶೋಕಸಾಗರದಲ್ಲಿ ಮುಳುಗಿದ್ದರೆ, ಈ ಘಟನೆ ಇಡೀ ಗ್ರಾಮಕ್ಕೆ ಆಘಾತ ತಂದಿದೆ. ಯುವಕನ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಅಷ್ಟಕ್ಕೂ ಈ ಘಟನೆ ನಡೆದಿದ್ದೇ ರೋಚಕ.

ರಾಯಬರೇಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಹೊಲದಲ್ಲಿ ಭತ್ತದ ಕಟಾವು ಸೇರಿದಂತೆ ಕೆಲಸಕ್ಕಾಗಿ 32 ವರ್ಷದ ಗೋವಿಂದ್ ಕಶ್ಯಪ್ ಹಾಗು ಅತುಲ್ ಸಿಂಗ್ ತೆರಳಿದ್ದಾರೆ. ಹೊಲದಲ್ಲಿ ಉತ್ತಮ ಫಸಲು ಬಂದಿದ್ದ ಭತ್ತ ಕಟಾವು ಮಾಡಲು ಆರಂಭಿಸಿದ್ದಾರೆ. ಅತುಲ್ ಸಿಂಗ್ ಹಾಗೂ ಗೋವಿಂದ್ ಕಶ್ಯಪ್ ಇಬ್ಬರೂ ಕೆಲಸದಲ್ಲಿ ನಿರತರಾಗಿದ್ದಾರೆ. ಮಧ್ಯಾಹ್ನದ ವೇಳೆ ಕಟಾವು ಮಾಡುತ್ತಿದ್ದ ಅತುಲ್ ಸಿಂಗ್ ಹಾವೊಂದನ್ನು ಕಂಡಿದ್ದಾರೆ. ಭತ್ತದ ಗದ್ದೆಯಲ್ಲಿ ಹಾವೊಂದು ಮುದುಡಿಕೊಂಡು ಮಲಗಿತ್ತು. ಹಾವು ನೋಡಿ ಹೌಹಾರಿದ ಅತುಲ್ ಸಿಂಗ್ ಮಾರುದ್ದ ದೂರ ಹೋಗಿದ್ದಾರೆ.

ಪ್ರತಿ ದಿನ ಆಹಾರ ನೀಡಿ ಆರೈಕೆ ಮಾಡುತ್ತಿದ್ದ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಹೆಬ್ಬಾವು!

ಅತುಲ್ ಸಿಂಗ್ ಹೌಹಾರಿದ್ದನ್ನು ನೋಡಿ ಹತ್ತಿರಕ್ಕೆ ಬಂದ ಗೋವಿಂದ್ ಕಶ್ಯಪ್ ಹಾವನ್ನು ಪತ್ತೆ ಹಚ್ಚಿದ್ದಾನೆ. ಅಷ್ಟೊತ್ತಿಗೆ ಹಾವಿಗೆ ಭಯ ಶುರುವಾಗಿದೆ. ಹಾವು ವೇಗವವಾಗಿ ಸರಿಯಲು ಪ್ರಯತ್ನಿಸಿದೆ. ಅಷ್ಟರಲ್ಲೇ ಗೋವಿಂದ್ ಕಶ್ಯಪ್ ಬಡಿಗೆಯಿಂದ ಹಾವಿಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಹಾವು ಮತ್ತೆ ಸರಿಯಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಿಲ್ಲ. ಇತ್ತ ಗೋವಿಂದ್ ಕಶ್ಯಪ್ ತಾನು ಕೆಲಸಕ್ಕೆ ಧರಿಸಿದ್ದ ಶೂನಿಂದ  ಹಾವಿಗೆ ಒದ್ದು ಸಾಯಿಸಿದ್ದಾನೆ.

ಹಾವನ್ನು ಸಾಯಿಸುವಷ್ಟರಲ್ಲಿ ಊಟಕ್ಕೆ ಸಮಯ ಆಗಿದೆ. ಹೀಗಾಗಿ ಅತುಲ್ ಸಿಂಗ್ ಹಾಗೂ ಗೋವಿಂದ್ ಕಶ್ಯಪ್ ಊಟಕ್ಕಾಗಿ ಹೊಲದಿಂದ ಮನೆಯತ್ತ ತೆರಳಿದ್ದಾರೆ. ಇತ್ತ ಸತ್ತ ಹಾವನ್ನು ಹೊಲದಲ್ಲೇ ಬಿಟ್ಟು ಇಬ್ಬರು ತೆರಳಿದ್ದಾರೆ. ಊಟ ಮಾಡಿದ ಬಳಿಕ ಅತುಲ್ ಸಿಂಗ್ ಕೆಲ ಹೊತ್ತು ವಿಶ್ರಾಂತಿಗೆ ಜಾರಿದ್ದಾನೆ. ಆದರ ಗೋವಿಂದ್ ಕಶ್ಯಪ್ ತ್ವರಿತವಾಗಿ ಮತ್ತೆ ಭತ್ತ ಕಟಾವು ಮಾಡಲು ಹೊಲಕ್ಕೆ ಆಗಮಿಸಿದ್ದಾನೆ. ಅಷ್ಟೊತ್ತಿಗೆ ಪಕ್ಕದ ಹೊಲದಲ್ಲಿನ ಕೆಲಸಗಾರರು ಮನೆಗೆ ತೆರಳಿದ್ದಾರೆ. ಇತ್ತ ಅಕ್ಕ ಪಕ್ಕದ ಹೊಲದಲ್ಲೂ ಯಾರೂ ಇರಲಿಲ್ಲ. ಗೋವಿಂದ್ ಕಶ್ಯಪ್ ಭತ್ತ ಕಟಾವು ಮಾಡಲು ಆರಂಭಿಸಿದ್ದಾನೆ.

ಕಟಾವ್ ಮಾಡುತ್ತಿದ್ದಂತೆ ಮತ್ತೊಂದು ಹಾವು ಸದ್ದಿಲ್ಲದೇ ಪ್ರತ್ಯಕ್ಷವಾಗಿದೆ. ಈ ಹಾವು ಗೋವಿಂದ್ ಕಶ್ಯಪ್‌ಗೆ ಕಚ್ಚಿದೆ. ಕಚ್ಚಿದ ಹಾವು ಭತ್ತದ ಕಟಾವಿನೊಳಗಿಂದ ಸಾಗಿದೆ. ಇತ್ತ ಕಾವು ಕಚ್ಚುತ್ತಿದ್ದಂತೆ ಗೋವಿಂದ್ ಕಶ್ಯಪ್ ಆತಂಕಗೊಂಡಿದ್ದಾನೆ. ತಕ್ಷಣವೇ ಮನೆಯತ್ತ ತೆರಳಲು ಮುಂದಾಗಿದ್ದಾನೆ. ಆದರೆ ವಿಷಕಾರಿ ಹಾವಾಗಿದ್ದ ಕಾರಣ ಗೋವಿಂದ್ ಕಷ್ಯಪ್ ಮನೆಗೆ ತಲುಪಲಿಲ್ಲ. ಇದರ ನಡುವೆ ಗೋವಿಂದ್ ಕಶ್ಯಪ್ ಅಸ್ವಸ್ಥಗೊಂಡು ಕುಸಿದಿದ್ದಾನೆ. ನೆರವಿಗಾಗಿ ಕೂಗಿದ್ದಾನೆ. ಆದರೆ ಕೆಲ ಹೊತ್ತಲ್ಲೇ ಅಸ್ವಸ್ಥಗೊಂಡಿದ್ದಾನೆ.

ಇತ್ತ ಮಧ್ಯಾಹ್ನದ ಊಟ ಹಾಗೂ ವಿಶ್ರಾಂತಿ ಮುಗಿಸಿ ಹೊಲಕ್ಕೆ ಮರಳುವಾಗ ಗೋವಿಂದ್ ಕಶ್ಯಪ್ ದಾರಿ ಮಧ್ಯೆ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣವೇ ಕುಟುಂಬಸ್ಥರಿಗೆ ಮಾಹಿತಿ ನೀಡಿ ಗೋವಿಂದ್ ಕಶ್ಯಪ್‌ನ ಆಸ್ಪತ್ರೆ ದಾಖಲಿಸಿದ್ದಾರೆ. ಅಷ್ಟರೊಳಗೆ ಕಾಲ ಮಿಂಚಿತ್ತು. ಇದೀಗ ಕುಟುಂಬಸ್ಥರ ಆಕ್ರಂದನ ಜೋರಾಗಿದೆ. ಇತ್ತ ಸತ್ತ ಹಾವಿನ ಪಕ್ಕ ಬೇರೊಂದು ಹಾವು ಹಲವು ಹೊತ್ತಿನಿಂದ ಸರಿಯುತ್ತಿತ್ತು ಎಂದು ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ಹೇಳಿದ್ದಾರೆ. ಹೀಗಾಗಿ ಮತ್ತೊಂದು ಹಾವು ಸೇಡು ತೀರಿಸಿಕೊಂಡಿದೆ ಅನ್ನೋ ಮಾತುಗಳು ಗ್ರಾಮಸ್ಥರು ಹೇಳುತ್ತಿದ್ದಾರೆ.

172 ಸಲ ನಾಗ ಕಚ್ಚಿದ್ರೂ ಸಾಯ್ಲಿಲ್ಲ, ದೇಹದಲ್ಲಿತ್ತು ಹಾವಿನ ವಿಷ !

 

Latest Videos
Follow Us:
Download App:
  • android
  • ios