ಹೆಲಿಕಾಪ್ಟರ್ ಮೂಲಕ ಬಂದ ವ್ಯಕ್ತಿ ಕಸದ ಬುಟ್ಟಿಗೆ ಕಸ ಎಸೆದು ಮರಳಿದ ವಿಡಿಯೋ ಒಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಭಾರಿ ಕಮೆಂಟ್ ವ್ಯಕ್ತವಾಗುತ್ತಿದೆ. ದೇವರೇ ನನ್ನನ್ನು ಇಷ್ಟು ಶ್ರೀಮಂತ ಮಾಡಿಬಿಡು ಎಂದು ಹಲವರು ಬೇಡಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ಭಾರಿ ಸಂಚಲನ ಸೃಷ್ಟಿಸುತ್ತದೆ. ಇದೀಗ ಹೆಲಿಕಾಪ್ಟರ್ ವಿಡಿಯೋ ಒಂದು ವೈರಲ್ ಆಗಿದೆ. ವ್ಯಕ್ತಿಯೊಬ್ಬ ಹೆಲಿಕಾಪ್ಟರ್ ಮೂಲಕ ಬಂದು ಕಸದ ಬುಟ್ಟಿಗೆ ಕಸ ಎಸೆದು ಮರಳಿದ್ದಾನೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ದೇವರೇ ನನ್ನನ್ನು ಇಷ್ಟು ಶ್ರೀಮಂತನಾಗಿ ಮಾಡಿಬಿಡು, ನಾನು ಹೆಲಿಕಾಪ್ಟರ್ ಮೂಲಕ ಕಸ ಎಸೆಯುವಂತಾಗಲಿ ಎಂದು ಹಲವರು ಬೇಡಿಕೊಂಡಿದ್ದಾರೆ.
ಹೆಲಿಕಾಪ್ಟರ್ ಪೈಲೆಟ್ ಬಳಿ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾನೆ. ನೆಲದ ಮೇಲೆ ಸಾಮಾನ್ಯ ಕಸದ ಬುಟ್ಟಿಯನ್ನು ಇಡಲಾಗಿತ್ತು. ಈ ಬುಟ್ಟಿಗೆ ಕಸ ಎಸೆಯಲು ಹೆಲಿಕಾಪ್ಟರ್ ಮೂಲಕ ಆಗಮಿಸಿದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ನಲ್ಲಿದ್ದ ಕಸವನ್ನು ಬುಟ್ಟಿಗೆ ಎಸೆದಿದ್ದಾನೆ. ಕಸದ ಬುಟ್ಟಿಗೆ ಕೆಲ ಎತ್ತರದಲ್ಲೇ ಹೆಲಿಕಾಪ್ಟರ್‌ನಲ್ಲಿ ಆಗಸದಲ್ಲೇ ಹಾರಾಡಿಸಿ ಕಸ ಎಸೆಯಲಾಗಿದೆ. ಬಳಿಕ ಮರಳಿದ್ದಾನೆ.
ಬಾಲಕನ ಹೊಟ್ಟೆಯೊಳಗಿದೆ ಟ್ರಾಕ್ಟರ್, ಮಿಮಿಕ್ರಿಗೆ ಮನಸೋತ ಆನಂದ್ ಮಹೀಂದ್ರ!
ಕೆಲವರು ಈತನ ಪೈಲೆಟ್ ಸ್ಕಿಲ್ ಕುರಿತು ಮಾತನಾಡಿದ್ದಾರೆ. ಉತ್ತಮ ಪೈಲೆಟ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕಸ ಎಸೆಯಲು ಹೆಲಿಕಾಪ್ಟರ್ ಬಳಸಿದ ಈ ಶ್ರೀಮಂತ ಯಾರು ಎಂದು ಹಲವರು ಪ್ರಶ್ನಿಸಿದ್ದಾರೆ. ಈ ವಿಡಿಯೋ ಶೂಟ್ ಆಗಿರುವ ಸ್ಥಳ ಹಾಗೂ ಇತರ ಮಾಹಿತಿಗಳು ಲಭ್ಯವಿಲ್ಲ. ಆದರೆ ವಿಡಿಯೋ ಮಾತ್ರ ಭಾರಿ ಸಂಚಲನ ಸೃಷ್ಟಿಸುತ್ತಿದೆ.
ಇದೇ ರೀತಿ ಹೆಲಿಕಾಪ್ಟರ್ ಮೂಲಕ ಸ್ಟಂಟ್ ಮಾಡಿ ನೀರಿಗೆ ಹಾರಿದ ಯುವತಿ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಹೆಲಿಕಾಪ್ಟರ್ ಮೂಲಕ ಸಾಗಿದ ಯುವತಿ ತಲೆಕೆಳಗಾಗಿ ನಿಂತು ಸ್ಟಂಟ್ ಮಾಡಿದ್ದಾಳೆ. ಬಳಿಕ ಹೆಲಿಕಾಪ್ಟರ್‌ನಿಂದ ನೀರಿಗೆ ಹಾರಿದ್ದಾಳೆ. ಡೈವಿಂಗ್‌ನಲ್ಲಿ ಅನುಭವ ಹೊಂದಿರು ಎಲ್ಲಿ ಸ್ಮಾರ್ಟ್ ಈ ಸಾಹಸ ಮಾಡಿದ್ದರು.
ಹೇಯ್ ಪ್ರಭು ಯೇ ಕ್ಯಾ ಹುವಾ... ಇವರೇ ನೋಡಿ ಜಗನ್ನಾಥನ ಹೆಸರು ಕೂಗಿ ವೈರಲ್ ಆದ ಹುಡುಗ
ಎಕ್ರೊಬ್ಯಾಟಿಕ್ಸ್‌ನಲ್ಲಿ ಎಕ್ಸ್‌ಪರ್ಟ್ ಆಗಿರುವ ಎಲ್ಲಿ ಸ್ಮಾರ್ಟ್ ಹೆಲಿಕಾಪ್ಟರ್ ಮೇಲಿನಿಂದ ಡೈವ್ ಮಾಡಿ ಸಾಹಸ ಮೆರೆದಿದ್ದಳು. ಈ ವಿಡಿಯೋ 2.8 ಮಿಲಿಯನ್ ವೀವ್ಸ್ ಪಡೆದಿತ್ತು. ಎಲ್ಲಿ ಸ್ಮಾರ್ಟ್ ಸಾಹಸವನ್ನು ಬಹುತೇಕರು ಕೊಂಡಿದ್ದರು. ಇದೇ ವೇಳೆ ಎಚ್ಚರ ವಹಿಸುವಂತೆ ಸಲಹೆಯನ್ನೂ ನೀಡಿದ್ದರು.
