ಹೇಯ್ ಪ್ರಭು ಯೇ ಕ್ಯಾ ಹುವಾ... ಇವರೇ ನೋಡಿ ಜಗನ್ನಾಥನ ಹೆಸರು ಕೂಗಿ ವೈರಲ್ ಆದ ಹುಡುಗ
ಇದು ಸಾಮಾಜಿಕ ಜಾಲತಾಣದ ಯುಗ. ಇಲ್ಲಿ ಯಾವುದು ಯಾವಾಗ ವೈರಲ್ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ, ನೀವು ಆಡಿದ ಮಾತೊಂದು ರೆಕಾರ್ಡ್ ಆಗಿದ್ದಾರೆ ಅದು ಇನ್ಯಾವತ್ತೋ ವೈರಲ್ ಆಗಲು ಬಹುದು. ಹೀಗೆ ತಮಗೆ ತಿಳಿಯದೇ ವೈರಲ್ ಅಗಿ ಫೇಮಸ್ ಆದವರು ಅನೇಕರು ಅದೇ ರೀತಿ ಒಂದೇ ಒಂದು ಡೈಲಾಗ್‌ನಿಂದಲೇ ಫೇಮಸ್ ಆದ ವ್ಯಕ್ತಿ ಅಸ್ಸಾಂನ ಈ ಹುಡುಗ.
ಇದು ಸಾಮಾಜಿಕ ಜಾಲತಾಣದ ಯುಗ. ಇಲ್ಲಿ ಯಾವುದು ಯಾವಾಗ ವೈರಲ್ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ, ನೀವು ಆಡಿದ ಮಾತೊಂದು ರೆಕಾರ್ಡ್ ಆಗಿದ್ದಾರೆ ಅದು ಇನ್ಯಾವತ್ತೋ ವೈರಲ್ ಆಗಲು ಬಹುದು. ಹೀಗೆ ತಮಗೆ ತಿಳಿಯದೇ ವೈರಲ್ ಅಗಿ ಫೇಮಸ್ ಆದವರು ಅನೇಕರು ಅದೇ ರೀತಿ ಒಂದೇ ಒಂದು ಡೈಲಾಗ್‌ನಿಂದಲೇ ಫೇಮಸ್ ಆದ ವ್ಯಕ್ತಿ ಅಸ್ಸಾಂನ ಈ ಹುಡುಗ.
ಹೇಯ್ ಪ್ರಭು ಯೇ ಕ್ಯಾ ಹುವಾ.. ಹೇಯ್ ಹರಿಕೃಷ್ಣ ಜಗನ್ನಾಥ ಪ್ರೇಮಾನಂದ ಯೇ ಕ್ಯಾ ಹುವಾ ಈ ಡೈಲಾಗ್ ಯಾರಿಗೆ ಗೊತ್ತಿಲ್ಲ. ಹೇಳಿ ಯಾರ ಬಾಯಲ್ಲಿ ನೋಡಿದರೂ ಇದೇ ಡೈಲಾಗ್, ಮನೆಯೊಂದಕ್ಕೆ ಪ್ರವಾಹದ ನೀರು ತುಂಬಿದ ವೇಳೆ ಮೂವರು ಯುವಕರು ಆ ನೀರಿನಲ್ಲಿ ತಮ್ಮ ಮೊಬೈಲ್ ಹಿಡಿದು ಇಳಿದ ವೇಳೆ ಈ ಡೈಲಾಗ್ ಹೇಳಿ ಆ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಕಳೆದ ವರ್ಷದ ಜೂನ್‌ನಲ್ಲಿ ಈ ವೀಡಿಯೋ ರೆಕಾರ್ಡ್ ಆಗಿತ್ತು. ಇದು ನಂತರದಲ್ಲಿ ಎಷ್ಟು ಫೇಮಸ್ ಆಯ್ತು ಎಂದರೆ ಪಾರ್ಟಿಗಳಲ್ಲಿ , ಮ್ಯೂಸಿಕ್ ಕನ್ಸರ್ಟ್‌ಗಳಲ್ಲಿಯೂ ಡಿಜೆಗಳು ಈ ಹಾಡಿಗೆ ಟ್ಯೂನ್ ಹಾಕಿ ಕಾರ್ಯಕ್ರಮದಲ್ಲಿ ನರೆದಿದ್ದ ಸಾವಿರಾರು ಜನರು ಕುಣಿದು ಕುಪ್ಪಳಿಸುವಂತೆ ಮಾಡಿದ್ದರು.
ತಾನು ಇಷ್ಟಪಟ್ಟಿದ್ದ ಸಹಪಾಠಿಗೆ 12 ಲಕ್ಷದ ಉಡುಗೊರೆ ಕೊಟ್ಟ ನರ್ಸರಿ ಬಾಲಕ!
ಆದರೆ ತನ್ನ ಈ ಡೈಲಾಗೊಂದು ಈ ಲೆವೆಲ್‌ಗೆ ಫೇಮಸ್ ಆಗಿ ಬಿಡುತ್ತೆ ಅಂತ ಸ್ವತಃ ಆ ಹುಡುಗನಿಗೂ ಗೊತ್ತಿರಲಿಲ್ಲವಂತೆ ಇದನ್ನು ಮಾಧ್ಯಮವೊಂದು ಸಂದರ್ಶನ ಮಾಡಿದ ವೇಳೆ ಆ ತರುಣ ಹೇಳಿಕೊಂಡಿದ್ದಾನೆ. ಆತ ಏನು ಹೇಳಿದ ಇಲ್ಲಿದೆ ನೋಡಿ.
ಇದು ಸ್ಕ್ರಿಫ್ಟೆಡ್ ಆಗಿರಲಿಲ್ಲ, (ಅಂದರೆ ಇದನ್ನು ಪ್ಲಾನ್ ಮಾಡಿರಲಿಲ್ಲ), ಹಾಗೆಯೇ ನೀರಿನಲ್ಲಿ ಇಳಿದ ನಮಗೆ ನೀರೊಳಗೆ ಮುಂದೆ ಸಾಗುತ್ತಿದ್ದಂತೆ ಅದರಷ್ಟಕ್ಕೆ ಈ ಡೈಲಾಗ್ ಬಾಯಲ್ಲಿ ಬಂದು ಬಿಟ್ಟಿತ್ತು. ಆದರೆ ಹೀಗೆ ಇದು ವೈರಲ್ ಆಗುವುದೆಂಬ ಕಲ್ಪನೆಯೇ ಇರಲಿಲ್ಲ, ಇದೆಲ್ಲವೂ ಮೇಲಿರುವ ಪ್ರಭುವಿನ ಆಶೀರ್ವಾದ, ಅವನ ಕೃಪೆ ಇಲ್ಲದೇ ಏನು ಆಗದು ಎಂದು ಹೇಳಿದ್ದಾನೆ ಈ ಹುಡುಗ. ಆದರೆ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಈ ಯುವಕ ಸ್ಥಳೀಯವಾಗಿಯೂ ಸಖತ್ ಫೇಮಸ್ ಆಗಿದ್ದು, ಜನ ದಾರಿಯಲ್ಲಿ ಸಿಕ್ಕರೆ ಹೇಯ್ ಜಗನ್ನಾಥ್, ಎಲ್ಲೋಗ್ತಿದ್ದಿಯಾ ಹೇಯ್ ಪ್ರೇಮಾನಂದ್ ಎಲ್ ಹೋಗ್ತಿದ್ದಿಯಾ ಅಂತ ಕೇಳ್ತಾರಂತೆ.
'ಅಬ್ ಲಂಚ್ ತುಮ್ ಆಮೇಲ್ ಆನಾ..' ಬ್ಯಾಂಕ್‌ನಲ್ಲಿ ಹೀಗ್ ಮಾತಾಡಿ ಕೆಲ್ಸ ಪಡ್ಕೊಂಡ ನಂದಿನಿ!
ಹೀಗೆ ಡೈಲಾಗ್ ಹೇಳಿದ ಈ ಹುಡುಗ ವಿದ್ಯಾರ್ಥಿಯಾಗಿದ್ದು, ಬಿಕಾಂಪೂರ್ಣಗೊಳಿಸಿ ಈಗ ಮಾಸ್ಟರ್ಸ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ನಿಮ್ಮ ಈ ಡೈಲಾಗ್ ನಿಮಗೆ ಸಂಪೂರ್ಣ ನೆನಪಿದೆಯಾ ಎಂದು ಅವರನ್ನು ಮಾಧ್ಯಮದವರೊಬ್ಬರು ಕೇಳಿದಾಗ ಇದು ಸಂಪೂರ್ಣ ನೆನಪಿಲ್ಲ, ಹಾಗೆಯೇ ಸುಮ್ಮನೇ ತನ್ನಷ್ಟಕ್ಕೆ ಬಾಯಲ್ಲಿ ಬಂದ ಡೈಲಾಗ್ ಅದು. ಹೇಯ್ ಪ್ರಭು ಹೇಯ್ ಹರಿನಾಮ್ ಕೃಷ್ಣ ಹರಿಕೃಷ್ಣ ಜಗನ್ನಾಥ ಪ್ರೇಮಾನಂದ, ಯೇ ಕ್ಯಾ ಹುವಾ ತಲಾಬ್ ಮೇ ಪಾನಿ ಆಗಯಾ, ಎಂಬುದು ಈ ಡೈಲಾಗ್ ಆಗಿತ್ತು. ಆದರೆ ಇದು ಹೀಗೆ ಇಷ್ಟೊಂದು ಫೇಮಸ್ ಆಗುವುದೆಂದು ತಿಳಿದಿರಲಿಲ್ಲ, ಎಲ್ಲಾ ಮೇಲಿರುವ ಪ್ರಭುವಿನ ಆಶೀರ್ವಾದ ಎಂದು ಹೇಳಿಕೊಂಡಿದ್ದಾರೆ ಈ ವೈರಲ್ ಬಾಯ್.