ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿ ತಾಯಿಗೆ ಚಿಕಿತ್ಸೆ ನೀಡಿದ ವ್ಯಕ್ತಿ 1.5 ವರ್ಷದ ಬಳಿಕ ಯಾರೆಲ್ಲಾ ಹಣ ನೀಡಿದ್ದಾರೋ ಅವರಿಗೆ ಹಣ ಹಿಂತಿರುಗಿಸಿ ಧನ್ಯವಾದ ಹೇಳಿದ್ದಾನೆ. ಈ ಕುರಿತು ಹೃದಯಸ್ಪರ್ಶಿ ಘಟನೆ ವಿವರ ಇಲ್ಲಿದೆ
ನವದೆಹಲಿ(ಅ.13) ಚಿಕಿತ್ಸೆಗಾಗಿ ಇಷ್ಟು ಖರ್ಚಾಗುತ್ತೆ. ನಿಮ್ಮ ಕೈಲಾದ ಸಹಾಯ ಮಾಡಿ ಅನ್ನೋ ಸಂದೇಶ ಸಾಮಾಜಿಕ ಜಾಲತಾಣದಲ್ಲಿ, ವ್ಯಾಟ್ಸ್ಆ್ಯಪ್ ಮೂಲಕ ನಿಮ್ಮ ಗಮನಕ್ಕೆ ಬಂದಿರಬಹುದು. ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿ ಅದೆಷ್ಟೋ ಮಂದಿ ನೆಚ್ಚಿನವರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದ್ದಾರೆ. ನಮಗೆ ಪರಿಚಯವೇ ಇಲ್ಲದ ಅದೆಷ್ಟೋ ಮಂದಿಗೆ ತಮ್ಮ ಕೈಲಾದ ಹಣ ನೀಡಿ ಪರೋಪಕಾರ ಮೆರೆದವರು ಹಲವರಿದ್ದಾರೆ. ಕಷ್ಟಕ್ಕೆ ನನ್ನ ಕೈಲಾದ ಸಹಾಯ ಮಾಡಿದೆ ಅನ್ನೋ ತೃಪ್ತಿ ಇದ್ದೇ ಇರುತ್ತೆ. ಹೀಗೆ ಫಾರ್ವಡ್ ಮೂಲಕ ಬಂದ ಮಸೆೇಜ್‌ಗೆ ತನ್ನ ಕೈಲಾದ ಸಹಾಯ ಮಾಡಿದ ವ್ಯಕ್ತಿಗೆ, 1.5 ವರ್ಷದ ಬಳಿಕ ತಾನು ನೀಡಿದ ಹಣ ವಾಪಸ್ ಬಂದಿದೆ. ತಾನು ಹಣ ನೀಡಿರುವ ವಿಚಾರವನ್ನೇ ಮರೆತಿದ್ದ ವ್ಯಕ್ತಿಗೆ ಕೊಟ್ಟ ಹಣ ವಾಪಸ್ ಬಂದಿರುವುದಕ್ಕಿಂತ ಈ ವ್ಯಕ್ತಿಯ ಹೃದಯ ವೈಶ್ಯಾಲತೆಗೆ ಹ್ಯಾಟ್ಸ್ಆ್ಯಪ್ ಹೇಳಿದ್ದಾರೆ.
ಕಮಲ್ ಸಿಂಗ್ ಮೂಲತಃ ಎಂಜಿನಿಯರ್. ಸಾಮಾಜಿಕ ಜಾಲತಾಣದ ಮೂಲಕ ತಾಯಿಯ ಚಿಕಿತ್ಸಾ ವೆಚ್ಚಕ್ಕೆ ಹಣ ಸಹಾಯ ಮಾಡಿ ಅನ್ನೋ ಸಂದೇಶ ಬಂದಿತ್ತು. ಇದು ಕ್ರೌಡ್ ಫಂಡಿಂಗ್ ಅಂದರೆ ಸಾರ್ವಜನಿಕವಾಗಿ ಹಣ ಸಂಗ್ರಹಿಸುವ ವಿಧಾನವಾಗಿತ್ತು. ಸಾಮಾಜಿಕ ಜಾಲತಾದ, ವ್ಯಾಟ್ಸ್ಆ್ಯಪ್ ಸೇರಿದಂತೆ ಇನ್ನಿತರ ವೇದಿಕೆಗಳ ಮೂಲಕ ಹಣ ಸಂಗ್ರಹಿಸಲಾಗುತ್ತದೆ. ತಾಯಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಇಂತಿಷ್ಟು ಹಣ ಖರ್ಚಾಗುತ್ತಿದೆ. ಕ್ರೌಡ್ ಫಂಡಿಂಗ್ ಮೂಲಕ ತಮ್ಮ ಕೈಲಾದ ಹಣ ಸಹಾಯ ಮಾಡಿ. ಇದರಿಂದ ತಾಯಿ ಚಿಕಿತ್ಸೆಯನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ಮಾಡಲು ಸಾಧ್ಯವಾಗಲಿದೆ ಅನ್ನೋ ಸಂದೇಶವೂ ಬರೆಯಲಾಗಿತ್ತು. ಗ್ರೂಪ್ ಮೂಲಕ ಬಂದ ಈ ಸಂದೇಶಕ್ಕೆ ಕಮಲ್ ಸಿಂಗ್ ಸ್ಪಂದಿಸಿದ್ದರು. 2021ರ ಜುಲೈ 7 ರಂದು 201 ರೂಪಾಯಿ ಹಣವನ್ನು ಸಂದೇಶದಲ್ಲಿ ಹಾಕಿದ್ದ ಯುಪಿಐಗೆ ಕಳುಹಿಸಿದ್ದರು. 201 ರೂಪಾಯಿ ಹಣದಿಂದ ಒಬ್ಬರಿಗೆ ಸಹಾಯವಾಗುದಾದರೆ ಅದಕ್ಕಿಂತ ಖುಷಿ ಇನ್ನೇನಿದೆ ಎಂದು 201 ರೂಪಾಯಿ ಕಳುಹಿಸಿದ ಕಮಲ್ ಸಿಂಗ್ ಬಳಿಕ ಮರೆತೇ ಬಿಟ್ಟಿದ್ದರು.
ಕನ್ಹಯ್ಯಲಾಲ್ ಕುಟುಂಬಕ್ಕೆ ಸಹಾಯ, 24 ಗಂಟೆಯಲ್ಲಿ 1 ಕೋಟಿ ರೂಪಾಯಿ ದೇಣಿಗೆ!
1.5 ವರ್ಷದ ಬಳಿಕ ಕಮಲ್ ಸಿಂಗ್ ಮೊಬೈಲ್‌ಗೆ ಸಂದೇಶವೊಂದು ಬಂದಿತ್ತು. 201 ರೂಪಾಯಿ ಸ್ವೀಕೃತವಾಗಿದೆ ಅನ್ನೋ ಬ್ಯಾಂಕ್ ಮೆಸೇಜ್‌ನಿಂದ ಕಮಲ್ ಸಿಂಗ್‌ಗೆ ಅಚ್ಚರಿಯಾಗಿದೆ. ನನಗೆ 201 ರೂಪಾಯಿ ಕಳುಹಿಸದ ವ್ಯಕ್ತಿಯ ಹೆಸರು ನೋಡಿದ್ದಾರೆ. ಇದು ಯಾರು ಅನ್ನೋದು ಕಮಲ್ ಸಿಂಗ್‌ಗೆ ತಿಳಿದಿಲ್ಲ. ಯುಪಿಐ ಮೂಲಕ ಸ್ವೀಕರಿಸಿದ ಹಣದ ವಿವರಣೆ ನೋಡಿದಾಗ ಕಮಲ್ ಸಿಂಗ್‌ಗೆ ಅಚ್ಚರಿ ಜೊತೆಗೆ ಹೆಮ್ಮೆಯೂ ಏನಿಸಿದೆ. ಕಾರಣ 2021ರ ಜುಲೈ ತಿಂಗಳಲ್ಲಿ ತಾಯಿಯ ಚಿಕಿತ್ಸೆ 201 ರೂಪಾಯಿ ಟ್ರಾನ್ಸ್‌ಫರ್ ಮಾಡಲಾಗಿತ್ತು. ಈ ವ್ಯಕ್ತಿ ಹಣ ಹಿಂತಿರುಸಿದ್ದಾನೆ.
ಕುತೂಹಲದಿಂದ ಕಮಲ್ ಸಿಂಗ್ ತಾಯಿ ಆರೋಗ್ಯ ಹೇಗಿದೆ ಎಂದು ಕೇಳಿದ್ದಾರೆ. ಇದಕ್ಕೆ ಆ ವ್ಯಕ್ತಿಯ ಉತ್ತರಿಸಿದ್ದಾನೆ. ತಾಯಿ ಆರೋಗ್ಯವಾಗಿದ್ದಾರೆ. ನನ್ನ ವ್ಯವಹಾರ ಕೂಡ ಚೆನ್ನಾಗಿ ನಡೆಯುತ್ತಿದೆ. ತಾಯಿ ಚಿಕಿತ್ಸೆಗಾಗಿ ಹಣ ಪಡೆದುಕೊಂಡವರಿಗೆ ಇದೀಗ ಹಿಂತಿರುಗಿಸುತ್ತಿದ್ದೇನೆ. ಧನ್ಯವಾದ ಎಂದು ಆತ ಪ್ರತಿಕ್ರಿಯೆಸಿದ್ದಾರೆ. ಈ ಸಂದೇಶ ನೋಡಿದ ಕಮಲ್ ಸಿಂಗ್ ಲಿಂಕೆಡ್‌ಇನ್ ಮೂಲಕ ಈ ಸಂತಸವನ್ನು ಹಂಚಿಕೊಂಡಿದ್ದಾರೆ.
ಜನರ ನೆರವು; ಜೀವನ್ಮರಣ ಹೋರಾಟದ ಕಂದಮ್ಮನಿಗೆ ಸಿಕ್ತು 16 ಕೋಟಿ ರೂ ಇಂಜೆಕ್ಷನ್!
