ವಡೋದರ(ಮೇ.05): ಅತೀ ಅಪರೂಪದ ಕಾಯಿಲೆ ಸ್ಪೈನ್ ಮಸ್ಕುಲರ್ ಆ್ಯಟ್ರೋಪಿ ಕಾಯಿಲೆ  ಭಾರತದಲ್ಲಿ ಕೆಲೆವೆಡೆ ಕಾಣಿಸಿಕೊಳ್ಳುತ್ತಿದೆ.  ಇದೀಗ ವಡೋದರದ ಧೈರ್ಯ ರಾಜ್ ಸಿನ್ಹ ರಾಥೋಡ್ ಎಂಬ 4 ತಿಂಗಳ ಕಂದಮ್ಮನಲ್ಲೂ ಈ ಕಾಯಿಲೆ ಕಾಣಿಸಿಕೊಂಡಿದೆ. ಜೀವನ್ಮರಣ ಹೋರಾಟದಲ್ಲಿರುವ ಈ ಕಂದಮ್ಮನ ಜೀವ ಉಳಿಸಲು 16 ಕೋಟಿ ರೂಪಾಯಿ ಲಸಿಕೆ ನೀಡಲಾಗಿದೆ.

ಇನ್ಸುಲಿನ್‌ ಇಂಜೆಕ್ಷನ್‌ಗೆ ವಿದಾಯ: ಹೊಸ ರೀತಿಯ ಮಾತ್ರೆ ಆವಿಷ್ಕಾರ!.

4 ತಿಂಗಳ ಕಂದಮ್ಮನಿಗೆ ಈ ಅಪರೂಪದ ಕಾಯಿಲೆ ಇದೆ ಎಂದು ವೈದ್ಯರು ತಿಳಿಸಿದಾಗ ಪೋಷಕರ ಅರ್ಧ ಜೀವ ಹೋಗಿದೆ. ಇನ್ನು ಇದರ ಬೆಲೆ 16 ಕೋಟಿ ಎಂದಾಗ ಪೋಷಕರಿಗೆ ದಿಕ್ಕೇ ತೋಚದಾಗಿದೆ. ಇಷ್ಟು ಮೊತ್ತದ ಇಂಜೆಕ್ಷನ್ ಖರೀದಿ ಧೈರ್ಯ ಪೋಷಕರಿಗೆ ಅಸಾಧ್ಯದ ಮತಾಗಿತ್ತು. ಆದರೆ ಭಗವಂತ ಕೈಬಿಡಲಿಲ್ಲ.

ಕೊನೆಯ ಆಯ್ಕೆಯನ್ನು ಪ್ರಯೋಗಿಸಲು ಧೈರ್ಯ ಪೋಷಕರು ಮುಂದಾದರು. ಜನರಲ್ಲಿ ತಮ್ಮ ಕಂದನಿಗೆ ನೆರವಾಗುವಂತೆ ಮನವಿ ಮಾಡಲಾಗಿತ್ತು. ಪರಿಣಾಮ ಜನರು ತಮ್ಮ ಕೈಲಾದ ಹಣ ನೀಡಿದ್ದಾರೆ. ಶ್ರೀಮಂತರು, ಸಂಸ್ಥೆಗಳು ನೆರವು ನೀಡಿದೆ. ಇತ್ತ ಆಮದ ಸುಂಕವನ್ನು ಕೇಂದ್ರ ಸರ್ಕಾರ ಕಡಿತ ಮಾಡಿತು. ಹೀಗಾಗಿ 4 ರಿಂದ 5 ಕೋಟಿ ರೂಪಾಯಿ ಕಡಿತಗೊಂಡಿತು.

ಜನರ ನೆರವಿನಿಂದ ಒಟ್ಟು 16.13 ಕೋಟಿ ರೂಪಾಯಿ ಹರಿದು ಬಂದಿದೆ. ಈ ನೆರವು ಬಂದ ಬಳಿಕ ಮುಂಬೈನ ಆಸ್ಪತ್ರೆಗೆ ಕಂದನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಭುದವಾರ(ಮೇ.04) ರಂದು ದುಬಾರಿ ಲಸಿಕೆ ನೀಡಲಾಗಿದೆ. ಸದ್ಯ ವೈದ್ಯರ ನಿಘಾದಲ್ಲಿರುವ ಕಂದ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.

ಸಂಗ್ರಹವಾದ ಹಣ ದಲ್ಲಿ ಲಸಿಕೆ ಹಾಗೂ ಇತರ ಚಿಕಿತ್ಸೆ ವೆಚ್ಚಾ ಭರಿಸಲು ನೆರವಾಗಲಿದೆ ಎಂದು ಪೋಷಕರು ಹೇಳಿದ್ದಾರೆ. ಕಂದನ ಚಿಕಿತ್ಸೆಗೆ ಬೇಕಾದ ಹಣ ಮಾತ್ರ ಸಾಕು, ಮಿಕ್ಕ ಹಣ ಇದೇ ರೀತಿ ಸಂಕಷ್ಟದಲ್ಲಿರುವ ಯಾರಿಗಾದರೂ ನೆರವಾಗಲಿ ಎಂದು ಪೋಷಕರು ಹೇಳಿದ್ದಾರೆ.

ಕೇವಲ 42 ದಿನದಲ್ಲಿ ಈ ಮೊತ್ತ ಸಂಗ್ರಹಿಸಲಾಗಿದೆ. ಈ ಮಟ್ಟಿನ ಸ್ಪಂದನೆ ಸಿಗುತ್ತೆ, ಹಣ ಸಂಗ್ರಹಾಗುತ್ತೆ ಅನ್ನೋ ಯಾವುದೇ ಕಲ್ಪನೆ ಇರಲಿಲ್ಲ ಎಂದು ಪೋಷಕರ ಹೇಳಿದ್ದಾರೆ.