ಹೊಸ ಬಟ್ಟೆ ಧರಿಸಿ ಹಬ್ಬದೂಟ ಮಾಡಿದ ಶ್ವಾನ, ವಿಡಿಯೋ ವೈರಲ್
- ನೆರೆ ರಾಜ್ಯದಲ್ಲಿ ಓಣ ಸಂಭ್ರಮ
- ಎಲೆ ಹಾಕಿ ಊಟಕ್ಕೆ ಕುಳಿತ ಶ್ವಾನ
- ವಿಡಿಯೋ ಎಲ್ಲೆಡೆ ವೈರಲ್
ನೆರೆ ರಾಜ್ಯ ಕೇರಳದಲ್ಲಿ ಓಣಂ ಹಬ್ಬದ ಸಂಭ್ರಮ ಮುಗಿಯುತ್ತಾ ಬಂದಿದೆ. ಹಬ್ಬದ ಊಟ, ಆಚರನೆ, ಸಂಭ್ರಮದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಸಂದರ್ಭ ಶ್ವಾನವೊಂದು ಶಿಸ್ತಾಗಿ ಕುಳಿತು ಹಬ್ಬದ ಭೋಜನ ಉಣ್ಣುವ ವಿಡಿಯೋ ನೆಟ್ಟಿಗರ ಮನಸು ಗೆದ್ದಿದೆ.
ಓಣಂ ಹಬ್ಬದ ದಿನ ಬೆಳ್ಳಂಬೆಳಗ್ಗೆ ಎದ್ದು ಬಗೆ ಬಗೆಯ ತರಕಾರಿಗಳನ್ನು ಆರಿಸಿ ಕತ್ತರಿಸಿ ಬೇರೆ ಬೇರೆ ರೆಸಿಪಿ ಸಿದ್ಧಪಡಿಸಿ ಬಿಸಿ ಬಿಸಿ ಅಡುಗೆ ಮಾಡಿ ಎಲ್ಲರೂ ಒಟ್ಟಿಗೇ ಊಟ ಮಾಡುತ್ತಾರೆ. ಒಟ್ಟಿಗೆ ಅಡುಗೆ ಮಾಡಿ ಒಟ್ಟಿಗೆ ಊಟ ಮಾಡುವುದೇ ವಿಶೇಷ. ಇಲ್ಲೊಂದು ಕಡೆ ಕುಟುಂಬವೊಂದು ತಮ್ಮ ಪ್ರೀತಿಯ ಶ್ವಾನವನ್ನೂ ಜೊತೆಗೇ ಕೂರಿಸಿಕೊಂಡು ಊಟ ಮಾಡಿದ್ದಾರೆ.
ಬೆಂಗಳೂರಿನ ಚಿಂದಿ ಆಯುವಾಕೆಯ ಇಂಗ್ಲೀಷ್‌ಗೆ ನೆಟ್ಟಿಗರು ಫಿದಾ, ವೈರಲ್ ಆಯ್ತು ವಿಡಿಯೋ!
ಚಂದದ ಝರಿಯಂಚಿನ ಬಿಳಿ ಶಲ್ಯವನ್ನು ಧರಿಸಿಕೊಂಡು ಎರಡೂ ನಾಯಿಗಳು ತಮ್ಮ ಮಾಲೀಕನ ಜೊತೆ ಕುಳಿತು ಗಡದ್ದಾಗಿ ಹಬ್ಬದೂಟ ಮಾಡಿವೆ. ಅಮ್ಮ ಒಬ್ಬರು ಊಟ ಬಡಿಸಿದ್ದಾರೆ. ಶ್ವಾನಗಳೂ ಆಹಾರ ಬಡಿಸುವವರೆಗು ಕಾದು ತಾಳ್ಮೆಯಿಂದ ಕುಳಿತು ನಂತರ ಊಟ ಮಾಡೋಕೆ ಶುರು ಮಾಡಿವೆ. ತಮ್ಮ ಮಾಲೀಕನೊಂದಿಗೆ ಒಣಂ ಎಂಜಾಯ್ ಮಾಡಿವೆ.
ವಿಡಿಯೋಗೆ ಕಮೆಂಟ್ ಮಾಡಿದ ಜನ ಇದು ಚಂದದ ಆಚರಣೆ. ಇದರಿಂದ ಜನರು ಪ್ರೇರೇಪಿತರಾಗಲಿ. ಎಲ್ಲದನ್ನೂ ಚಂದದ ದೃಷ್ಟಿಯಿಂದ ನೋಡಲಿ ಎಂದಿದ್ದಾರೆ. ನಾಯಿಗಳನ್ನು ಇಷ್ಟು ಪ್ರೀತಿಯಿಂದ ನೋಡಿಕೊಳ್ಳುವವರನ್ನು ಎಲ್ಲೂ ನೋಡಿಲ್ಲ ಎಂದಿದ್ದಾರೆ ನೆಟ್ಟಿಗರು.
ಇಷ್ಟೇ ಅಲ್ಲ ಎಲ್ಲೆಡೆ ರಕ್ಷಾ ಬಂಧನವನ್ನೂ ಆಚರಿಸಲಾಗಿದ್ದು, ಈ ಶ್ವಾನಗಳ ಮಾಲೀಕ ನನ್ನ ಸಹೋದರ ಎಂದು ತಮ್ಮ ಪ್ರೀತಿಯ ಶ್ವಾನಕ್ಕೆ ರಾಖಿ ಕಟ್ಟಿದ್ದಾರೆ. ನಾಯಿಯೂ ಶಿಸ್ತಾಗಿ ಕುಳಿತುಕೊಂಡು ರಾಖಿ ಕಟ್ಟಿಸಿಕೊಂಡಿದೆ.