Asianet Suvarna News Asianet Suvarna News

ಪ್ರಿಯಾಂಕಾ ಭೇಟಿಯಾಗಲು ಭದ್ರತೆ ಸೀಳಿದ ವ್ಯಕ್ತಿ: ಏನಾಗಲ್ಲ ಬಿಡಿ ಎಂದ ವಾದ್ರಾ!

ಪ್ರಿಯಾಂಕಾ ಗಾಂಧಿ ಭೇಟಿಯಾಗಲು ವೇದಿಕೆಗೆ ನಗ್ಗಿದ ಅಭಿಮಾನಿ| ಭದ್ರತೆ ಸೀಳಿ ನುಗ್ಗಿಬಂದ ಅಭಿಮಾನಿಯನ್ನು ಮಾತನಾಡಿಸಿದ ಪ್ರಿಯಾಂಕಾ| ವ್ಯಕ್ತಿಯನ್ನು ಹಿಡಿಯಲು ಮುಂದಾದ ಭದ್ರತಾ ಸಿಬ್ಬಂದಿಯನ್ನು ತಡೆದ ಕಾಂಗ್ರೆಸ್ ನಾಯಕಿ| ಅಭಿಮಾನಿಯನ್ನು ಪ್ರೀತಿಯಿಂದ ಮಾತನಾಡಿಸಿದ ಪ್ರಿಯಾಂಕಾ ಗಾಂಧಿ| 

Man Breaks Security To Meet Priyanka Gandhi In UP
Author
Bengaluru, First Published Dec 28, 2019, 5:09 PM IST
  • Facebook
  • Twitter
  • Whatsapp

ಲಕ್ನೋ(ಡಿ.28): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಲು ವ್ಯಕ್ತಿಯೋರ್ವ ಭದ್ರತಾ ವ್ಯವಸ್ಥೆಯನ್ನು ಸೀಳಿ ಮುನ್ನಗಿದ ಘಟನೆ ನಡೆದಿದೆ.

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ ಗಾಂಧಿ, ಇತರ ನಾಯಕರೊಂದಿಗೆ ವೇದಿಕೆ ಮೇಲೆ ಕುಳಿತಿದ್ದರು. ಈ ವೇಳೆ ವೇದಿಕೆಯತ್ತ ಏಕಾಏಕಿ ನುಗ್ಗಿದ ಅಭಿಮಾನಿಯೋರ್ವ ಪ್ರಿಯಾಂಕಾ ಅವರೊಂದಿಗೆ ಮಾತನಾಡಲು ಮುಂದಾಗಿದ್ದಾನೆ.

ರಾಹುಲ್‌ರಂಥದ್ದೇ ಕಾರಲ್ಲಿ ಪ್ರಿಯಾಂಕ ಮನೆಗೆ ಅಪರಿಚಿತರು!

ಈ ವೇಳೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಕೂಡಲೇ ವ್ಯಕ್ತಿಯನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ವ್ಯಕ್ತಿಯನ್ನು ಬಿಡುವಂತೆ ಭದ್ರತಾ ಸಿಬ್ಬಂದಿಗೆ ಆದೇಶ ನೀಡಿದ ಪ್ರಿಯಾಂಕಾ, ಆತನೊಂದಿಗೆ ಆತ್ಮೀಯವಾಗಿ ಮಾತನಾಡಿದರು.

ಗಾಂಧಿ ಪರಿವಾರಕ್ಕೆ ಎಸ್‌ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದ ಬಳಿಕ ಹಲವು ಬಾರಿ ಭದ್ರತಾ ಲೋಪ ನಡೆದಿದ್ದು, ಹೀಗಾಗಿ ನಿಯೋಜಿತ ಭದ್ರತಾ ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.

SPG ಭದ್ರತೆ ಹಿಂತೆಗೆತ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಮನೆಗೆ 7 ಜನ ಅಪರಿಚಿತರ ಪ್ರವೇಶ!

Follow Us:
Download App:
  • android
  • ios