ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ನಿರ್ಜರ್ ಎಸ್ ದೇಸಾಯಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣವೊಂದನ್ನು ವಿಚಾರಣೆ ನಡೆಸುತ್ತಿದ್ದರು.
ಅಹಮದಾಬಾದ್ (ಜೂ.27): ಸೋಶಿಯಲ್ ಮೀಡಿಯಾದಲ್ಲಿ ಕೋರ್ಟ್ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬ ಕೋರ್ಟ್‌ನ ಆನ್‌ಲೈನ್ ವಿಚಾರಣೆಗೆ ಟಾಯ್ಲೆಂಟ್‌ನಿಂದಲೇ ಅಟೆಂಡ್ ಆಗಿದ್ದಾನೆ. ಜೂನ್ 20 ರಂದು ಈ ಘಟನೆ ನಡೆಸಿದ್ದು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಯುತ್ತಿದ್ದ ವೇಳೆ ಇದು ಸಂಭವಿಸಿದೆ.
ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ನಿರ್ಜರ್ ಎಸ್ ದೇಸಾಯಿ ಅವರೊಂದಿಗಿನ ಜೂಮ್ ಮೀಟಿಂಗ್‌ನಲ್ಲಿ 'ಸಮದ್ ಬ್ಯಾಟರಿ' ಎಂಬ ಹೆಸರನ್ನು ಹೊಂದಿದ್ದ ಆ ವ್ಯಕ್ತಿ, ಇಯರ್‌ಫೋನ್‌ಗಳನ್ನು ಧರಿಸಿ ಟಾಯ್ಲೆಟ್ ಸೀಟಿನಲ್ಲಿ ಕುಳಿತಿರುವುದು ಕಂಡುಬಂದಿದೆ.
ಒಂದು ನಿಮಿಷದ ದೀರ್ಘ ವಿಡಿಯೋದಲ್ಲಿ, ಟಾಯ್ಲೆಟ್‌ನ ನೆಲದ ಮೇಲೆ ಮೊಬೈಲ್ ಫೋನ್‌ಅನ್ನು ಇರಿಸಿಕೊಂಡಿರುವ ವ್ಯಕ್ತಿ, ತನ್ನನ್ನು ತಾನು ಕ್ಲೀನ್ ಮಾಡಿಕೊಳ್ಳುತ್ತಿರುವುದು ಕಂಡಿದೆ. ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದ ಕೋಣೆಯಲ್ಲಿ ವಕೀಲರು ತಮ್ಮ ವಾದ ಮಂಡಿಸುವುದನ್ನು ವೀಡಿಯೊ ತೋರಿಸುತ್ತದೆ. ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದ ವಿಷಯವನ್ನು ವಿಚಾರಣೆ ನಡೆಸುತ್ತಿತ್ತು.
ಆ ವ್ಯಕ್ತಿ ಕ್ರಿಮಿನಲ್ ಪ್ರಕರಣದಲ್ಲಿ ದೂರುದಾರನಾಗಿದ್ದು, ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಪ್ರಕರಣದಲ್ಲಿ ಪ್ರತಿವಾದಿಯಾಗಿ ಹಾಜರಾಗುತ್ತಿದ್ದನೆಂದು ವರದಿಯಾಗಿದೆ.
ಕಳೆದ ಮಾರ್ಚ್‌ನಲ್ಲಿ, ಗುಜರಾತ್ ಹೈಕೋರ್ಟ್ ಶೌಚಾಲಯದಿಂದ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಿದ್ದಕ್ಕಾಗಿ ಒಬ್ಬ ವ್ಯಕ್ತಿಗೆ 2 ಲಕ್ಷ ರೂ. ದಂಡ ಮತ್ತು ಸಮುದಾಯ ಸೇವೆಗೆ ಶಿಕ್ಷೆ ವಿಧಿಸಿತು. ಆ ಘಟನೆಗೆ ಒಂದು ತಿಂಗಳ ಮೊದಲು, ತನ್ನ ಹಾಸಿಗೆಯ ಮೇಲೆ ಮಲಗಿ ಕಲಾಪದಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತೊಬ್ಬ ವ್ಯಕ್ತಿಗೆ 25,000 ರೂ. ದಂಡ ವಿಧಿಸಲಾಗಿತ್ತು.
