Asianet Suvarna News Asianet Suvarna News

Kolkata Municipal Election: ಮಮತಾ ಗೆಲುವಿನ ನಾಗಾಲೋಟ... ಎರಡಂಕಿ ಸೀಟು ಗೆಲ್ಲಲು ಕಮಲ ಕೈ ವಿಫಲ

  • ಕೋಲ್ಕತ್ತಾದ ಮುನ್ಸಿಪಲ್‌ ಕಾರ್ಪೋರೇಷನ್‌ ಮತ ಎಣಿಕೆ
  • 134 ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್‌ ಜಯಭೇರಿ
  • ಎರಡಂಕಿ ದಾಟಲು ವಿಫಲವಾದ ಕೈ , ಕಮಲ
Mamata Banerjees Trinamool will registering landslide victory in Kolkata Municipal Corporation
Author
Bangalore, First Published Dec 21, 2021, 4:19 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ನಗರಸಭೆ ಚುನಾವಣೆ  ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್‌ ಪಕ್ಷವೂ ಗೆಲ್ಲುವಿನತ್ತ ಮುನ್ನುಗಿದೆ. ಇತ್ತ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡಂಕಿಯಷ್ಟು ಕೂಡ ಸೀಟು ಗೆಲ್ಲಲು ವಿಫಲವಾಗಿವೆ. ಪ್ರಸ್ತುತ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವೂ 134  ಸೀಟುಗಳಲ್ಲಿ ಈಗಾಗಲೇ ಜಯಭೇರಿ ಬಾರಿಸಿದೆ. ಮಧ್ಯಾಹ್ನದ ವೇಳೆಗೆ ಟಿಎಂಸಿ 134, ಬಿಜೆಪಿ 3, ಎಡರಂಗ 2, ಕಾಂಗ್ರೆಸ್‌ 2, ಹಾಗೂ ಇತರ 3 ಸೀಟುಗಳನ್ನು ಗೆದ್ದಿದೆ. ಈ ಹಿನ್ನೆಲೆ ಪಕ್ಷದ ನಾಯಕರು, ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.  

ಭಾನುವಾರದಂದು (ಡಿ.19)  ಭಾರಿ ಭದ್ರತೆ ಮತ್ತು ಕೋವಿಡ್  ನಿಯಮಗಳನ್ನು ಅನುಸರಿಸಿಕೊಂಡು ಕೋಲ್ಕತ್ತಾದ ಮುನ್ಸಿಪಲ್‌ ಕಾರ್ಪೋರೇಷನ್‌ಗೆ 4,959 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಈ ನಡುವೆ ಸೋಮವಾರ (ಡಿ.20) ಎಡಪಕ್ಷಗಳು, ಕಾಂಗ್ರೆಸ್ ಮತ್ತು ಬಿಜೆಪಿ ಈ ಮೂರು ಪಕ್ಷಗಳು ಪಶ್ಚಿಮ ಬಂಗಾಳದಾದ್ಯಂತ ಪ್ರತ್ಯೇಕ ಸಮಾವೇಶಗಳನ್ನು ಆಯೋಜಿಸಿ ಚುನಾವಣೆ ವೇಳೆ ನಡೆದ ಹಿಂಸಾಚಾರವನ್ನು ಖಂಡಿಸಿದ್ದವು. ಆದರೆ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್‌ ಪಕ್ಷವೂ ಇದನ್ನು ಸೋಲಿನ ಭಯದಿಂದ ಮಾಡುತ್ತಿರುವ ನಾಟಕ ಎಂದು ಬಣ್ಣಿಸಿತ್ತು.

PM candidate from TMC: ಮಮತಾ ಮುಂದಿನ ಪ್ರಧಾನಿ ಅಭ್ಯರ್ಥಿ: ಟಿಎಂಸಿ ಮುಖವಾಣಿ

ಚುನಾವಣೆ ಮುಗಿದ ನಂತರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದರು. ಆದರೆ ಇದನ್ನು ಪೊಲೀಸರು ತಡೆದರು. ಹೀಗಾಗಿ ಬಿಜೆಪಿ ಮುಖ್ಯ ಕಚೇರಿ ಬಳಿ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಮಾರಿ ನಡೆದಿತ್ತು. ಅಲ್ಲದೇ ಹಿಂಸಾಚಾರದಿಂದ ನಡೆದ ಮುನ್ಸಿಪಲ್ ಚುನಾವಣೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿತ್ತು. ಅಲ್ಲದೇ ಪಶ್ಚಿಮ ಬಂಗಾಳ ರಾಜ್ಯಪಾಲ ಜಗ್ದೀಪ್‌ ಧಂಖರ್‌ (Jagdeep Dhankhar) ಅವರಿಗೆ  ಈ ಚುನಾವಣೆಯನ್ನು ಅನೂರ್ಜಿತಗೊಳಿಸುವಂತೆ ಒತ್ತಾಯಿಸಿತ್ತು. 

ಹಿಂಸೆ ಖಂಡಿಸಿ ಭಾನುವಾರ, ರಾಜ್ಯಾದ್ಯಂತ ಪ್ರತಿಭಟನಾ ಕಾರ್ಯಕ್ರಮಗಳನ್ನು ನಡೆಸುವುದಾಗಿ ಮತ್ತು ನಗರದಲ್ಲಿ ಅಂದು ಜಾಥಾ ಆಯೋಜಿಸುವುದಾಗಿ ಪಕ್ಷ ಘೋಷಿಸಿತು. ಆದರೆ ಅನುಮತಿ ನಿರಾಕರಿಸಿದರೂ , ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದಾಗ ಪೊಲೀಸರು ತಡೆದರು ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Congress VS TMC: 10 ವರ್ಷದಲ್ಲಿ ಶೇ. 90ರಷ್ಟು ಚುನಾವಣೆಯಲ್ಲಿ ಸೋಲು: ಕಾಂಗ್ರೆಸ್‌ಗೆ ಪ್ರಶಾಂತ್ ಕಿಶೋರ್ ಕ್ಲಾಸ್!

ಬಿಜೆಪಿಯು ಯಾವುದೇ ಸಮಾವೇಶವನ್ನು ತೆಗೆದುಕೊಳ್ಳಲು ಬಯಸಿದಾಗ, ಕೋವಿಡ್ ಮಾನದಂಡಗಳನ್ನು ಉಲ್ಲೇಖಿಸಿ ನಮಗೆ ಅನುಮತಿ ನಿರಾಕರಿಸಲಾಗುತ್ತದೆ. ನಾಗರಿಕ ಚುನಾವಣೆಯಲ್ಲಿ ಹಿಂಸಾಚಾರದ ವಿರುದ್ಧ ನಾವು ಪ್ರತಿಭಟಿಸುತ್ತೇವೆ ಎಂದು ನಾವು ನಿನ್ನೆ ಘೋಷಿಸಿದ್ದೇವೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಜೈಪ್ರಕಾಶ್ ಮಜುಂದಾರ್  ( Jaiprakash Majumdar) ತಿಳಿಸಿದರು.  ಏತನ್ಮಧ್ಯೆ, ಸೋಮವಾರ ಮುನ್ಸಿಪಲ್‌ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿಯೊಬ್ಬರನ್ನು ನಗರದ ಉತ್ತರ ಭಾಗದಲ್ಲಿ ಟಿಎಂಸಿ ಬೆಂಬಲಿಗರು ಆತನ ಒಳ ಉಡುಪನ್ನು ಬಿಚ್ಚಿ ಥಳಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ, ಈ ಕೃತ್ಯದಲ್ಲಿ ತನ್ನ ಬೆಂಬಲಿಗರು ಭಾಗಿಯಾಗಿಲ್ಲ ಎಂದು ಟಿಎಂಸಿ ನಾಯಕರೊಬ್ಬರು ಹೇಳಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪಕ್ಷದ ಸದಸ್ಯರಿಗೆ ತೃಣಮೂಲ ಕಾಂಗ್ರೆಸ್‌ ಅಧಿ ನಾಯಕಿ ಮಮತಾ ಬ್ಯಾನರ್ಜಿ (Mamata Benarjee) ಟ್ವಿಟ್ಟರ್‌ನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

 

 
 

 

Follow Us:
Download App:
  • android
  • ios