Asianet Suvarna News Asianet Suvarna News

PM candidate from TMC: ಮಮತಾ ಮುಂದಿನ ಪ್ರಧಾನಿ ಅಭ್ಯರ್ಥಿ: ಟಿಎಂಸಿ ಮುಖವಾಣಿ

  • ಮಮತಾ ಮುಂದಿನ ಪ್ರಧಾನಿ ಅಭ್ಯರ್ಥಿ: ಟಿಎಂಸಿ ಮುಖವಾಣಿ
  • ಹೊಸ ಕನಸು,  ಕಾಂಗ್ರೆಸ್‌ ಈಗ ‘ನಿಸ್ತೇಜ ಪಕ್ಷ’: ವಾಗ್ದಾಳಿ
Mamata Banerjee as PM Candidate from TMC dpl
Author
Bangalore, First Published Dec 4, 2021, 6:00 AM IST
  • Facebook
  • Twitter
  • Whatsapp

ಕೋಲ್ಕತಾ(ಡಿ.04): 2024ರ ಲೋಕಸಭಾ ಚುನಾವಣೆ ಬಳಿಕ ಪ್ರಧಾನಿಯಾಗುವ ಆಕಾಂಕ್ಷೆ ಹೊಂದಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ತಮ್ಮ ಈ ಕನಸನ್ನು ಶುಕ್ರವಾರ ತಮ್ಮ ದ ಮುಖವಾಣಿ ಮೂಲಕ ಹೊರಹಾಕಿದ್ದಾರೆ. ಅವರ ಈ ಅಭಿಲಾಷೆ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಮಮತಾ ಬುಧವಾರ ಮುಂಬೈನಲ್ಲಿ ಯುಪಿಎ ಅಸ್ತಿತ್ವ ಪ್ರಶ್ನಿಸಿದ್ದರು. ಅದಕ್ಕೆ ಗುರುವಾರ ಕಾಂಗ್ರೆಸ್‌ ನಾಯಕರು ಮಮತಾ ಮೇಲೆ ಸಂಘಟಿತ ದಾಳಿ ನಡೆಸಿದ್ದರು. ಇದಕ್ಕೆ ಶುಕ್ರವಾರ ಟಿಎಂಸಿಯ ಮುಖವಾಗಿ ‘ಜಾಗೋ ಬಾಂಗ್ಲಾ’ದಲ್ಲಿ ಕಾಂಗ್ರೆಸ್‌ ವಿರುದ್ಧ ಮತ್ತೆ ಟೀಕಾ ಪ್ರಹಾರ ನಡೆಸಲಾಗಿದೆ. ಜೊತೆಗೆ ಅದರಲ್ಲಿ ಮಮತಾ ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬುದನ್ನೂ ಸೂಚ್ಯವಾಗಿ ಹೇಳಲಾಗಿದೆ.

Congress VS TMC: 10 ವರ್ಷದಲ್ಲಿ ಶೇ. 90ರಷ್ಟು ಚುನಾವಣೆಯಲ್ಲಿ ಸೋಲು: ಕಾಂಗ್ರೆಸ್‌ಗೆ ಪ್ರಶಾಂತ್ ಕಿಶೋರ್ ಕ್ಲಾಸ್!

ಶುಕ್ರವಾರದ ಪತ್ರಿಕೆಯಲ್ಲಿ ‘ಕಾಂಗ್ರೆಸ್‌ ಈಗಾಗಲೇ ಬಲಗುಂದಿದೆ ಎಂಬುದನ್ನು ಟಿಎಂಸಿ ಹಲವು ಸಮಯದಿಂದ ಹೇಳಿಕೊಂಡೇ ಬಂದಿದೆ. ಬಿಜೆಪಿಯನ್ನು ಎದುರಿಸಲು ಅಗತ್ಯವಾದ ಉತ್ಸಾಹವೇ ಅವರ ಬಳಿ ಇಲ್ಲ. ಅವರು ತಮ್ಮ ಆಂತರಿಕ ಕಚ್ಚಾಟದಲ್ಲೇ ಅದೆಷ್ಟುಮುಳುಗಿ ಹೋಗಿದ್ದಾರೆಂದರೆ ಅವರಿಗೆ ಶಕ್ತಿಶಾಲಿ ವಿಪಕ್ಷ ಕಟ್ಟಲು ಸಮಯವೇ ಇಲ್ಲ. ಇದೀಗ ಯುಪಿಎ ಎಂಬುದೇ ಇಲ್ಲ. ಕಾಂಗ್ರೆಸ್‌ ಇದೀಗ ನಿಸ್ತೇಜ ಪಕ್ಷವಾಗಿದೆ. ಹೀಗಾಗಿ ದೇಶ ಇದೀಗ ಪರ್ಯಾಯ ರಂಗವೊಂದನ್ನು ಬಯಸುತ್ತಿದೆ ಮತ್ತು ವಿಪಕ್ಷಗಳು ಆ ಹೊಣೆಯನ್ನು ಮಮತಾ ಬ್ಯಾನರ್ಜಿಗೆ ನೀಡಿವೆ. ಕಾಂಗ್ರೆಸ್‌ನಿಂದಾ ನಿರ್ವಾತವನ್ನು ತುಂಬುವ ವಿಷಯದಲ್ಲಿ ಅವು ಮಮತಾರತ್ತ ನೋಡುತ್ತಿವೆ. ಅವರೀಗ ವಿಪಕ್ಷಗಳ ಪೈಕಿ ಅತ್ಯಂತ ಜನಪ್ರಿಯ ವ್ಯಕ್ತಿ’ ಎನ್ನುವ ಮೂಲಕ ಮಮತಾರ ಪ್ರಧಾನಿ ಹುದ್ದೆ ಕನಸನ್ನು ಬಹಿರಂಗಪಡಿಸಿದೆ.

ಮುಂಬೈ ಭೇಟಿ, ಹಲವು ನಾಯಕರ ಭೇಟಿ:

ಪಶ್ಚಿಮ ಬಂಗಾಳದಲ್ಲಿ (West Bengal) ಮೂರನೇ ಬಾರಿಗೆ ಸರ್ಕಾರ ರಚಿಸಿದ ನಂತರ ಮಮತಾ ಬ್ಯಾನರ್ಜಿ ಅವರ ವರ್ತನೆ ಆಕ್ರಮಣಕಾರಿಯಾಗಿದೆ. ಅವರು ಎರಡು ದಿನಗಳ ಪ್ರವಾಸದ ಮೇರೆಗೆ ನವೆಂಬರ್ 30 ರಂದು ಮುಂಬೈ ತಲುಪಿದ್ದಾರೆ. ಡಿಸೆಂಬರ್ 1 ರಂದು ಅವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ (NCP Leader Sharad Pawar) ಅವರನ್ನು ಭೇಟಿಯಾದರು. ಇದೇ ವೇಳೆ ಸಮಾಜದ ನಾನಾ ವರ್ಗದ ಜನತೆ ನಾಗರಿಕ ಸಭೆ ನಡೆಸುವ ಮೂಲಕ ಬಿಜೆಪಿ ವಿರುದ್ಧ ಸಜ್ಜುಗೊಳಿಸುವಂತೆ ಮನವಿ ಮಾಡಿದರು.

ಬುಧವಾರ ನಾರಿಮನ್‌ ಪಾಯಿಂಟ್‌ನ ವೈ.ಬಿ.ಚವಾಣ್‌ ಸೆಂಟರ್‌ನಲ್ಲಿ ಮಮತಾ ಅವರು ಸಮಾಜದ ವಿವಿಧ ವರ್ಗದವರೊಂದಿಗೆ ಸಭೆ ನಡೆಸಿದರು. ಇದರಲ್ಲಿ ಚಿತ್ರರಂಗದ ಗಣ್ಯರು, ಸಮಾಜಸೇವಕರು ಮತ್ತಿತರರು ಪಾಲ್ಗೊಂಡಿದ್ದರು. ಜನರಿಂದ ತುಂಬಿದ್ದ ಸಭಾಂಗಣದಲ್ಲಿ ಮಮತಾ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಿದರು. ಮೋದಿ ಸರ್ಕಾರ ತನ್ನನ್ನು ಹೇಗೆ ಕಳಂಕಗೊಳಿಸಲು ಮತ್ತು ಸಿಲುಕಿಸಲು ಪ್ರಯತ್ನಿಸಿದೆ ಎಂದು ಅವರು ಹೇಳಿದರು. ಅವರು ಪಿಎಂ ಕೇರ್ಸ್ ಅನ್ನು ಹಗರಣ ಎಂದು ಕರೆದಿದ್ದಾರೆ. ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗೂಡಿದರೆ ಬಿಜೆಪಿಯನ್ನು ಸೋಲಿಸುವುದು ತುಂಬಾ ಸುಲಭ ಎಂದು ಮಮತಾ ಹೇಳಿದ್ದಾರೆ.

ಮುಂಬೈನಲ್ಲಿ ಕಾಂಗ್ರೆಸ್ ವಿರೋಧಿ ಹೇಳಿಕೆ

ಕಾಂಗ್ರೆಸ್ (Congress) ನೇತೃತ್ವದ ಯುಪಿಎ ಇನ್ನು ಮುಂದೆ ಮೈತ್ರಿಯಾಗಿಲ್ಲ ಎಂದು ಮಮತಾ ಬ್ಯಾನರ್ಜಿ ಇಲ್ಲಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ಅಸ್ತಿತ್ವವಿಲ್ಲ ಎಂದು ಟೀಕಿಸಿದ್ದಾರೆ. ಹೀಗಿರುವಾಗ ಮಮತಾ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ಇಲ್ಲದೆ ಬಿಜೆಪಿಯನ್ನು ಸೋಲಿಸಬಹುದು ಎಂಬ ಯಾವುದೇ ಪಕ್ಷದ ಚಿಂತನೆ ಕೇವಲ ಕನಸು, ಭಾರತೀಯ ರಾಜಕಾರಣದ ಸತ್ಯ ಎಲ್ಲರಿಗೂ ಗೊತ್ತು ಎಂದಿದ್ದಾರೆ. 

ಇನ್ನು ಅತ್ತ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮಮತಾ ಬ್ಯಾನರ್ಜಿಯನ್ನು ಹುಚ್ಚಿ ಎಂದು ಕೂಡ ಹೇಳಿದ್ದಾರೆ. ಮಮತಾಗೆ ಈಗ ಹುಚ್ಚು ಹೆಚ್ಚಿದೆ. ಇಡೀ ಭಾರತವು ಮಮತಾ-ಮಮತಾ ಮಾಡುತ್ತಿದೆ ಎಂದು ಅವರು ಭಾವಿಸುತ್ತಾರೆ, ಆದರೆ ಬಂಗಾಳವು ಮಮತಾ ಅಲ್ಲ ಮತ್ತು ಮಮತಾ ಬಂಗಾಳವಲ್ಲ. ಬಿಜೆಪಿ ಮತ್ತು ಮಮತಾ ಇಬ್ಬರೂ ಬೆರೆತಿದ್ದಾರೆ ಎಂದು ಕಿಡಿ ಕಾರಿದ್ದಾರೆ. 

Follow Us:
Download App:
  • android
  • ios