ಲಕ್ನೋ(ಜ.14): ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಓರ್ವ ರಾಕ್ಷಸಿಯಾಗಿದ್ದು, ಆಕೆಗೆ ಮಹಿಳೆಯರಿಗೆ ಇರಬೇಕಾದ ಯಾವುದೇ ಗುಣಗಳಿಲ್ಲ ಎಂದು  ಉತ್ತರ ಪ್ರದೇಶ ಶಾಸಕ ಸುರೇಂದ್ರ ಸಿಂಗ್ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.

ಇತಿಹಾಸದಲ್ಲಿ ಲಕ್ಷಾಂತರ ಹಿಂದೂಗಳನ್ನು ಕೊಂದವರ ಪರವಾಗಿ ಮಮತಾ ಸಿಎಎ ವಿರೋಧಿ ಹೋರಾಟ ಮಾಡುತ್ತಿದ್ದಾರೆ ಎಂದು ಸುರೇಂದ್ರ ಸಿಂಗ್ ಕಿಡಿಕಾರಿದ್ದಾರೆ.

ಮಮತಾ ಬಾಂಗ್ಲಾದೇಶದ ಪ್ರಧಾನಿಯಾಗಲಿ: ಬಿಜೆಪಿ ಶಾಸಕ!

ಮಹಿಳೆಯರಿಗೆ ಇರಬೇಕಾದ ಯಾವುದೇ ಸೂಕ್ಷ್ಮ ಗುಣಗಳು ಮಮತಾ ಬ್ಯಾನರ್ಜಿ ಅವರಲ್ಲಿ ಇಲ್ಲ ಎಂದು ಸುರೇಂದ್ರ ಸಿಂಗ್ ಹೇಳಿದ್ದು, ಅವರನ್ನು ರಾಕ್ಷಸಿ ಎನ್ನಬಹುದು ಎಂದು ಕಿಚಾಯಿಸಿದ್ದಾರೆ.

ಬಿಜೆಪಿ ದೇವರ ಪಕ್ಷವಾಗಿದ್ದು, ಎಸ್’ಪಿ, ಬಿಎಸ್’ಪಿ, ಟಿಡಿಪಿ ಹಾಗೂ ಟಿಎಂಸಿ ಪಕ್ಷಗಳು ರಾಕ್ಷಸರ ಪಕ್ಷವಾಗಿದೆ ಎಂದು ಸುರೇಂದ್ರ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಸಲ್ಮಾನರಿಗೆ 50 ಪತ್ನಿ, 1050 ಮಕ್ಕಳಿರುತ್ತಾರೆ: ಬಿಜೆಪಿ ಶಾಸಕನ ವಿವಾದ!