ಸಿಲಿಗುರಿ(ಜ.03): ಹೋದಲ್ಲಿ ಬಂದಲ್ಲಿ ಪಾಕಿಸ್ತಾನದ ಹೆಸರನ್ನೇ ಉಚ್ಛರಿಸುವ ಮೋದಿ, ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ ಪ್ರಧಾನಿಯೋ ಎಂದು ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಲೇವಡಿ ಮಾಡಿದ್ದಾರೆ. 

ಸದಾ ಪಾಕಿಸ್ತಾನದ ಕುರಿತಾಗಿಯೇ ಮಾತನಾಡುವ ಪ್ರಧಾನಿ ಮೋದಿ, ಆ ದೇಶದ ರಾಯಭಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದಾರೆ.

ಸಿಲಿಗುರಿಯಲ್ಲಿ ಮಾತನಾಡಿದ ಮಮತಾ, ಪ್ರಧಾನಿ ಮೋದಿ ಅವರಿಗೆ ಭಾರತದ ಬಗ್ಗೆ ಮಾತನಾಡಲು ಸಮಯವೇ ಇಲ್ಲ. ಇದೇ ಕಾರಣಕ್ಕೆ ದಿನಪೂರ್ತಿ ಪಾಕಿಸ್ತಾನದ ಬಗ್ಗೆಯೇ ಮಾತನಾಡುತ್ತಾರೆ ಎಂದು ಕಿಚಾಯಿಸಿದರು. 

ಪೌರತ್ವ ಕಾಯ್ದೆ ಬೆಂಬಲಿಸುತ್ತೀರಾ?: ಈ ನಂಬರ್‌ಗೆ ಮಿಸ್ಡ್ ಕಾಲ್ ಕೊಡಿ ಎಂದ ಬಿಜೆಪಿ!

ಸಂಸ್ಕೃತಿ ಮತ್ತು ಪರಂಪರೆಯಿಂದ ಶ್ರೀಮಂತವಾಗಿರುವ ಭಾರತವನ್ನು ಯಾಕೆ ಸದಾ ಪಾಕಿಸ್ತಾನದೊಂದಿಗೆ ಹೋಲಿಸುತ್ತೀರಾ ಎಂದು ಮಮತಾ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಹೋರಾಟ ಎಂದು ಬಣ್ಣಿಸಿದ ಮಮತಾ, ಈ ದೇಶವನ್ನು ರಕ್ಷಿಸಲು ಬಿಜೆಪಿ ವಿರುದ್ಧ ಹೋರಾಡಬೇಕಾದ ಸಮಯ ಬಂದಿದೆ ಎಂದು ಗುಡುಗಿದರು.

ಪಾಕಿಸ್ತಾನ ಪ್ರಶ್ನಿಸದ ಕಾಂಗ್ರೆಸ್ ನನ್ನನ್ನು ಪ್ರಶ್ನಿಸುತ್ತದೆ: ಮೋದಿ ಗುಡುಗು!