ನವದೆಹಲಿ(ಜ.03): ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ  ವಿರೋಧಿ ಹೋರಾಟ ತೀವ್ರವಾಗುತ್ತಿದ್ದಂತೆ, ಕಾಯ್ದೆಗೆ ಜನತೆಯ ಬೆಂಬಲ ಪಡೆಯಲು ಬಿಜೆಪಿ ಟೋಲ್-ಫ್ರೀ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.

ಪೌರತ್ವ ಕಾನೂನಿಗೆ ತಮ್ಮ ಬೆಂಬಲವನ್ನು ನೋಂದಾಯಿಸಲು 8866288662 ನಂಬರ್’ಗೆ  ಮಿಸ್ಡ್ ಕಾಲ್ ನೀಡುವಂತೆ ಬಿಜೆಪಿ ಅಭಿಯಾನ ಆರಂಭಿಸಿದೆ.

ಸಿಎಎ ಕುರಿತಾದ ಅನುಮಾನವನ್ನು ದೂರ ಮಾಡುವ ಉದ್ದೇಶದೊಂದಿಗೆ ಈ ಅಭಿಯಾನ ಹಮ್ಮಿಕೊಂಡಿರುವುದಾಗಿ ಬಿಜೆಪಿ ಹೇಳಿದೆ.

ರಾಜ್ಯಗಳಿಗೆ ಸಡ್ಡು ಹೊಡೆಯಲು ಸಿಎಎ ಅಡಿ ಆನ್‌ಲೈನ್‌ ಪೌರತ್ವ?

ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ನಾಯಕ ಅನಿಲ್ ಜೈನ್, ಪೌರತ್ವ ಕಾನೂನಿಗೆ ನಿಮ್ಮ ಬೆಂಬಲ ಸೂಚಿಸಲು 8866288662 ನಂಬರ್’ಗೆ ಮಿಸ್ಡ್ ಕಾಲ್ ಮಾಡುವಂತೆ ಮನವಿ ಮಾಡಿದ್ದಾರೆ.

ಇಷ್ಟೇ ಅಲ್ಲದೇ ಬಿಜೆಪಿ ಚುನಾಯಿತ ಪ್ರತಿನಿಧಿಗಳು ‘ಮನೆ ಮನೆಗೆ' ಎಂಬ ನೂತನ ಅಭಿಯಾನದಲ್ಲಿ ಪಾಲ್ಗೊಂಡು ಪೌರತ್ವ ಕಾನೂನಿನ ನಿಬಂಧನೆಗಳ ಕುರಿತು ವಿವರಣೆ ನೀಡಲಿದ್ದಾರೆ ಎಂದು ಅನಿಲ್ ಜೈನ್ ಸ್ಪಷ್ಟಪಡಿಸಿದ್ದಾರೆ.

'ಪಾಕಿಸ್ತಾನದಿಂದ ಬರುತ್ತಿದ್ದ ಆಲಿಯಾ, ಮಾಲಿಯಾಗಳಿಗೆ ಬ್ರೇಕ್‌'
 
ಸಿಎಎ ಜಾರಿಯಿಂದ ದೇಶಾದ್ಯಂತ 1.5 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನವಾಗಲಿದ್ದು, ಪ್ರತಿಪಕ್ಷಗಳ ಸುಳ್ಳು ಆರೋಪಗಳಿಗೆ ಕಿವಿಗೊಡಬೇಡಿ ಎಂದು ಬಿಜೆಪಿ ದೇಶದ ಜನರಲ್ಲಿ ಮನವಿ ಮಾಡಿದೆ.

ಜನವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ