ಮೋದಿ ಬಾಂಗ್ಲಾ ಪ್ರವಾಸಕ್ಕೆ ಕೆರಳಿದ ಮಮತಾ; ಆಯೋಗಕ್ಕೆ ದೂರು ನೀಡಲು ಮುಂದಾದ ಸಿಎಂ!
2 ದಿನದ ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗರಂ ಆಗಿದ್ದಾರೆ. ಮೋದಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಕೋಲ್ಕತಾ(ಮಾ.27): ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳ ನಿಮಿತ್ತ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದಾರೆ. 2 ದಿನ ಪ್ರವಾಸದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಂಡಿದ್ದಾರೆ. ಇದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಕೆರಳಿಸಿದೆ. ಮೋದಿ ನೀತಿ ಸಂಹಿತ ಉಲ್ಲಂಘಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಬಾಂಗ್ಲಾ ವಿಮೋಚನೆಗೆ ಮೋದಿ ಸತ್ಯಾಗ್ರಹ ಸತ್ಯ; ಟೀಕಿಸಿದವರಿಗೆ ದಾಖಲೆ ಸಮೇತ ಉತ್ತರ!.
ಮತದಾರರ ಸೆಳೆಯಲು ಮೋದಿ ವಿದೇಶಿ ನೆಲ ಬಳಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ, ಬಾಂಗ್ಲಾದೇಶಕ್ಕೆ ತೆರಳಿ ಬಂಗಾಳ ಕುರಿತು ಭಾಷಣ ಮಾಡಿದ್ದಾರೆ. ಬಂಗಾಳದಲ್ಲಿ ಕೆಲ ಸಮುದಾಯದ ಒಲೈಕೆಗೆ ಮೋದಿ, ದೇವಾಲಯ ಸೇರಿದಂತೆ ಹಲವು ಸಮುದಾಯ ಗುಂಪುಗಳನ್ನು ಬೇಟಿ ಮಾಡುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಬಾಂಗ್ಲಾ ಪತ್ರಿಕೆಯಲ್ಲಿ ಮೋದಿ ಲೇಖನ, ಮುಜಿಬುರ್ ರೆಹಮಾನ್ ಸಂಘರ್ಷ ನೆನಪಿಸಿಕೊಂಡ ಭಾರತದ ಪ್ರಧಾನಿ!
ನೀತಿ ಸಂಹಿತ ಉಲ್ಲಂಘನೆ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. ಬಂಗಾಳದಲ್ಲಿರುವ ಮತುವಾ ಸಮುದಾಯದ ಪವಿತ್ರ ದೇವಸ್ಥಾನ ಬಾಂಗ್ಲಾದೇಶದಲ್ಲಿನ ಮಾತುವಾ ಮಂದಿರಕ್ಕೆ ಮೋದಿ ಭೇಟಿ ನೀಡಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆ ಇಂದಿನಿಂದ(ಮಾ.27) ಆರಂಭಗೊಂಡಿದೆ. 8 ಹಂತದಲ್ಲಿ ಮತದಾನ ನಡೆಯಲಿದೆ. ಮೇ.02 ರಂದು ಫಲಿತಾಂಶ ಪ್ರಕಟವಾಗಲಿದೆ.