ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಲ್ಡೀವ್ಸ್‌ನ ಮೂವರು ಸಚಿವರ ಅಮಾನತು ಸಾಲದು. ಅಬರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ಭಾರತ ಸರ್ಕಾರ ಆಗ್ರಹಿಸಿದೆ.

ನವದೆಹಲಿ/ಮಾಲೆ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಲ್ಡೀವ್ಸ್‌ನ ಮೂವರು ಸಚಿವರ ಅಮಾನತು ಸಾಲದು. ಅಬರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ಭಾರತ ಸರ್ಕಾರ ಆಗ್ರಹಿಸಿದೆ. ಸೋಮವಾರ ಮಾಲ್ಡೀವ್ಸ್‌ನ ಭಾರತದ ಪ್ರತಿನಿಧಿಯನ್ನು ಕರೆಸಿ ವಿದೇಶಾಂಗ ಸಚಿವಾಲಯ ಈ ಆಗ್ರಹವನ್ನು ವ್ಯಕ್ತಪಡಿಸಿದೆ.

ಉಭಯ ದೇಶಗಳ ನಡುವಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತಕ್ಕೆ ಮಾಲ್ಡೀವ್ಸ್‌ ರಾಯಭಾರಿಯಾಗಿರುವ ಇಬ್ರಾಹಿಂ ಶಹೀಬ್ ಅವರಿಗೆ ಸಮನ್ಸ್‌ ನೀಡಿದ್ದ ವಿದೇಶಾಂಗ ಸಚಿವಾಲಯ ಸಮನ್ಸ್‌ ನೀಡಿತ್ತು. ಈ ವೇಳೆ, ‘ಭಾರತ ಮತ್ತು ಮಾಲ್ಡೀವ್ಸ್‌ ನಡುವಿನ ಸಂಬಂಧವನ್ನು ನಿಮ್ಮ ದೇಶದ ಸಚಿವರು ಹಾಳು ಮಾಡಿದ್ದಾರೆ. ಇದನ್ನು ಸರಿಪಡಿಸಬೇಕಾದ ಜವಾಬ್ದಾರಿ ನಿಮ್ಮ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರದ್ದಾಗಿದೆ. ಹೀಗಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಚಿವರನ್ನು ಅಮಾನತು ಮಾಡಿದರೆ ಸಾಲದು, ಅವರನ್ನು ವಜಾ ಮಾಡಬೇಕು ಎಂದು ಸರ್ಕಾರ ಆಗ್ರಹಿಸಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಭೇಟಿ ನಂತರ MakeMyTripನಲ್ಲಿ ಲಕ್ಷದ್ವೀಪ ಸರ್ಚ್‌ನಲ್ಲಿ 3,400% ಏರಿಕೆ: ನೂತನ ಅಭಿಯಾನ ಪ್ರಾರಂಭ!

ಭಾರತದ ರಾಯಭಾರಿಗೆ ಸ್ಪಷ್ಟನೆ ನೀಡಿದ ಮಾಲ್ಡೀವ್ಸ್‌:

ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಚಿವರು ನೀಡಿರುವ ಹೇಳಿಕೆಗೂ ಮಾಲ್ಡೀವ್ಸ್‌ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ ಎಂದು ಭಾರತದ ರಾಯಭಾರಿಯನ್ನು ಕರೆಸಿ ಮಾಲ್ಡೀವ್ಸ್ ಸರ್ಕಾರ ಸ್ಪಷ್ಟನೆ ನೀಡಿದೆ. ಮಾಲ್ಡೀವ್ಸ್‌ನ ಭಾರತೀಯ ರಾಯಭಾರಿ ಮುನು ಮುಹಾವರ್‌ ಅವರೊಂದಿಗೆ ಮಾತನಾಡಿರುವ ಮಾಲ್ಡೀವ್ಸ್‌ ಸರ್ಕಾರ ಈ ಸ್ಪಷ್ಟನೆ ನೀಡಿದೆ.

ಮಾಲ್ಡೀವ್ಸ್‌ ಬಾಯ್ಕಾಟ್‌ಗೆ ಬೆಂಬಲಿಸಿದ ಡಾ ಬ್ರೋ, ಇಡೀ ಲಕ್ಷದ್ವೀಪವನ್ನೇ ತೋರಿಸಿಬಿಟ್ರು!