Tumakuru: ರೈತಗೆ ಅಪಮಾನ ಕೇಸ್‌: ಕಂಪನಿ ಸಿದ್ಧಾಂತದಲ್ಲಿ ತಪ್ಪಾಗಿದ್ದರೆ ಪರಿಶೀಲನೆ: ಆನಂದ್‌ ಮಹಿಂದ್ರಾ

*  ತಪ್ಪಿತಸ್ಥರ ವಿರುದ್ಧ ಕ್ರಮ: ಕಂಪನಿ ಸಿಇಒ ಹೇಳಿಕೆ
*  ಡೀಲರ್‌ಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡಿಕೆಯ ಅವಿಭಾಜ್ಯ ಅಂಗ
*  ಈ ರೀತಿ ಘಟನೆ ತಪ್ಪಿಸಲು ಸಿಬ್ಬಂದಿಗೆ ತರಬೇತಿ ಮತ್ತು ಕೌನ್ಸಿಲಿಂಗ್‌ 
 

Mahindra Group Chairman Anand Mahindra React on Insult to Tumakuru Farmer Case grg

ನವದೆಹಲಿ(ಜ.26):  ಕಾರು ಖರೀದಿಗೆ ಬಂದಿದ್ದ ರೈತನೋರ್ವನನ್ನು(Farmer) ತಮ್ಮ ಒಡೆತನದ ಕಾರು ಶೋ ರೂಂ ಸಿಬ್ಬಂದಿ ಹಿಯಾಳಿಸಿದ ಕರ್ನಾಟಕದ(Karnataka) ಘಟನೆ ಬಗ್ಗೆ ಉದ್ಯಮಿ ಆನಂದ ಮಹಿಂದ್ರಾ(Anand Mahindra) ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಸಂಬಂಧ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಆನಂದ ಮಹಿಂದ್ರಾ ಅವರು, ‘ನಮ್ಮೆಲ್ಲಾ ಸಮುದಾಯಗಳು ಮತ್ತು ಎಲ್ಲರ ಅಭಿವೃದ್ಧಿಯೇ ಮಹಿಂದ್ರಾ ಕಾರು ಕಂಪನಿಯ(Mahindra Car Company) ಧ್ಯೇಯೋದ್ದೇಶವಾಗಿದೆ. ಈ ಸಿದ್ಧಾಂತದಲ್ಲಿ ಯಾವುದೇ ನ್ಯೂನತೆ ಮತ್ತು ತಪ್ಪಾಗಿದ್ದಲ್ಲಿ ತ್ವರಿತವಾಗಿ ಆ ವಿಚಾರದ ಬಗ್ಗೆ ಗಮನ ಹರಿಸಲಾಗುತ್ತದೆ’ ಎಂದು ಹೇಳಿದ್ದಾರೆ.

Insults Customer ಹೀಯಾಳಿಸಿದ ಸಿಬ್ಬಂದಿಗೆ ಬುದ್ಧಿ ಕಲಿಸಿದ ಗ್ರಾಹಕ, 10 ಲಕ್ಷ ರೂ ಮುಂದಿಟ್ಟ ಬೆನ್ನಲ್ಲೇ ಸೇಲ್ಸ್‌ಮ್ಯಾನ್ ಕ್ಷಮೆ

 

ಕರ್ನಾಟಕದಲ್ಲಿ ಮಹಿಂದ್ರಾ ಕಾರು ಖರೀದಿಗೆ ಹೋಗಿದ್ದ ರೈತನಿಗೆ ತೇಜೋವಧೆ ಮಾಡಲಾಗಿದೆ ಎಂಬುದಾಗಿ ವ್ಯಕ್ತಿಯೊಬ್ಬರು ಟ್ವೀಟ್‌ ಮಾಡಿದ್ದರು. ಈ ದೂರಿನ ಬಗ್ಗೆ ಪ್ರತಿಕ್ರಿಯಿಸಿದ್ದ ಮಹಿಂದ್ರಾ ಅಂಡ್‌ ಮಹಿಂದ್ರಾ(Mahindra and Mahindra ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ವಿಜಯ್‌ ನಕ್ರಾ ಅವರು, ‘ಡೀಲರ್‌ಗಳು(Dealers) ಗ್ರಾಹಕರಿಗೆ(Customers) ಉತ್ತಮ ಸೇವೆ ನೀಡಿಕೆಯ ಅವಿಭಾಜ್ಯ ಅಂಗವಾಗಿದ್ದಾರೆ. ನಮ್ಮೆಲ್ಲಾ ಗ್ರಾಹಕರ ಗೌರವಗಳನ್ನು ನಾವು ದೃಢಪಡಿಸುತ್ತೇವೆ. ಈ ಪ್ರಕರಣದ ಬಗ್ಗೆ ನಾವು ತನಿಖೆ ಕೈಗೊಂಡಿದ್ದು, ಕ್ರಮ ಕೈಗೊಳ್ಳಲಾಗುತ್ತದೆ. ಈ ರೀತಿ ಘಟನೆ ತಪ್ಪಿಸಲು ಸಿಬ್ಬಂದಿಗೆ ತರಬೇತಿ ಮತ್ತು ಕೌನ್ಸಿಲಿಂಗ್‌ ನೀಡಲಾಗುವುದು ಎಂದು ಹೇಳಿದ್ದಾರೆ.

 

ಕಾರು ನೋಡಲು ಬಂದ ರೈತನ ಬಟ್ಟೆ ನೋಡಿ ಅವಮಾನಿಸಿದ ಸಿಬ್ಬಂದಿ: ಅರ್ಧ ತಾಸಲ್ಲಿ 10 ಲಕ್ಷ ತಂದ ರೈತ!

ತುಮಕೂರು: ಕಾರು ಖರೀದಿ ಮಾಡಲು ಬಂದಿದ್ದ ರೈತನೊಬ್ಬನನ್ನು ಬಟ್ಟೆ ನೋಡಿ ಅಳೆದ ಶೋ ರೂಂ ಸಿಬ್ಬಂದಿ, ಕೊನೆಗೆ ಪೆಚ್ಚಾಗಿ ಕ್ಷಮೆ ಕೇಳಿದ ಘಟನೆ ತುಮಕೂರಿನಲ್ಲಿ(Tumakuru) ಜ.21 ರಂದು ನಡೆದಿತ್ತು. ಈ ಘಟನೆ ಅಂಬರೀಷ್‌- ವಿಷ್ಣುವರ್ಧನ್‌ ಅಭಿನಯದ ‘ದಿಗ್ಗಜರು’ ಸಿನಿಮಾವನ್ನು ನೆನಪಿಸುವಂತಿದೆ.

ಹೆಬ್ಬೂರು ಹೋಬಳಿ ರಾಮನಪಾಳ್ಯದ ಕೆಂಪೇಗೌಡ ಎಂಬ ರೈತ ತುಮಕೂರಿನ ಮಹಿಂದ್ರಾ ಶೋ ರೂಂಗೆ ಕಾರು ಕೊಳ್ಳಲು ಭೇಟಿ ನೀಡಿದ್ದರು. ಈ ವೇಳೆ ರೈತನ ಬಟ್ಟೆ, ಆತನೊಂದಿಗೆ ಬಂದಿದ್ದ ಸ್ನೇಹಿತರನ್ನು ಕಂಡ ಶೋ ರೂಂ ಸಿಬ್ಬಂದಿಯೋರ್ವ ಅಗೌರವವಾಗಿ ನಡೆದುಕೊಂಡಿದ್ದಾನೆ. ಕಾರಿನ ಬಗ್ಗೆ ಮಾಹಿತಿ ಕೊಡದೆ ಜೇಬಿನಲ್ಲಿ 10 ರು. ದುಡ್ಡಿಲ್ಲ, ಕಾರು ನೋಡೋಕೆ ಬಂದಿದ್ದೀರಾ ಎಂದು ವ್ಯಂಗ್ಯವಾಗಿ ಮಾತನಾಡಿದ್ದನು.

ಇದರಿಂದ ಸಿಟ್ಟಾದ ರೈತ ಕೆಂಪೇಗೌಡ ನಾನು ಅರ್ಧ ಗಂಟೆಯಲ್ಲಿ 10 ಲಕ್ಷ ರು. ತರುತ್ತೇನೆ. ನೀವು ಇವತ್ತೇ ಕಾರು ಕೊಡ್ತೀರಾ ಎಂದು ಸವಾಲು ಹಾಕಿದ್ದಾನೆ. ಈ ವೇಳೆ ಶೋ ರೂಂ ಸಿಬ್ಬಂದಿ ಇವನೇನು ತರುತ್ತಾನೆ ಎಂದು ಸವಾಲು ಸ್ವೀಕರಿಸಿದ್ದರು.  ರೈತ ಅರ್ಧ ಗಂಟೆಯಲ್ಲಿ 10 ಲಕ್ಷ ರು. ತಂದಾಗ ಅವಾಕ್ಕಾದ ಸಿಬ್ಬಂದಿ ನಾಳೆ ಅಥವಾ ನಾಡಿದ್ದು ಕಾರು ಕೊಡುವುದಾಗಿ ಹೇಳಿದ್ದರು. ಪಟ್ಟು ಬಿಡದ ರೈತ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದನು. ಕೊನೆಗೆ ಶೋರೂಂ ಸಿಬ್ಬಂದಿ ತಮ್ಮ ವರ್ತನೆಗೆ ರೈತ ಕೆಂಪೇಗೌಡರಲ್ಲಿ ಕ್ಷಮೆ ಕೇಳಿ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದರು.

ಮನೆ ಕಟ್ಟಲು ಪಿಡಿಓ ಅಡ್ಡಿ: ಹೈ ಟೆನ್ಷನ್ ಕಂಬವೇರಿದ ರೈತ

ರೈತರಿಗೆ 15 ದಿನದಲ್ಲಿ ಖಾಸಗಿ ಬೆಳೆ ವಿಮೆ ಪರಿಹಾರ: ಭಗವಂತ ಖೂಬಾ

ಬೆಂಗಳೂರು: ರೈತರ ಬೆಳೆ ವಿಮೆಗೆ (Farmer Crop Insurance) ಸಂಬಂಧಪಟ್ಟಂತೆ ಖಾಸಗಿ ವಿಮಾ ಕಂಪನಿಗಳು (Private Insurance Companies) 15 ದಿನದಲ್ಲಿ ಪರಿಹಾರ ವಿತರಣೆ ಮಾಡಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ (Bhagwanth Khuba) ತಾಕೀತು ಮಾಡಿದ್ದರು.

ಜ.21 ರಂದು ವಿಧಾನಸೌಧದಲ್ಲಿ ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್‌ (B.C.Patil) ಜತೆಗೂಡಿ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ (Pradhan Mantri Fasal Bima Yojana) ಸೇರಿದಂತೆ ಇತರೆ ವಿಚಾರಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ನಡೆಸಿದರು. ಈ ವೇಳೆ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವ ವಿಚಾರ ಸಂಬಂಧ ಚರ್ಚಿಸಿದರು. ಸರ್ಕಾರಿ ವಿಮಾ ಕಂಪನಿಗಳು ಸರಿಯಾದ ಸಮಯಕ್ಕೆ ರೈತರಿಗೆ ಬೆಳೆ ವಿಮೆ ನೀಡಲು ಸಾಧ್ಯವಾಗುತ್ತದೆ ಎಂದ ಮೇಲೆ ಖಾಸಗಿ ವಿಮಾ ಕಂಪನಿಗಳು ಸರಿಯಾಗಿ ವಿಮೆ ಪಾವತಿಸಲು ಯಾಕೆ ಸಾಧ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು. 
 

Latest Videos
Follow Us:
Download App:
  • android
  • ios