ಮದುವೆ ಮನೆಗೆ ಅತಿಥಿಯಂತೆ ಬಂದು 7 ವರ್ಷದ ಬಾಲಕಿಯನ್ನ ಹೊತ್ತೊಯ್ದ ಪಾತಕಿ!
ಮಧ್ಯಪ್ರದೇಶದ ಸತ್ನಾದಲ್ಲಿ ಮದುವೆ ಸಮಾರಂಭದಲ್ಲಿ 7 ವರ್ಷದ ಬಾಲಕಿಯನ್ನು ಅಪಹರಿಸಲಾಗಿದೆ. ಅತಿಥಿಯ ವೇಷದಲ್ಲಿ ಬಂದ ಕ್ರಿಮಿನಲ್ ಈ ಕೃತ್ಯ ಎಸಗಿದ್ದು, ಪೊಲೀಸರು ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮಧ್ಯಪ್ರದೇಶ (ಜ.22): ಈಗ ಎಲ್ಲೆಡೆ ಮದುವೆ ಸೀಸನ್ ಶುರುವಾಗಿದೆ. ಮದುವೆ ಮನೆ, ಕಲ್ಯಾಣ ಮಂಟಪದಲ್ಲಿ ನೂರಾರು ಜನರು ಸಂಬಂಧಿಕರು, ಪರಿಚಯಸ್ಥರು ಸೇರುವುದು ಸಾಮಾನ್ಯವಾಗಿರುತ್ತದೆ. ಇದರಲ್ಲಿ ಎಲ್ಲರೂ ಪರಸ್ಪರ ಪರಿಚಯ ಇರುತ್ತಾರೆಂದೇನಿಲ್ಲ. ಇದನ್ನೇ ಬಂಡಾವಳ ಮಾಡಿಕೊಂಡ ದುರುಳರು ಮದುವೆ ಮನೆಗೆ ಅತಿಥಿಗಳಂತೆ, ಬೀಗರಂತೆ ಒಳನುಸುಳಿ ಬಾಲಕಿಯರನ್ನ ಅಪಹರಿಸುವ ಕೃತ್ಯಕ್ಕೆ ಕೈಹಾಕಿದ್ದಾರೆ. ಅಂಥ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದ್ದು. ಕ್ರಿಮಿನಲ್ ಓರ್ವ ಅತಿಥಿಯಂತೆ ಮದುವೆ ಸಮಾರಂಭಕ್ಕೆ ನುಗ್ಗಿ 7 ವರ್ಷದ ಬಾಲಕಿಯನ್ನ ಅಪಹರಿಸಿದ ಘಟನೆ ಎಚ್ಚರಿಕೆ ಪೋಷಕರಿಗೆ ಎಚ್ಚರಿಕೆ ಘಂಟೆಯಾಗಿದೆ.
ಹೌದು, ಮಧ್ಯಪ್ರದೇಶದ ಸತ್ನಾದಲ್ಲಿ ಇಂಥದೊಂದು ಆಘಾತಕಾರಿ ಘಟನೆ ನಡೆದಿದೆ. ಅತುಲ್ ತ್ರಿಪಾಠಿ ಎಂಬ ಕ್ರಿಮಿನಲ್ ಏಳು ವರ್ಷದ ಬಾಲಕಿಯನ್ನ ಅಪಹರಿಸಿದ್ದಾನೆ. ಅದೃಷ್ಟವಶಾತ್ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಾಲಕಿಯನ್ನು ರಕ್ಷಿಸಿ, ಆರೋಪಿಯನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ಸಿಂಧನೂರು ಬಳಿ ಭೀಕರ ಅಪಘಾತ, ಮಂತ್ರಾಲಯ ಮಠದ ಚಾಲಕ ಸೇರಿ ನಾಲ್ವರು ದುರ್ಮರಣ!
ಘಟನೆ ಹಿನ್ನೆಲೆ:
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಭರ್ಹುತ್ ನಗರ ಪ್ರದೇಶದ ವಿವಾಹ ಸಮಾರಂಭ ನಡೆದಿತ್ತು. ಈ ಮದುವೆ ಸಮಾರಂಭದಲ್ಲಿ ಅತಿಥಿಯಂತೆ ಒಳಹೋಗಿರುವ ಆರೋಪಿ ಗುಂಪಿನ ಲಾಭ ಪಡೆದುಕೊಂಡು ಅಲ್ಲಿನ ಜನರೊಂದಿಗೆ ಸೇರಿಕೊಂಡಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ಯಾವುದೋ ಒಂದು ಕುಟುಂಬದ ಕಡೆಯವರು ಎನ್ನುವಂತೆ ವರ್ತಿಸಿದ್ದಾನೆ ಮದುವೆ ಮನೆಯಲ್ಲಿ ಊಟ ಮಾಡಿ ವಿವಾಹ ಸಮಾರಂಭದಲ್ಲಿದ್ದ ಏಳು ವರ್ಷದ ಬಾಲಕಿಯೊಂದಿಗೆ ಪರಾರಿಯಾಗಿದ್ದಾನೆ.
ಇತ್ತ ಬಾಲಕಿ ಕಾಣದಿರುವುದು ಕಂಡು ಪೊಲೀಸರು ಗಾಬರಿಯಾಗಿದ್ದಾರೆ. ಎಲ್ಲ ಕಡೆ ಹುಡುಕಿದರೂ ಬಾಲಕಿ ಸಿಗದಿದ್ದಾಗ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಬಂದು ಮದುವೆ ಸಮಾರಂಭದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿಯನ್ನ ಅಪಹರಿಸಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂಡಲೆ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆಗೆ ಇಳಿದಿದೆ. ಇತ್ತ ಪೊಲೀಸರು ತನ್ನ ಬೆನ್ನು ಹತ್ತಿರುವುದ ಅರಿತ ಆರೋಪಿ ಬಾಲಕಿಯನ್ನ ರೈಲ್ವೆ ಗೇಟ್ ಬಳಿ ಬಿಟ್ಟು ಓಡಿಹೋಗಿದ್ದಾನೆ. ಸ್ಥಳೀಯರ ಮಾಹಿತಿಯಿಂದ ಮಗುವನ್ನ ರಕ್ಷಣೆ ಮಾಡಿದ ಪೊಲೀಸರು. ಬಳಿಕ ಕುಖ್ಯಾತ ಪಾತಕಿ ಆರೋಪಿ ಅತುಲ್ ತ್ರಿಪಾಠಿಯನ್ನ ಆತನ ಮನೆ ಬಳಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಎರಡು ಬೈಕ್ ಮೈ ಮೇಲೆ ಹರಿದರೂ ಬದುಕುಳಿದ ಮಗು: ಬೆಟ್ಟದಿಂದ ಬೀಳುತ್ತಿದ್ದವಳನ್ನ ಬದುಕಿಸಿದ್ದೇ ರೋಚಕ!
ಉಗ್ರ ಅತುಲ್ ತ್ರಿಪಾಠಿ ಕುಖ್ಯಾತ ಕ್ರಿಮಿನಲ್!
ಮೂಲತಃ ಮಜಗವಾನ್ ನಿವಾಸಿಯಾಗಿರುವ ಆರೋಪಿ ಅತುಲ್ ತ್ರಿಪಾಠಿ, ಓರ್ವ ಕುಖ್ಯಾತ ಕ್ರಿಮಿನಲ್ ಆಗಿದ್ದಾನೆ. ಕಿರುಕುಳ, ಹಲ್ಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಈಗಾಗಲೇ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿರುವ ಆರೋಪಿ. ಬಿಡುಗಡೆ ಬಳಿಕ ಮತ್ತೆ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.