ದೋಣಿ ಹುಟ್ಟು ಹಾಕಿ ಮಕ್ಕಳು, ಗರ್ಭಿಣಿಯರ ಆರೈಕೆ; ಅಂಗನವಾಡಿ ಕಾರ್ಯಕರ್ತೆಗೆ ಸಲಾಂ!
ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ವೇಳೆ ಹಲವರಿಗೆ ನೆರವಾಗಿ ಹೀರೋಗಳಾದ ಕತೆ ಗಮನಿಸಿದ್ದೇವೆ. ಇದೀಗ ಕಳೆದ ಎಪ್ರಿಲ್ ತಿಂಗಳಿನಿಂದ ಇದುವರೆಗೆ ನಿರಂತರವಾಗಿ ಗರ್ಭಿಣಿ ಹಾಗೂ ಅಪೌಷ್ಠಿಕ ಮಕ್ಕಳ ಆರೈಕೆ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಗೆ ನಿಜಕ್ಕೂ ಸಲಾಂ ಹೇಳಲೇಬೇಕು. ಕಾರಣ ಪ್ರತಿ ದಿನ 18 ಕಿ.ಮೀ ಸ್ವತಃ ದೋಣಿ ಹುಟ್ಟು ಹಾಕಿ ತೆರಳಿ ಈ ಕೆಲಸ ಮಾಡುತ್ತಿದ್ದಾರೆ.
ನಾಸಿಕ್(ನ.15): ಬೆಟ್ಟ ಗುಡ್ಡದ ನಡುವೆ ಇರುವ ಬುಡಕಟ್ಟು ಜನಾಂಗ. ವಾಹನ ಸಂಚಾರಕ್ಕೆ ದಾರಿಯೇ ಇಲ್ಲ, ಮತ್ತೊಂದೆಡೆ ನರ್ಮದಾ ನದಿ, ಹೀಗಾಗಿ ಬುಡಕಟ್ಟು ಜನಾಂಗಕ್ಕೆ ತುರ್ತು ಅಗತ್ಯ ಬಿದ್ದರೆ ದೇವರೆ ಗತಿ. ಇಂತಹ ಬುಡಕಟ್ಟು ಜನಾಂಗದ ನೆರವಿಗೆ ನಿಂತಿದ್ದು 27ರ ಹರೆಯದ ಅಂಗನವಾಡಿ ಕಾರ್ಯಕರ್ತೆ ರೇಲು ವಾಸವೆ.
ರಾಜ್ಯದ ಅಂಗನವಾಡಿ ಟೀಚರ್ ಗಳಿಗೆ ಸ್ಮಾರ್ಟ್‌ಫೋನ್!.
ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯ ಚಿಮಲ್‌ಖಡಿ ಗ್ರಾಮದಲ್ಲಿ ಹಲವು ಬುಡಕಟ್ಟು ಜನಾಂಗ ವಾಸವಿದೆ. ಇಲ್ಲಿನ ಅಪೌಷ್ಠಿಕತೆಯಿಂದ ಹುಟ್ಟಿದ 25 ಮಕ್ಕಳು ಹಾಗೂ 7 ಗರ್ಭಿಣಿಯರ ಆರೈಕೆಗೆ ಅಂಗನವಾಡಿ ಕಾರ್ಯಕರ್ತೆ ರೇಲು ವಾಸವೆ ಟೊಂಕ ಕಟ್ಟಿ ನಿಂತರು. ಆದರೆ ಚಿಮಲ್‌ಖಡಿ ಗ್ರಾಮಕ್ಕೆ ತೆರಲು ಯಾವುದೇ ಮಾರ್ಗವಿರಲಿಲ್ಲ.
ರೇಲು ವಾಸವೆ ಸ್ಥಳೀಯ ಮೀನುಗಾರರಿಗೆ ಸಣ್ಣ ದೋಣಿ ಪಡೆದುಕೊಂಡಿದ್ದಾಳೆ. ಬಳಿಕ ನರ್ಮದಾ ನದಿ ಮೂಲಕ 9 ಕಿ.ಮೀ ತೆರಳಲು ಹಾಗೂ 9 ಕಿ.ಮೀ ಮರಳಿ ಬರಲು ಒಟ್ಟು 18 ಕಿ.ಮೀ ಸ್ವತಃ ಧೋನಿ ಹುಟ್ಟು ಹಾಕಿ ತೆರಳಿ ಆರೈಕೆ ಮಾಡುತ್ತಿದ್ದಾರೆ. ಕಳೆದ ಎಪ್ರಿಲ್ ತಿಂಗಳಿನಿಂದ ಸದ್ದಿಲ್ಲದೆ ಪ್ರಾಮಾಣಿಕವಾಗಿ ತಮ್ಮ ಕಲಸ ಮಾಡಿದ್ದಾರೆ. ರೇಲು ವಾಸವೆ ಕಾರ್ಯಕ್ಕೆ ಇದೀಗ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ..