ಭಾರತ ರತ್ನ ಸಚಿನ್ ತೆಂಡುಲ್ಕರ್ ಮೇಲೆ ಕಾಂಗ್ರೆಸ್ ತಿರುಗಿ ಬಿದ್ದಿದೆ. ದೇಶ ಮೊದಲು ಎಂದಿದ್ದೇ ಸಚಿನ್ ತಪ್ಪು. ಇಷ್ಟಕ್ಕೆ ಸುಮ್ಮನಾಗದ ನಾಯಕರು ಸಚಿನ್ ಮೇಲೆ ಮುಗಿ ಬೀಳುತ್ತಲೇ ಇದ್ದರು. ಎನ್‌ಸಿಪಿ ನಾಯಕ ಶರದ್ ಪವಾರ್ ಸಚಿನ್‌ಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ನಾಯಕ ಸಚಿನ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ನವದೆಹಲಿ(ಫೆ.07): ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಇದೀಗ ಕಾಂಗ್ರೆಸ್ ಹಾಗೂ ಕೆಲವರಿಗೆ ಶತ್ರುವಾಗಿ ಪರಿಣಮಿಸಿದ್ದಾರೆ. ರೈತ ಪ್ರತಿಭಟನೆ ಹೆಸರಿನಲ್ಲಿ ವಿದೇಶಿ ಸೆಲೆಬ್ರೆಟಿಗಳು ಭಾರತದ ವಿರುದ್ಧ ಷಡ್ಯಂತ್ರ ಪ್ರಯತ್ನಕ್ಕೆ ಸಚಿನ್ ತೆಂಡುಲ್ಕರ್ ತಿರುಗೇಟು ನೀಡಿದ್ದರು. ಭಾರತದ ಆತಂಕರಿಕ ವಿಚಾರಕ್ಕೆ ಕೈಹಾಕಬೇಡಿ ಎಂದು ಟ್ವೀಟ್ ಮಾಡಿದ್ದರು. ಇದು ಕಾಂಗ್ರೆಸ್, ಎನ್‌ಸಿ ಸೇರಿದಂತೆ ಹಲವರಿಗೆ ನುಂಗಲಾರದ ತುತ್ತಾಗಿ ಪರಿಣಿಸಿದೆ.
ಸಚಿನ್ ತೆಂಡುಲ್ಕರ್‌ಗೆ ಎಚ್ಚರಿಕೆ ನೀಡಿದ ಶರದ್ ಪವಾರ್‌ಗೆ ಭಾರತೀಯರಿಂದ ಮಂಗಳಾರತಿ!
ಸಚಿನ್ ತೆಂಡುಲ್ಕರ್ ಇತರ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದರಬೇಕು ಎಂದು ಸಚಿನ್ ಟ್ವೀಟ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಪಂಜಾಬ್ ಕಾಂಗ್ರೆಸ್ ಸಂಸದ ಜಸ್ಬೀರ್ ಗಿಲ್ ಸಚಿನ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಸಚಿನ್ ಭಾರತ ರತ್ನಕ್ಕೆ ಅರ್ಹರಲ್ಲ ಎಂದಿದ್ದಾರೆ.
ದೇಶ ಮೊದಲು ಎಂದ ಸಚಿನ್ ತೆಂಡುಲ್ಕರ್‌ಗೆ ಭಾರಿ ಬೆಂಬಲ!
ಇಷ್ಟಕ್ಕೆ ಸುಮ್ಮನಾಗದ ಜಸ್ಬೀರ್, ಒಂದಕ್ಕೊಂದು ಸಂಬಂಧವಿಲ್ಲದ ಹೇಳಿಕೆ ನೀಡಿದ್ದಾರೆ. ಸಚಿನ್ ತೆಂಡುಲ್ಕರ್ ಕೇಂದ್ರ ಸರ್ಕಾರದ ಪರವಾಗಿ ಟ್ವೀಟ್ ಮಾಡುತ್ತಿದ್ದಾರೆ. ಸಚಿನ್‌ಗೆ ಕೇಂದ್ರದಿಂದ ಕೆಲ ಸಹಾಯದ ಅಗತ್ಯವಿದೆ. ಹಾಗಾಗಿ ಈ ರೀತಿ ಟ್ವೀಟ್ ಮಾಡುತ್ತಿದ್ದಾರೆ. ಸಚಿನ್ ಪುತ್ರ ಐಪಿಎಲ್‌ಗೆ ಆಯ್ಕೆಯಾಗಬೇಕಿದೆ. ಹೀಗಾಗಿ ತನ್ನ ಕೈಲಾದ ಸಹಾಯವನ್ನು ಕೇಂದ್ರಕ್ಕೆ ಮಾಡುತ್ತಿದ್ದಾರೆ ಎಂದು ಜಸ್ಬೀರ್ ಹೇಳಿದ್ದಾರೆ.
ಈ ರೀತಿ ತನ್ನ ವೈಯುಕ್ತಿಕ ಅವಶ್ಯಕತೆಗೆ ಕೇಂದ್ರದ ಪರವಾಗಿ ಟ್ವೀಟ್ ಮಾಡುವ ಸಚಿನ್ ತೆಂಡುಲ್ಕರ್ ಭಾರತ ರತ್ನಕ್ಕೆ ಅರ್ಹರೇ ಎಂದು ನೀವೇ ತೀರ್ಮಾನಿಸಿ. ನನ್ನ ಪ್ರಕಾರ ಅಲ್ಲ ಎಂದು ಜಸ್ಬೀರ್ ಹೇಳಿದ್ದಾರೆ.
ಆದರೆ ಸಚಿನ್ ಟ್ವೀಟ್ ಬೆನ್ನಲ್ಲೇ ದೇಶಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದೆ. ಸಚಿನ್ ಜೊತೆ ನಾವಿದ್ದೇವೆ. ಸಚಿನ್ ವಿರುದ್ಧ ತಿರುಗಿಬಿದ್ದ ನಾಯಕರಿಗೆ ಭಾರತೀಯರು ಮಂಗಳಾರತಿ ಮಾಡುತ್ತಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 7, 2021, 7:21 PM IST