Asianet Suvarna News Asianet Suvarna News

ಮತ್ತೊಬ್ಬ ಪ್ಯಾರಾಗ್ಲೈಡರ್ ಮೇಲಿಂದ ಬಿದ್ದು ಸಾವು: ಹಿಮಾಚಲದಲ್ಲಿ ಅವಘಡ

ನಿನ್ನೆಯಷ್ಟೇ ಪ್ಯಾರಾಗ್ಲೈಡಿಂಗ್ ವೇಳೆ ಗುಜರಾತ್‌ನಲ್ಲಿ 50 ಅಡಿ ಆಳದಿಂದ ಬಿದ್ದು, ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಅದೇ ದಿನ ಮತ್ತೊಂದು ಪ್ಯಾರಾ ಗ್ಲೈಡಿಂಗ್ ಅನಾಹುತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ದುರಂತದಲ್ಲಿಯೂ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

Maharashtra tourist Another paraglider falls to death in Himachals kulu akb
Author
First Published Dec 26, 2022, 5:20 PM IST

ಶಿಮ್ಲಾ: ನಿನ್ನೆಯಷ್ಟೇ ಪ್ಯಾರಾಗ್ಲೈಡಿಂಗ್ ವೇಳೆ ಗುಜರಾತ್‌ನಲ್ಲಿ 50 ಅಡಿ ಆಳದಿಂದ ಬಿದ್ದು, ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಅದೇ ದಿನ ಮತ್ತೊಂದು ಪ್ಯಾರಾ ಗ್ಲೈಡಿಂಗ್ ಅನಾಹುತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ದುರಂತದಲ್ಲಿಯೂ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದ ಕುಲು ಮನಾಲಿಯಲ್ಲಿ ಪ್ಯಾರಾ ಗ್ಲೈಡಿಂಗ್ ವೇಳೆ ಈ ಅನಾಹುತ ಸಂಭವಿಸಿದೆ. ಮಹಾರಾಷ್ಟ್ರದ 30 ವರ್ಷದ ಪ್ರವಾಸಿಗರೊಬ್ಬರು ಕುಲು ಜಿಲ್ಲೆಯ ದೋಭಿ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ನೂರಾರು ಅಡ್ಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಹಾರಾಟದ ಸಮಯದಲ್ಲಿ ಪ್ಯಾರಾಗ್ಲೈಡಿಂಗ್ ಮೇಲ್ಪದರ ವೈಫಲ್ಯದಿಂದಾಗಿ ನೂರಾರು ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿದ್ದಾರೆ. ಇವರ ಪ್ಯಾರಾಗ್ಲೈಡರ್ ಪೈಲಟ್ ಸುರಕ್ಷಿತವಾಗಿದ್ದಾರೆ. 

ಮೃತ ವ್ಯಕ್ತಿಯನ್ನು ಮಹಾರಾಷ್ಟ್ರದ (Maharashtra) ಸತಾರಾ ಜಿಲ್ಲೆಯ ಶಿರ್ವಲ್ ಗ್ರಾಮದ (Shirval village ) ಸೂರಜ್ ಸಂಜಯ್ ಶಾ ಎಂದು ಗುರುತಿಸಲಾಗಿದೆ. ಈ ಬಗ್ಗೆ ಕುಲು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಗುರುದೇವ್ ಶರ್ಮಾ (Gurdev Sharma) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಭಾನುವಾರ ಪೊಲೀಸರಿಗೆ ಪ್ಯಾರಾಗ್ಲೈಡರ್ ಓರ್ವ ಭಾರೀ ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಈ ಅವಘಡದಲ್ಲಿ ಪೈಲಟ್ ಸುರಕ್ಷಿತವಾಗಿದ್ದಾರೆ, ಪ್ರವಾಸಿಗ ಮೇಲಿನಿಂದ ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ದೊಭಿ (Dobhi area) ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ತೆರೆದುಕೊಳ್ಳದ ಪ್ಯಾರಾಗ್ಲೈಡಿಂಗ್ ಮೇಲ್ಪದರ: 50 ಅಡಿ ಮೇಲಿಂದ ಬಿದ್ದು ಕೊರಿಯಾ ಪ್ರಜೆ ಸಾವು

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಶಿರ್ವಲ್ ಗ್ರಾಮದ ಸೂರಜ್ ಸಂಜಯ್ ಶಾ (Suraj Sanjay Shah) ತಮ್ಮ ಸ್ನೇಹಿತರೊಂದಿಗೆ ಹಿಮಾಚಲ ಪ್ರದೇಶಕ್ಕೆ ಪ್ರವಾಸ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದು) ಮತ್ತು ಸೆಕ್ಷನ್ 304A (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗಿದ್ದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. 

ನಿನ್ನೆ ದೇಶದಲ್ಲಿ ಇದೇ ರೀತಿ ಮತ್ತೊಂದು ಪ್ರಕರಣ ನಡೆದಿತ್ತು. ಗುಜರಾತ್‌ನ ಮೆಹ್ಸಾನ್ ಜಿಲ್ಲೆಯಲ್ಲಿ ಪ್ಯಾರಾಗ್ಲೈಡಿಂಗ್ ಸಾಹಸ ಕ್ರೀಡೆಯಲ್ಲಿ ಭಾಗಿಯಾದ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು 50 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದರು. ಮೆಹ್ಸಾನ್ (Mehsana) ಜಿಲ್ಲೆಯ ಕಾದಿ ನಗರದ (Kadi town) ಸಮೀಪವಿರುವ ವಿಸ್ತಾಪುರ (Visatpura) ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದ್ದು, ದಕ್ಷಿಣ ಕೊರಿಯಾದ ಶಿನ್ ಬ್ಯೊಂಗ್ ಮೂನ್ (Shin Byeong Moon) ಎಂಬುವವರು 50 ಅಡಿ ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದರು.

ಅಯ್ಯೋ ಒಮ್ಮೆ ಇಳ್ಸು ಗುರು : ಶ್ವಾನವನ್ನ ಪ್ಯಾರಾಗ್ಲೈಡಿಂಗ್ ಕರೆದೊಯ್ದ ಮಾಲೀಕ

ಪ್ಯಾರಾಗ್ಲೈಡಿಂಗ್ ಸಾಹ ಕ್ರೀಡೆಯಾಡಲು ಹೊರಟ ಶಿನ್ ಬ್ಯೊಂಗ್ ಅವರ ಪ್ಯಾರಾಗ್ಲೈಡರ್‌ನ ಮೇಲಾವರಣವೂ(ಮೇಲ್ಪದರ) ಸರಿಯಾಗಿ ತೆರೆದುಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಸಮತೋಲನ ಕಳೆದುಕೊಂಡು ಮೇಲಿನಿಂದ ಕೆಳಗೆ ಬಿದ್ದು ಅವರು ಸಾವನ್ನಪ್ಪಿದ್ದರು. 50 ಅಡಿ ಎತ್ತರದಿಂದ ಕೆಳಗೆ ಬಿದ್ದು ಪ್ರಜ್ಞಾಶೂನ್ಯರಾದ ಅವರನ್ನು ಕೂಡಲೇ ಅವರ ಸ್ನೇಹಿತರು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಚಿಕಿತ್ಸೆ ವೇಳೆ  ಶಿನ್ ಬ್ಯೊಂಗ್ ಮೂನ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ವೈದ್ಯರ ಪ್ರಕಾರ, ಈ ವ್ಯಕ್ತಿಗೆ ಮೇಲಿನಿಂದ ಕೆಳಗೆ ಬೀಳುವ ವೇಳೆಯೇ ಆಘಾತದಿಂದ ಹೃದಯಾಘಾತವಾಗಿದೆ ಎಂದು ಕೆಲ ಅಧಿಕೃತ ಮೂಲಗಳು ತಿಳಿಸಿವೆ. ಮೃತ ದಕ್ಷಿಣ ಕೊರಿಯಾ ಪ್ರಜೆ ಶಿನ್ ಹಾಗೂ ಅವರ ಸ್ನೇಹಿತರು ವಡೋದರಾಕ್ಕೆ (Vadodara) ಪ್ರವಾಸಕ್ಕೆ ಬಂದಿದ್ದು, ಅಲ್ಲಿ ತಮ್ಮ ಪರಿಚಯಸ್ಥರನ್ನು ಭೇಟಿಯಾಗಿದ್ದರು, ಅವರು ಕಾದಿ ನಗರದ ವಿಸ್ತಾರ್‌ಪುರ ಗ್ರಾಮದಲ್ಲಿರುವ ಪ್ಯಾರಾ ಗ್ಲೈಡಿಂಗ್ ಸಾಹಸ ಕ್ರೀಡಾಸ್ಥಳಕ್ಕೆ ಅವರನ್ನು ಕರೆದುಕೊಂಡು ಬಂದಿದ್ದರು. ನಂತರ ಶಿನ್ ಹಾಗೂ ಆತನ ಸ್ನೇಹಿತರು ಪ್ಯಾರಾಗ್ಲೈಡಿಂಗ್ ಸಾಹಸ ಕ್ರೀಡೆಯಾಡಲು ಹೋಗಿದ್ದರು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ನಿಕುಂಜಿ ಪಟೇಲ್ ಹೇಳಿದ್ದಾರೆ. 

Follow Us:
Download App:
  • android
  • ios