ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆಯ ಮೇಲೆ ಎಚ್ಚರಿಕೆ ನೀಡುತ್ತಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆಗೆ, 14 ವರ್ಷದ ಹಿಂದಿನ ಕೇಸ್ ನಲ್ಲಿ ಸಾಂಗ್ಲಿಯ ಜಿಲ್ಲಾ ಕೋರ್ಟ್ ಜಾಮೀನುತಹಿತ ವಾರಂಟ್ ಜಾರಿ ಮಾಡಿದೆ.

ಸಾಂಗ್ಲಿ (ಮೇ.3): 14 ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ( ಎಂಎನ್ ಎಸ್ ) ಮುಖ್ಯಸ್ಥ ರಾಜ್ ಠಾಕ್ರೆಗೆ ( Raj Thackeray ) ಮಹಾರಾಷ್ಟ್ರದ ( Maharashtra ) ಸಾಂಗ್ಲಿಯ ಜಿಲ್ಲಾ ಕೋರ್ಟ್ ಜಾಮೀನುರಹಿತ ವಾರಂಟ್ ( Non Bailable Warrant ) ಜಾರಿ ಮಾಡಿದೆ. ಮಸೀದಿಗಳಲ್ಲಿ ( mosque ) ಧ್ವನಿವರ್ಧಕಗಳನ್ನು (loudspeakers ) ತೆಗೆದುಹಾಕುವಂತೆ ಒತ್ತಾಯಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆಯ ಮೇಲೆ ಎಚ್ಚರಿಕೆ ನೀಡುತ್ತಿದ್ದ ರಾಜ್ ಠಾಕ್ರೆ ವಿರುದ್ಧ ಸೇಡಿನ ಕ್ರಮವಾಗಿ ಈ ವಾರಂಟ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

2008 ರಲ್ಲಿ, ರಾಜ್ ಠಾಕ್ರೆ ವಿರುದ್ಧ ಐಪಿಸಿಯ ಸೆಕ್ಷನ್ 109 ಮತ್ತು 117 (ಅಪರಾಧದ ಪ್ರಚೋದನೆ) ಅಡಿಯಲ್ಲಿ ಉದ್ರೇಕಕಾರಿ ಭಾಷಣಗಳನ್ನು ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಏಪ್ರಿಲ್ 6 ರಂದು ಜಾಮೀನು ರಹಿತ ವಾರಂಟ್ ಹೊರಡಿಸುವ ವೇಳೆ. ಸಾಂಗ್ಲಿ ಜಿಲ್ಲೆಯ ಶಿರಾಲಾದಲ್ಲಿ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್, ಎಂಎನ್‌ಎಸ್ (Maharashtra Navnirman Sena) ಮುಖ್ಯಸ್ಥರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಮುಂಬೈ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದರು.

ಠಾಕ್ರೆ ಮತ್ತು ಮತ್ತೊಬ್ಬ ಎಂಎನ್‌ಎಸ್ (MNS) ನಾಯಕ ಶಿರೀಷ್ ಪರ್ಕರ್ ವಿರುದ್ಧ ಮುಂಬೈ ಪೊಲೀಸ್ ಕಮಿಷನರ್ ಮತ್ತು ಖೇರ್ವಾಡಿ ಪೊಲೀಸ್ ಠಾಣೆಯ ಮೂಲಕ ನ್ಯಾಯಾಧೀಶರು ವಾರಂಟ್ ಹೊರಡಿಸಿದ್ದು, ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗಿದ್ದಾರೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಜ್ಯೋತಿ ಪಾಟೀಲ್ ಹೇಳಿದ್ದಾರೆ.
ಜೂನ್ 8 ರ ಮೊದಲು ವಾರಂಟ್ ಅನ್ನು ಜಾರಿಗೊಳಿಸಲು ಮತ್ತು ಇಬ್ಬರೂ ನಾಯಕರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯವು ಪೊಲೀಸರನ್ನು ಕೇಳಿದೆ ಎಂದು ಅವರು ಹೇಳಿದರು. 2008 ರಲ್ಲಿ, ಸ್ಥಳೀಯ ಯುವಕರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವಂತೆ ಎಂಎನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಜ್ ರಾಜ್ ಠಾಕ್ರೆಯವರ ಬಂಧನವಾಗಿತ್ತು. ಇದರ ವಿರುದ್ಧ ಶಿರಾಲದಲ್ಲಿ ಎಂಎನ್ ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಸಿಎಂ ಮನೆಯಲ್ಲಿ ಇಂದು ಅಮಿತ್ ಶಾ ಔತಣ ರಾಜಕೀಯ, ತೀವ್ರ ಕುತೂಹಲ

2012 ರ ಹಿಂದಿನ ರಾಜಕೀಯ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಹೇಳುವ ಸರ್ಕಾರಿ ನಿಯಮವಿದೆ ಎಂದು ಸ್ಥಳೀಯ ಎಂಎನ್‌ಎಸ್ ಕಾರ್ಯಕಾರಿಯೊಬ್ಬರು ಪ್ರತಿಪಾದಿಸಿದರು. ಹಾಗಿದ್ದರೂ ರಾಜ್ ಠಾಕ್ರೆ ಅವರು ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಸಮಸ್ಯೆಯನ್ನು ಎತ್ತಿದ್ದರಿಂದ ಈ ಪ್ರಕರಣವನ್ನು ಉಲ್ಬಣಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಅಮಿತ್‌ ಶಾ ರಾಜ್ಯ ಪ್ರವಾಸದಿಂದ ಬಿಜೆಪಿಯಲ್ಲಿ ಸಂಚಲನ: ಇಂದು ಸಂಜೆ ಮಹತ್ವದ ಸಭೆ

ಮಹಾ ಪೊಲೀಸರಿಗೆ ರಜೆ ಕ್ಯಾನ್ಸಲ್:
ಮೇ 3 ರ ಒಳಗಾಗಿ ಮಹಾರಾಷ್ಟ್ರದಲ್ಲಿರುವ ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಖ್ರೆ ಡೆಡ್ ಲೈನ್ ನೀಡಿದ್ದರು. ಡೆಡ್ ಲೈನ್ ಮುಗಿದ ಹಿನ್ನಲೆಯಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ನೀಡಲಾಗಿದ್ದ ರಜೆಗಳನ್ನು ಪೊಲೀಸ್ ಇಲಾಖೆ ರದ್ದು ಮಾಡಿದೆ. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ನಿಭಾಯಿಸಲು ಮಹಾರಾಷ್ಟ್ರ ಪೊಲೀಸರ ಸಂಪೂರ್ಣ ಪಡೆ "ಎಚ್ಚರವಾಗಿದೆ ಮತ್ತು ಸಿದ್ಧವಾಗಿದೆ" ಎಂದು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ ಅವರ ಭಾಷಣ - ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆಗೆದುಹಾಕುವ ಎಚ್ಚರಿಕೆಯನ್ನು ಮತ್ತೊಮ್ಮೆ ಹೇಳಿದರು. ಅವರ ಈ ಹೇಳಿಕೆಯನ್ನು "ಪರಿಶೀಲಿಸಲಾಗುತ್ತಿದೆ" ಮತ್ತು "ಅಗತ್ಯವಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಮಹಾರಾಷ್ಟ್ರ ಡಿಜಿಪಿ ರಜನೀಶ್ ಸೇಠ್ ಕೂಡ ಸೇರಿಸಿದ್ದಾರೆ.