24 ಗಂಟೆಯ ಒಳಗೆ ಸರ್ಕಾರಿ ಆಸ್ಪತ್ರೆಯಲ್ಲಿ 12 ಮಕ್ಕಳು ಸೇರಿದಂತೆ 24 ಮಂದಿ ಸಾವು!
ಸಿಬ್ಬಂದಿ ವರ್ಗಾವಣೆಯಿಂದ ಆಸ್ಪತ್ರೆಯು ತೊಂದರೆ ಎದುರಿಸುತ್ತಿದ್ದು, ಔಷಧ ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.
ನವದೆಹಲಿ (ಅ.2): ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 24 ಮಂದಿ ಸಾವು ಕಂಡಿದ್ದಾರೆ. ಇದರಲ್ಲಿ 12 ಮಕ್ಕಳು ಕೂಡ ಸೇರಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸುಮಾರು 12 ಮಕ್ಕಳು ಸಾವನ್ನಪ್ಪಿದ್ದಾರೆ. 12 ವಯಸ್ಕರು ವಿವಿಧ ಕಾಯಿಲೆಗಳಿಂದ (ಹಾವು ಕಡಿತ, ಆರ್ಸೆನಿಕ್ ಮತ್ತು ವಿಷ ಇತ್ಯಾದಿ) ಸಾವನ್ನಪ್ಪಿದ್ದಾರೆ. ವಿವಿಧ ಸಿಬ್ಬಂದಿಗಳ ವರ್ಗಾವಣೆಯಿಂದಾಗಿ, ನಮಗೆ ತೊಂದರೆಯಾಗಿದೆ. ಹಾಫ್‌ಕಿನ್ ಇನ್‌ಸ್ಟಿಟ್ಯೂಟ್‌ನಿಂದ ಔಷಧಿಗಳನ್ನು ಖರೀದಿಸಬೇಕಾಗಿತ್ತು ಆದರೆ ಅದು ಸಹ ಆಗಿಲ್ಲ. ಅಲ್ಲದೆ, ಈ ಆಸ್ಪತ್ರೆಗೆ ರೋಗಿಗಳು ದೂರದಿಂದ ಬರುತ್ತಾರೆ ಮತ್ತು ಅನೇಕ ರೋಗಿಗಳಿಗೆ ಮಂಜೂರಾದ ಬಜೆಟ್‌ಗೆ ಕೂಡ ಸಮಸ್ಯೆಯಾಗಿದೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ಶ್ಯಾಮರಾವ್ ವಾಕೋಡೆ ಹೇಳಿದ್ದನ್ನು ಎನ್‌ಐಎ ಪ್ರಕಟಿಸಿದೆ.
"ಕಳೆದ 24 ಗಂಟೆಗಳಲ್ಲಿ, ನಾಂದೇಡ್ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ (GMCH) 24 ಸಾವುಗಳು ವರದಿಯಾಗಿವೆ. ಇವುಗಳಲ್ಲಿ 12 ಮಕ್ಕಳು ಕೆಲವು ಸ್ಥಳೀಯ ಖಾಸಗಿ ಆಸ್ಪತ್ರೆಗಳಿಂದ ಇಲ್ಲಿಗೆ ಬಂದಿದ್ದರು. ಉಳಿದ ಸಾವುಗಳು ವಿವಿಧ ಕಾರಣಗಳಿಗಾಗಿ ಆಗಿವೆ. ಛತ್ರಪತಿ ಸಂಭಾಜಿನಗರ (ಹಿಂದಿನ ಔರಂಗಾಬಾದ್) ಜಿಲ್ಲೆಯಿಂದ ಮೂರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಮಂಗಳವಾರ ಮಧ್ಯಾಹ್ನ 1 ಗಂಟೆಯೊಳಗೆ ವರದಿ ಸಲ್ಲಿಸಲು ಆದೇಶ ನೀಡಲಾಗಿದೆ ಎಂದು ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶಕ ಡಾ.ದಿಲೀಪ್ ಮಹೈಸೇಕರ್ ಪಿಟಿಐಗೆ ತಿಳಿಸಿದರು. ಕಾಂಗ್ರೆಸ್ ಮುಖಂಡ ಅಶೋಕ್ ಚವಾಣ್ ಅವರು 24 ಸಾವು ಕಂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. “ಡಾ. ಶಂಕರರಾವ್ ಚವಾಣ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸುಮಾರು 24 ಜನರ ಸಾವು ವರದಿಯಾಗಿದೆ ಮತ್ತು ಆದ್ದರಿಂದ ನಾನು ಇಲ್ಲಿಗೆ ಬಂದು ಡೀನ್ ಅವರನ್ನು ಭೇಟಿ ಮಾಡಿದ್ದೇನೆ. ಪರಿಸ್ಥಿತಿ ಚಿಂತಾಜನಕ ಮತ್ತು ಗಂಭೀರವಾಗಿದೆ" ಎಂದು ಚವಾಣ್ ಹೇಳಿದ್ದಾರೆ.
"ಸರ್ಕಾರವು ಈ ಬಗ್ಗೆ ತಕ್ಷಣ ಗಮನ ನೀಡಬೇಕು ಮತ್ತು ಸಹಾಯವನ್ನು ಒದಗಿಸಬೇಕು. ಇನ್ನೂ ಸುಮಾರು 70 ಜನರು ಗಂಭೀರರಾಗಿದ್ದಾರೆ. ಖಾಲಿಯಾಗಿರುವ ಸ್ಥಾನಕ್ಕೆ ನರ್ಸ್‌ಗಳ ನೇಮಕವಾಗಿಲ್ಲ. ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಸಂಪನ್ಮೂಲಗಳನ್ನು ಈ ಆಸ್ಪತ್ರೆಗೆ ತುರ್ತಾಗಿ ನೀಡುವ ಅಗತ್ಯವಿದೆ' ಎಂದಿದ್ದಾರೆ.
ಭಾರತದಲ್ಲಿ ಕ್ರೋಮ್‌ಬುಕ್ ಲ್ಯಾಪ್‌ಟಾಪ್ ತಯಾರಿಕೆ ಆರಂಭಿಸಿದ ಗೂಗಲ್, ಎಚ್‌ಪಿ ಜೊತೆ ಸಾಥ್!
ದೊಡ್ಡ ಪ್ರಮಾಣದಲ್ಲಿ ರೋಗಿಗಳು ಇಲ್ಲಿಗೆ ಬರುವುದರಿಂದ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯರುಗಳಿಗೆ ಹೊರೆಯಾಗುತ್ತಿದೆ. ನಾನು ಈ ಬಗ್ಗೆ ಉಪಮುಖ್ಯಮಂತ್ರು ಹಾಗೂ ಹಣಕಾಸು ಸಚಿವ ಅಜಿತ್ ಪವಾರ್ ಅವರೊಂದಿಗೆ ಮಾತನಾಡಲಿದ್ದು, ತಕ್ಷಣವೇ ನಿಧಿ ಬಿಡುಗಡೆಗೆ ಸಹಾಯ ಮಾಡುತ್ತೇನೆ ಎಂದಿದ್ದಾರೆ. ಕೆಲವು ನರ್ಸ್‌ಗಳ ವರ್ಗಾವಣೆಯ ನಂತರ ಹುದ್ದೆಗಳು ಖಾಲಿ ಉಳಿದಿವೆ ಎಂದು ಡೀನ್ ಹೇಳಿದ್ದಾರೆ, ಆದರೆ ವೈದ್ಯಕೀಯ ಅಧಿಕಾರಿಗಳ ಕೊರತೆಯೂ ಇದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.ಕಳೆದ ಆಗಸ್ಟ್ 12-13ರ 24 ಗಂಟೆಯ ಸಮಯದಲ್ಲಿ ಥಾಣೆಯ ಜಿಲ್ಲೆಯ ಕಲ್ವಾದ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ 18 ಮಂದಿ ಸಾವು ಕಂಡಿದ್ದು, ಇದು ಇಡೀ ರಾಜ್ಯದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು.
'ನಿಮ್ಮ ಜೋಡಿ ಪರ್ಫೆಕ್ಟ್ ಅಲ್ಲ..' ಅನ್ನೋ ಟ್ರೋಲ್‌ಗೆ ಚಾಹಲ್ ಪತ್ನಿ ಧನಶ್ರೀ ವರ್ಮಾ ಉತ್ತರ ನೋಡಿದ್ರಾ?