ಭಾರತದಲ್ಲಿ ಕ್ರೋಮ್‌ಬುಕ್ ಲ್ಯಾಪ್‌ಟಾಪ್ ತಯಾರಿಕೆ ಆರಂಭಿಸಿದ ಗೂಗಲ್, ಎಚ್‌ಪಿ ಜೊತೆ ಸಾಥ್!
ಹ್ಯಾವ್ಲೆಟ್ ಪೆಕಾರ್ಡ್ ಸಂಸ್ಥೆ 2020ರ ಆಗಸ್ಟ್‌ನಿಂದ ತನ್ನ ಲ್ಯಾಪ್‌ಟಾಪ್ ಹಾಗೂ ಡೆಸ್ಕ್‌ಟಾಪ್‌ಗಳನ್ನು ಚೆನ್ನೈ ಬಳಿಕ ಫ್ಲೆಕ್ಸ್ ಫೆಸಿಲಿಟಿಯಲ್ಲಿ ಉತ್ಪಾದನೆ ಮಾಡುತ್ತಿದೆ. ಗೂಗಲ್‌ನ ಕ್ರೋಮ್‌ಬುಕ್ ಲ್ಯಾಪ್‌ಟಾಪ್ ಕೂಡ ಇಲ್ಲಿಂದಲೇ ತಯಾರಾಗಲಿದೆ.
ನವದೆಹಲಿ (ಅ.2): ಟೆಕ್ ದೈತ್ಯ ಗೂಗಲ್ ತನ್ನ ಮೇಡ್ ಇನ್ ಇಂಡಿಯಾ ಕ್ರೋಮ್‌ಬುಕ್ ಲ್ಯಾಪ್‌ಟಾಪ್‌ಗಳು ಪರ್ಸನಲ್ ಕಂಪ್ಯೂಟರ್ ಉತ್ಪಾದನೆಗಳ ವಿಚಾರದಲ್ಲಿ ದೈತ್ಯರಾಗಿರುವ ಎಚ್‌ಪಿ ಕಂಪನಿಯ ಜೊತೆ ಸೇರಿ ತಯಾರಿಸಲು ಆರಂಭಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇಂಡಿಯಾ ಕಾರ್ಯಕ್ರಮದ ನಿಟ್ಟಿನಲ್ಲಿ ದೊಡ್ಡ ಬೂಸ್ಟ್ ಕೊಡುವಂಥ ವಿಚಾರವಾಗಿದೆ. 'ಭಾರತದಲ್ಲಿ ಕ್ರೋಮ್‌ಬುಕ್ಸ್ ತಯಾರಿಸಲು ನಾವು ಎಚ್‌ಪಿ ಜೊತೆ ಪಾಲುದಾರರಾಗಿದ್ದೇವೆ. ಇವುಗಳು ಭಾರತದಲ್ಲಿ ತಯಾರಿಸಲಾದ ಮೊದಲ ಕ್ರೋಮ್‌ಬುಕ್ಸ್ ಆಗಿದ್ದು, ಭಾರತೀಯ ವಿದ್ಯಾರ್ಥಿಗಳು ಕೈಗೆಟುಕುವ ಮತ್ತು ಸುರಕ್ಷಿತ ಕಂಪ್ಯೂಟರ್ ಹೊಂದಲು ಇದು ಸಹಾಯ ಮಾಡುತ್ತದೆ' ಎಂದು ಗೂಗಲ್ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ ಸೋಮವಾರ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಭಾರತದಲ್ಲಿ ಕ್ರೋಮ್‌ಬುಕ್ಸ್ ಉತ್ಪಾದನೆ ಪ್ರಾರಂಭವಾಗಿದೆ ಎಂದು ಎಚ್‌ಪಿ ವಕ್ತಾರರು ಕೂಡ ಖಚಿತಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಹೊಸ ಕ್ರೋಮ್‌ಬುಕ್ಸ್‌ಗಳು 15,990 ರೂಪಾಯಿಗಳಿಂದ ಲಭ್ಯವಿದೆ.
ಈ ಬಗ್ಗೆಸಂತಸ ವ್ಯಕ್ತಪಡಿಸಿರುವ ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯ ಅಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಗೂಗಲ್ ತನ್ನ ಕ್ರೋಮ್‌ಬುಕ್ ಡಿವೈಸ್‌ಗಳನ್ನು ಭಾರತದಲ್ಲಿಯೇ ಉತ್ಪಾದಿಸಲು ಆರಂಭಿಸಿರುವುದು ನೋಡೋಕೆ ಖುಷಿಯಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಷನ್ ಹಾಗೂ ಪ್ರಾಡಕ್ಟ್ ಲಿಂಕ್ಡ್ ಇನೀಶಿಯೇಟಿವ್ (ಪಿಎಲ್‌ಐ) ನೀತಿಗಳು ಭಾರತವನ್ನು ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಆದ್ಯತೆಯ ಪಾಲುದಾರರನ್ನಾಗಿ ಮಾಡುತ್ತಿದೆ ಮತ್ತು ಇತ್ತೀಚಿನ ಐಟಿ ಹಾರ್ಡ್‌ವೇರ್ PLI2.0 ಪಿಎಲ್‌ಐ ಭಾರತದಲ್ಲಿ ಲ್ಯಾಪ್‌ಟಾಪ್ ಮತ್ತು ಸರ್ವರ್ ಉತ್ಪಾದನೆಯನ್ನು ಇನ್ನಷ್ಟು ವೇಗಗೊಳಿಸಲಿದೆ' ಎಂದು ಬರೆದಿದ್ದಾರೆ.
ಆಗಸ್ಟ್ 2020 ರಿಂದ ಎಚ್‌ಪಿ ತನ್ನ ಲ್ಯಾಪ್‌ಟಾಪ್‌ಗಳು ಮತ್ತು ಡೆಸ್ಕ್‌ಟಾಪ್‌ಗಳ ಶ್ರೇಣಿಯನ್ನು ಚೆನ್ನೈ ಬಳಿಯ ಫ್ಲೆಕ್ಸ್ ಫೆಸಿಲಿಟಿಯಲ್ಲಿ ಉತ್ಪಾದನೆ ಮಾಡುತ್ತಿದೆ. ಅದೇ ಸ್ಥಳದಲ್ಲಿ ಕ್ರೋಮ್‌ಬುಕ್ ಲ್ಯಾಪ್‌ಟಾಪ್‌ಗಳನ್ನೂ ತಯಾರಿಸಲಾಗುತ್ತಿದೆ. ಇದು ಡೆಲ್ ಮತ್ತು ಆಸುಸ್‌ನಂತಹ ಪಿಸಿ ತಯಾರಕರೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಸ್ಪರ್ಧಿಸಲು ಗೂಗಲ್‌ಗೆ ಸಹಾಯ ಮಾಡುತ್ತದೆ. ಐಟಿ ಹಾರ್ಡ್‌ವೇರ್‌ಗಾಗಿ ಸರ್ಕಾರದ 17,000 ಕೋಟಿ ರೂಪಾಯಿ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ ಯೋಜನೆಯಡಿಯಲ್ಲಿ ಎಚ್‌ಪಿ ಅರ್ಜಿದಾರರಲ್ಲಿ ಒಂದಾಗಿದೆ. ತನ್ನದೇ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ನೋಟ್‌ಬುಕ್‌ಗಳಿಗೆ ಹೋಲಿಸಿದರೆ ಕ್ರೋಮ್ ಬುಕ್ಸ್‌ಗಳು ಕಡಿಮೆ ಬೆಲೆಗೆ ಸಿಗುತ್ತದೆ.
'ಮೋದಿ ಸರಿಯಾದ ಕೆಲಸ ಮಾಡ್ತಿದ್ದಾರೆ..' ಮೇಕ್ ಇನ್ ಇಂಡಿಯಾ ಯೋಜನೆ ಮನಸಾರೆ ಹೊಗಳಿದ ವ್ಲಾಡಿಮಿರ್ ಪುಟಿನ್!
ಎಚ್‌ಪಿ 2020 ರಿಂದ ಭಾರತದಲ್ಲಿ ತನ್ನ ಉತ್ಪಾದನಾ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿದೆ ಮತ್ತು ಡಿಸೆಂಬರ್ 2021 ರಿಂದ ಭಾರತದಲ್ಲಿ HP EliteBooks, HP ProBooks ಮತ್ತು HP G8 ಸರಣಿಯ ನೋಟ್‌ಬುಕ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಲ್ಯಾಪ್‌ಟಾಪ್‌ಗಳನ್ನು ತಯಾರಿಸಲು ಪ್ರಾರಂಭಿಸಿತು. ಡೆಸ್ಕ್‌ಟಾಪ್ ಮಿನಿ ಟವರ್‌ಗಳು (MT), ಮಿನಿ ಡೆಸ್ಕ್‌ಟಾಪ್‌ಗಳು (DM), ಸಣ್ಣ ಫಾರ್ಮ್ ಫ್ಯಾಕ್ಟರ್ (SFF) ಡೆಸ್ಕ್‌ಟಾಪ್‌ಗಳು ಮತ್ತು ಆಲ್-ಇನ್-ಒನ್ PC ಗಳ ವಿವಿಧ ಮಾದರಿಗಳನ್ನು ಸೇರಿಸುವ ಮೂಲಕ ಸ್ಥಳೀಯವಾಗಿ ತಯಾರಿಸಲಾದ ವಾಣಿಜ್ಯ ಡೆಸ್ಕ್‌ಟಾಪ್‌ಗಳ ಪೋರ್ಟ್‌ಫೋಲಿಯೊವನ್ನು ಇದು ವಿಸ್ತರಿಸಿದೆ.
ಮೇಕ್ ಇನ್ ಇಂಡಿಯಾ ಫಲ: ದೇಶದಲ್ಲಿ 1 ಲಕ್ಷ ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರ ಉತ್ಪಾದನೆ