ಸಚಿವರಿಗೂ ಕೊರೋನಾ ಸೋಂಕು ದೃಢ, ಬೆಚ್ಚಿ ಬಿದ್ದ ಸರ್ಕಾರ
ಮುಂಬೈನಲ್ಲಿ ಕೊರೊಣಾ ಆರ್ಭಟ/ ಮಹಾರಾಷ್ಟ್ರದ ಸಚಿವನಿಗೂ ಕೊರೋನಾ/ ಹೋಂ ಕ್ವಾರಂಟೈನ್ ನಲ್ಲಿದ್ದ ಸಚಿವ/
ಮುಂಬೈ(ಏ. 23) ಮಹಾರಾಷ್ಟ್ರದಲ್ಲಿ ಕರೋನಾ ಅಟ್ಟಹಾಸ ಮುಂದುವರಿದಿದೆ. ಮಹಾರಾಷ್ಟ್ರದ ವಸತಿ ಸಚಿವ ಜೀತೇಂದ್ರ ಅವದ್ ಅವರಿಗೂ ಕೊರೋನಾ ಸೋಂಕು ತಗುಲಿದೆ. ಬುಧವಾರ ತಪಾಸಣೆ ಮಾಡಿದಾಗ ನೆಗೆಟಿವ್ ಬಂದಿತ್ತು. ಈಗ ಪಾಸಿಟಿವ್ ಬಂದಿದ್ದು ಆತಂಕ ಹೆಚ್ಚಾಗಿದೆ.
ಬಿಜೆಪಿಯ ಕರಾವಳಿ ಭೀಷ್ಮನಿಗೆ ಪ್ರಧಾನಿ ಮೋದಿ ದೂರವಾಣಿ ಕರೆ
ಜೀತೇಂದ್ರ ಅವರ ಮನೆಯ ಹೌಸ್ ಕೀಪಿಂಗ್ ಕೆಲಸಗಾರರು ಮತ್ತು ಐವರು ಭದ್ರತಾ ಸಿಬ್ಬಂದಿಯಲ್ಲಿ ಕೊರೋನಾ ಇರುವುದು ದೃಢವಾಗಿತ್ತು.
ಆದರೆ ಅನೇಕ ದಿನಗಳಿಂದ ಸಚಿವರು ಹೋಂ ಕ್ವಾರಂಟೈನ್ ನಲ್ಲಿ ಇದ್ದರು'. ಈ ಕಾರಣದಿಂದ ಉಳಿದವರಿಗೆ ಸೋಂಕು ತಗಲುವ ಅಪಾಯ ಕಡಿಮೆ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ತನ್ನ ಆರ್ಭಟ ಮುಂದುವರಿಸಿಕೊಂಡೇ ಸಾಗುತ್ತಿದೆ. ದೇಶದ ದೃಷ್ಟಿಯಲ್ಲಿ ರೆಡ್ ಝೋನ್ ನಲ್ಲಿದೆ. ಕರ್ನಾಟಕದಲ್ಲಿಯೂ ಕೊರೋನಾ ಪಾಸಿಟಿವ್ ಸಂಖ್ಯೆ 450ರ ಬಳಿ ಬಂದು ನಿಂತಿದೆ. ದೇಶಲ್ಲಿ 20 ಸಾವಿರ ಜನರನ್ನು ದಾಟಿ ಮುಂದಕ್ಕೆ ಸಾಗಿದೆ.