ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ನಟ ಅಕ್ಷಯ್‌ ಕುಮಾರ್‌ ಮೊದಲಾದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಸರಿಯಲ್ಲ ಎಂದು ಸಚಿವರೋರ್ವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಮುಂಬೈ (ಏ.16): ಕೊರೋನಕ್ಕೆ ತುತ್ತಾಗಿದ್ದ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ನಟ ಅಕ್ಷಯ್‌ ಕುಮಾರ್‌ ಮೊದಲಾದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಸರಿಯಲ್ಲ ಎಂದು ಸಚಿವರೋರ್ವರು ಹೇಳಿದ್ದಾರೆ. 

ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಅಗತ್ಯವಿರಲಿಲ್ಲ. ಅವರು ಮನೆಯಲ್ಲೇ ವೈದ್ಯರ ಸಲಹೆಗಳನ್ನು ಪಾಲಿಸಿ ಚಿಕಿತ್ಸೆ ಪಡೆಯಬಹುದಿತ್ತು ಎಂದು ಮಹಾರಾಷ್ಟ್ರದ ಸಚಿವ ಅಸ್ಲಾಂ ಶೇಖ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಮಾಸ್ಟರ್‌ ಬ್ಲಾಸ್ಟರ್ ಸಚಿನ್‌ ತೆಂಡುಲ್ಕರ್ ಆಸ್ಪತ್ರೆಗೆ ದಾಖಲು..!

ಸೋಂಕಿನ ಯಾವುದೇ ಲಕ್ಷಣ ಇರದಿದ್ದ ಸಚಿನ್‌, ಅಕ್ಷಯ್‌ ಕುಮಾರ್‌ ಸೇರಿದಂತೆ ಇನ್ನಿತರ ಖ್ಯಾತನಾಮರು ಆಸ್ಪತ್ರೆಗಳಿಗೆ ದಾಖಲಾಗುವ ಅಗತ್ಯವಿಲ್ಲ. 

ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುವ ಮೂಲಕ ಅನಿವಾರ್ಯತೆ ಇರುವವರೆಗೆ ಆಸ್ಪತ್ರೆಯ ಬೆಡ್‌ಗಳನ್ನು ಬಿಟ್ಟುಕೊಡಬೇಕು’ ಎಂದಿದ್ದಾರೆ.