ಜಾತಿಗಳನ್ನು ಸೂಚಿಸುವ ಹಳ್ಳಿಗಳ ಹೆಸರನ್ನು ಬದಲಾಯಿಸಲು ಸರ್ಕಾರ ಇದೀಗ ಚಿಂತನೆ ನಡೆಸಿದೆ.
ಮುಂಬೈ (ಡಿ.04): ಜಾತಿಗಳನ್ನು ಸೂಚಿಸುವ ಹೆಸರುಗಳಿರುವ ಹಳ್ಳಿಯನ್ನು ಮರುನಾಮಕರಣ ಮಾಡುವ ಐತಿಹಾಸಿಕ ತೀರ್ಮಾನವನ್ನು ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ತೆಗೆದುಕೊಂಡಿದೆ.
ಇಂಥ ಹೆಸರುಗಳಿಂದ ಸಮಾಜದಲ್ಲಿ ಅಸಮಾನತೆ ಉಂಟಾಗುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
'3 ತಿಂಗಳಲ್ಲಿ ಮಹಾರಾಷ್ಟ್ರ ಆಡಳಿತ ಚುಕ್ಕಾಣಿ ಬಿಜೆಪಿಗೆ' ...
ಬ್ರಾಹ್ಮಣಪಾದ, ಧೋರ್‌ಪಾದ, ಮಾಲಿಗಲ್ಲಿ, ಮಹರ್‌ಪಾದ ಮುಂತಾದ ಜಾತಿ ಸೂಚಕ ಹೆಸರುಗಳ ಬದಲಿಗೆ ಸಮತಾ ನಗರ, ಜ್ಯೋತಿ ನಗರ, ಭೀಮ ನಗರ ಮುಂತಾದ ಸಮಾಜ ಸುಧಾರಕರ ಹೆಸರಿನಿಂದ ಮರು ನಾಮಕರಣ ಮಾಡಲಾಗುವುದು ಎಂದು ಮಹಾರಾಷ್ಟ್ರ ಸಮಾಜ ಕಲ್ಯಾಣ ಇಲಾಖೆಯ ಸಚಿವ ಧನಂಜಯ ಮುಂಡೆ ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 4, 2020, 8:56 AM IST