ಮುಂಬೈ (ಜ.29):  ಕರ್ನಾಟಕದ ಜೊತೆಗಿನ ಗಡಿ ವಿವಾದದ ಬೆಂಕಿಗೆ ತುಪ್ಪ ಹಾಕುವ ಕೆಲಸವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮುಂದುವರಿಸಿದ್ದಾರೆ. ಬೆಳಗಾವಿ, ಕಾರವಾರ, ಬೀದರ್‌, ಭಾಲ್ಕಿ, ಹುಮನಾಬಾದ್‌ ಮೊದಲಾದ ಭಾಗಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂಬ ತಮ್ಮ ರಾಜ್ಯದ ವಾದಕ್ಕೆ ಬಲ ನೀಡಲು 50 ವರ್ಷ ಹಳೆಯ ವಿಡಿಯೋವೊಂದರ ಮೊರೆ ಹೋಗಿದ್ದಾರೆ.

"

ಈ ಹಿಂದೆ ಮಹಾರಾಷ್ಟ್ರ ಸರ್ಕಾರವೇ ಗಡಿ ವಿವಾದದ ಕುರಿತು ತಯಾರಿಸಿದ್ದ ಸಾಕ್ಷ್ಯಚಿತ್ರವೊಂದನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿಸಿದ್ದಾರೆ.

ಕರ್ನಾಟಕದ ಭಾಗವಾಗಿರುವ ಯಾವ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು? ಏಕೆ ಸೇರಬೇಕು ಎನ್ನುವ ತನ್ನ ವಾದ ಎತ್ತಿಹಿಡಿಯಲು 50 ವರ್ಷಗಳ ಹಿಂದೆ ಮಹಾರಾಷ್ಟ್ರ ಸರ್ಕಾರ ಸಾಕ್ಷ್ಯಚಿತ್ರ ಸಿದ್ಧಪಡಿಸಿತ್ತು. ‘ಎ ಕೇಸ್‌ ಫಾರ್‌ ಜಸ್ಟೀಸ್‌’ ಎನ್ನುವ 35 ನಿಮಿಷಗಳ ಈ ಕಪ್ಪು ಬಿಳುಪು ಸಾಕ್ಷ್ಯಚಿತ್ರವನ್ನು ಕುಮಾರ್‌ ಸೇನ್‌ ಸಮಥ್‌ರ್‍ ನಿರ್ದೇಶಿಸಿದ್ದರು.

ಮತ್ತೆ ಠಾಕ್ರೆ ಉದ್ಧಟತನ; 'ಯಾರೇ ಬಂದರೂ ದೌರ್ಜನ್ಯ ಮಾಡ್ತಾರಂತೆ! ..

ಈಗೇಕೆ ಬಿಡುಗಡೆ?:

‘ಈ ಎಲ್ಲಾ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು. ಹಾಲಿ ಕರ್ನಾಟಕದ ಭಾಗವಾಗಿರುವ ಈ ಪ್ರದೇಶಗಳು ಮರಳಿ ಮಹಾರಾಷ್ಟ್ರಕ್ಕೆ ಸೇರಬೇಕು. ಈ ಕುರಿತ ಅರಿವು ಎಲ್ಲರಲ್ಲಿ ಮೂಡಬೇಕು ಎಂಬ ಉದ್ದೇಶದಿಂದ ಸ್ವತಃ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೇ 50 ವರ್ಷಗಳ ಈ ಹಳೆಯ ವಿಡಿಯೋವನ್ನು ಯುಟ್ಯೂಬ್‌ಗೆ ಸೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ’ ಎಂದು ಠಾಕ್ರೆ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.

10 ದಿನದಲ್ಲಿ 3 ಕ್ಯಾತೆ

- ಜ.17: ಎಂಇಎಸ್‌ ಹುತಾತ್ಮ ದಿನದ ವೇಳೆ, ‘ಕರ್ನಾಟಕ ಆಕ್ರಮಿತ ಮರಾಠಿ ಭಾಷಿಕ’ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಬದ್ಧ ಎಂಬ ಘೋಷಣೆ

- ಜ.27: ಗಡಿ ವಿವಾದ ಕುರಿತ ಪುಸ್ತಕ ಬಿಡುಗಡೆ ವೇಳೆ, ಮರಾಠಿ ಭಾಷಿಕ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲು ಆಗ್ರಹ

- ಜ.28: 50 ವರ್ಷ ಹಳೆಯ ವಿಡಿಯೋ ಬಿಡುಗಡೆ ಮಾಡುವ ಮತ್ತೆ ಗಡಿ ವಿವಾದ ಕೆದಕಿದ ಮಹಾರಾಷ್ಟ್ರ ಮುಖ್ಯಮಂತ್ರಿ