ಪಾರಿವಾಳಗಳಿಂದಾಗಿ ಅಲರ್ಜಿ, ಉಸಿರಾಟದ ತೊಂದರೆ, ಶ್ವಾಸಕೋಶದ ಸೋಂಕು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಕಾರಣ ನಗರದಲ್ಲಿದ್ದ 51 ಪಾರಿವಾಳ ಆಹಾರ ಕೇಂದ್ರಗಳನ್ನು ಮುಚ್ಚುವಂತೆ ಮಹಾರಾಷ್ಟ್ರ ಸರ್ಕಾರವು, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ಗೆ ನಿರ್ದೇಶನ ನೀಡಿದೆ.
ಮುಂಬೈ: ಪಾರಿವಾಳಗಳಿಂದಾಗಿ ಅಲರ್ಜಿ, ಉಸಿರಾಟದ ತೊಂದರೆ, ಶ್ವಾಸಕೋಶದ ಸೋಂಕು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಕಾರಣ ನಗರದಲ್ಲಿದ್ದ 51 ಪಾರಿವಾಳ ಆಹಾರ ಕೇಂದ್ರಗಳನ್ನು ಮುಚ್ಚುವಂತೆ ಮಹಾರಾಷ್ಟ್ರ ಸರ್ಕಾರವು, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ಗೆ ನಿರ್ದೇಶನ ನೀಡಿದೆ.
ಈ ಆಹಾರ ಕೇಂದ್ರಗಳಿಂದ ಪಾದಚಾರಿ ಮಾರ್ಗಗಳೆಲ್ಲ ಪಾರಿವಾಳಗಳಿಂದಲೇ ತುಂಬಿಕೊಳ್ಳುತ್ತಿವೆ. ಪಾರಿವಾಳದ ಹಿಕ್ಕೆ ಹಾಗೂ ಗರಿಗಳಿಂದ ಮನುಷ್ಯನಿಗೆ ಶ್ವಾಸಕೋಶದ ಸೋಂಕು, ಹಕ್ಕಿ ಜ್ವರ, ಆಹಾರ ಸಂಬಂಧಿ ಸಮಸ್ಯೆಗಳು, ಅಲರ್ಜಿ, ಉಸಿರಾಟದ ತೊಂದರೆ ಸೇರಿ ಹಲವು ರೋಗಗಳು ಹರಡುತ್ತಿವೆ. ಕೂಡಲೇ ಪಾರಿವಾಳ ಆಹಾರ ಕೇಂದ್ರಗಳನ್ನು ಮುಚ್ಚಬೇಕು ಎಂದು ಶಿವಸೇನಾ (ಯುಬಿಟಿ) ಶಾಸಕಿ ಮನಿಷಾ ಕಾಯಂಡೆ ಮೊದಲಾದ ನಾಯಕರು ವಿನಂತಿಸಿದ್ದರು. ಈ ಹಿನ್ನೆಲೆ ಕೇಂದ್ರಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿದೆ.
ಪಾರಿವಾಳದ ಗೂಡನ್ನು ನಿರ್ಮಿಸುವುದು ಭ ಅಥವಾ ಅಶುಭ
ಶಕುನ ಶಾಸ್ತ್ರದಲ್ಲಿ ಅನೇಕ ವಿಷಯಗಳು ಶುಭ ಅಥವಾ ಅಶುಭಗಳೊಂದಿಗೆ ಸಂಬಂಧ ಹೊಂದಿವೆ. ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸಂಬಂಧಿಸಿದ ಕೆಲ ಸಂಕೇತಗಳಿಗೆ ಜ್ಯೋತಿಷ್ಯದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಬಹಳಷ್ಟು ಪ್ರಾಣಿ ಪಕ್ಷಿಗಳು ಹಿಂದೂ ಧರ್ಮದಲ್ಲಿ ದೇವರ ವಾಹನಗಳಾಗಿ ಪ್ರಾತಿನಿಧ್ಯ ಹೊಂದಿವೆ. ಪಾರಿವಾಳಗಳ ವಿಷಯಕ್ಕೆ ಬಂದರೆ ಪಾರಿವಾಳವನ್ನು ಸಂತೋಷ ಮತ್ತು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಲವರು ಪಾರಿವಾಳವನ್ನು ಲಕ್ಷ್ಮಿ ದೇವಿಯ ಭಕ್ತ ಎಂದು ಪರಿಗಣಿಸುತ್ತಾರೆ ಮತ್ತು ಮನೆಯಲ್ಲಿ ಅದಿದ್ದರೆ ಶುಭವೆಂದು ಹೇಳುತ್ತಾರೆ. ಆದರೆ ಮತ್ತೆ ಕೆಲವರು ಮನೆಯಲ್ಲಿ ಪಾರಿವಾಳ ಗೂಡು ಕಟ್ಟುವುದು ದುರಾದೃಷ್ಟವನ್ನು ತರುತ್ತದೆ ಎಂದು ನಂಬುತ್ತಾರೆ. ಪಾರಿವಾಳವು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ತನ್ನ ಸ್ವಭಾವದಿಂದಲೇ ಪ್ರೀತಿ ಪಾತ್ರವಾಗಿರುವ ಪಕ್ಷಿ. ಪಾರಿವಾಳಕ್ಕೆ ಸಂಬಂಧಿಸಿದ ಶುಭ ಮತ್ತು ಅಶುಭ ಚಿಹ್ನೆಗಳ ಬಗ್ಗೆ ತಿಳಿಯೋಣ.
ಪಾರಿವಾಳದ ಗೂಡನ್ನು ನಿರ್ಮಿಸುವುದು ಅಶುಭ ಚಿಹ್ನೆ
ಸಾಮಾನ್ಯವಾಗಿ ಪಾರಿವಾಳಗಳು ಮನೆಯ ಬಾಲ್ಕನಿ, ಟೆರೇಸ್ ಅಥವಾ ಎಸಿ ಮೇಲೆ ಗೂಡು ಕಟ್ಟುತ್ತವೆ. ವಾಸ್ತು ಶಾಸ್ತ್ರದಲ್ಲಿ ಪಾರಿವಾಳಗಳು ಮನೆಯಲ್ಲಿ ಗೂಡು ಕಟ್ಟುವುದು ಶುಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿ ಪಾರಿವಾಳ ಗೂಡು ಕಟ್ಟುವುದು ಅಶುಭ(inauspecious)ವೆಂದು ಪರಿಗಣಿಸಲಾಗಿದೆ. ಪಾರಿವಾಳ ಗೂಡು ಕಟ್ಟುವುದು ಎಂದರೆ ಅದು ಮನೆಗೆ ದುರದೃಷ್ಟ ತರುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಆದಷ್ಟು ಬೇಗ ಪಾರಿವಾಳದ ಗೂಡು ತೆಗೆಯಿರಿ. ಪಾರಿವಾಳ ಗೂಡು ಕಟ್ಟುವುದು ಮನೆಯ ಸದಸ್ಯರ ಆರ್ಥಿಕ ಸ್ಥಿತಿ(financial status)ಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.
ಶುಭ ಸಂಕೇತ
ಗೂಡು ಇಲ್ಲದೆ ಪಾರಿವಾಳ ನಿಮ್ಮ ಮನೆಗೆ ಬರುತ್ತಿದ್ದರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶಕುನಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ಮನೆಗೆ ಬಂದ ಪಾರಿವಾಳ(Pegion)ಕ್ಕೆ ಪಾರಿವಾಳವನ್ನು ತಿನ್ನಿಸಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರೀತಿ ಮಾಡುವುದರಿಂದ ಜಾತಕ(Horoscope)ದಲ್ಲಿ ಗುರು ಮತ್ತು ಬುಧ ಸ್ಥಾನವು ಬಲಗೊಳ್ಳುತ್ತದೆ. ಇದಲ್ಲದೇ ಈ ಪಾರಿವಾಳದ ಆಗಮನದಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಮುಂಜಾನೆ ಪಾರಿವಾಳದ ಸ್ವರ ಕೇಳಿದರೆ, ಅದು ಪ್ರಯೋಜನಗಳನ್ನು ಪಡೆಯುವ ಸಂಕೇತವಾಗಿದೆ.