ಮುಂಬೈ (ನ.15): ಕೊರೋನಾ ವೈರಸ್‌ ಹಾವಳಿ ಹಿನ್ನೆಲೆಯಲ್ಲಿ ಕಳೆದ 8 ತಿಂಗಳಿನಿಂದ ಮುಚ್ಚಿರುವ ದೇಗುಲ ಸೇರಿದಂತೆ ಮಹಾರಾಷ್ಟ್ರದ ಧಾರ್ಮಿಕ ಕೇಂದ್ರಗಳನ್ನು ಸೋಮವಾರದಿಂದ ಮತ್ತೆ ತೆರೆಯಲಾಗುತ್ತದೆ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ತಿಳಿಸಿದ್ದಾರೆ. 

ದೀಪಾವಳಿ ಶುಭಾಶಯ ಕೋರುವ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು ಅದರಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಕೊರೋನಾ ವೈರಸ್‌ ಎಂಬ ರಾಕ್ಷಸ ಇನ್ನೂ ನಮ್ಮ ನಡುವೆಯೇ ಇದೆ ಎಂಬುದನ್ನು ಮರೆಯಲಾಗದು. 

ಸಿಟಿ ರವಿಗೆ 3 ರಾಜ್ಯಗಳ ಉಸ್ತುವಾರಿ; ಇಕ್ಕಟ್ಟಿಗೆ ಸಿಲುಕಿಸಿದೆ ಹೊಸ ಜವಾಬ್ದಾರಿ

ಈ ರಾಕ್ಷಸನ ಅಬ್ಬರ ಕಡಿಮೆಯಾಗುತ್ತಿದ್ದರೂ, ನಾವು ಶಿಸ್ತು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ. ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದರೂ ಧಾರ್ಮಿಕ ಕೇಂದ್ರಗಳಿಗೆ ಅನುಮತಿ ನೀಡದ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.