ಮುಂಬೈ  (ಆ. 25):  ಕನ್ನಡಿಗರ ಪ್ರಭಾವ ಇರುವ ಹಾಗೂ ಕರ್ನಾಟಕದ ಗಡಿ ಪ್ರದೇ ಶಕ್ಕೆ ಹೊಂದಿಕೊಂಡಿರುವ ನೆರೆಪೀಡಿತ ಸಾಂಗ್ಲಿ ಹಾಗೂ ಕೊಲ್ಹಾಪುರ ಜಿಲ್ಲೆಗಳಲ್ಲಿ ಬಿಜೆಪಿ-ಶಿವಸೇನೆ ಕೂಟಕ್ಕೆ ಭಾರೀ ಹಿನ್ನಡೆಯಾಗಿದೆ. ಕಾಂಗ್ರೆಸ್ ಎನ್‌ಸಿಪಿ ಮೈತ್ರಿ ಕೂಟಇಲ್ಲಿ ಜಯಭೇರಿ ಬಾರಿಸಿದೆ. ಈ ಎರಡೂ ಜಿಲ್ಲೆಗಳು ನೆರೆಪೀಡಿತ ವಾಗಿದ್ದು, ನೆರೆ ನಿರ್ವಹಣೆಯಲ್ಲಿ ಮಹಾ ರಾಷ್ಟ್ರಸರ್ಕಾರ ಎಡವಿದ್ದೇ ಬಿಜೆಪಿ-ಸೇನೆ ಸೋಲಿಗೆ ಕಾರಣ ಎನ್ನಲಾಗಿದೆ.

ಇದು ನೆರೆಪೀಡಿತ ಕರ್ನಾಟಕದ ಬಿಜೆಪಿ ಸರ್ಕಾ ರಕ್ಕೆ ಕೂಡ ಪಾಠವಾಗುವ ಫಲಿತಾಂಶ ಎಂದು ವಿಶ್ಲೇಷಿ ಸಲಾಗಿದೆ. ಸಾಂಗ್ಲಿ ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಬಿಜೆಪಿ 2, ಅದರ ಮಿತ್ರಪಕ್ಷ ಶಿವಸೇನೆ 1 ರಲ್ಲಿ ಗೆಲ್ಲುವ ಮೂಲಕ ಕೂಟಕ್ಕೆ 3 ಸ್ಥಾನಗಳು ಲಭಿಸಿವೆ. ಇನ್ನುಳಿದ 5 ಸ್ಥಾನಗಳು ಎನ್‌ಸಿಪಿ- ಕಾಂಗ್ರೆಸ್ ಕೂಟದ (ಎನ್‌ಸಿಪಿ 3, ಕಾಂಗ್ರೆಸ್ 2) ಪಾಲಾಗಿವೆ. 

ಮಹಾರಾಷ್ಟ್ರ ಫಲಿತಾಂಶ: ದೇಶಕ್ಕೆ ನರೇಂದ್ರ ಮಹಾರಾಷ್ಟ್ರಕ್ಕೆ ದೇವೇಂದ್ರ

ಇದೇ ವೇಳೆ, ಕೊಲ್ಹಾಪುರ ಜಿಲ್ಲೆಯ ೧೦ ಕ್ಷೇತ್ರಗಳಲ್ಲಿ ಬಿಜೆಪಿ ಮಿತ್ರ ಶಿವಸೇನೆ ೧ರಲ್ಲಿ ಗೆದ್ದಿದ್ದು, ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ. ಆದರೆ ಕಾಂಗ್ರೆಸ್-ಎನ್‌ಸಿಪಿ ಕೂಟ ೬, ಇತರರು ೩ರಲ್ಲಿ ಗೆಲುವು ಕಂಡಿದ್ದಾರೆ.

ಪಕ್ಷಾಂತರಿಗಳಿಗೆ ಭಾರೀ ಸೋಲು!

 ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎನ್‌ಸಿಪಿಗೆ ಗುಡ್ ಬೈ ಹೇಳಿ ಆಡಳಿತಾರೂಢ ಬಿಜೆಪಿ- ಶಿವಸೇನೆ ಗೆ ಸೇರ್ಪಡೆಯಾಗಿದ್ದ ೧೯ ಮಂದಿ ಪಕ್ಷಾಂತರಿ ಗಳಿಗೆ ಮತದಾನ ಪ್ರಭು ಚಾಟಿ ಬೀಸಿದ್ದಾನೆ.

ಜಯದತ್ ಕ್ಷೀರಸಾಗರ್ ಅವರು ಚುನಾ ವಣೆ ಘೋಷಣೆಗೂ ಮುನ್ನ ಶಿವಸೇನೆಗೆ ಸೇರ್ಪಡೆಯಾಗಿದ್ದರು. ಈ ಕಾರಣಕ್ಕಾಗಿ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನವೂ ಅರಸಿ ಬಂದಿತ್ತು. ಆದರೆ, ಶಿವಸೇನೆ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಕ್ಷೀರಸಾಗರ್ ತಮ್ಮ ಅಳಿಯ, ಎನ್‌ಸಿಪಿಯ ಸಂದೀಪ್ ಎದುರು ಹೀನಾ ಯವಾಗಿ ಮುಗ್ಗರಿಸಿದ್ದಾರೆ. ಇನ್ನು ಚುನಾವ ಣೆ ಮುನ್ನ ಬಿಜೆಪಿ ತೆಕ್ಕೆಗೆ ಸೇರಿದ್ದ ಎನ್ ಸಿಪಿ ಯ ಮಾಜಿ ಸಚಿವ ಮಧುಕರ್ ಪಿಚಾಡ್ ಅವರ ಪುತ್ರ ವೈಭವ್ ಪಿಚಾಡ್ ಅಕೋಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ಆದರೆ, ಎನ್‌ಸಿಪಿಯ ಡಾ. ಕಿರಣ್ ಲಹಮತೆ ಎದುರು ವೈಭವ್ ಸೋತಿದ್ದಾರೆ. ಇನ್ನು ರಾಧಾಕೃಷ್ಣ ವಿಖೆ ಪಾಟೀಲ್, ಗಣೇಶ್ ನಾಯಕ್, ರಣಜಾಗ್ಜಿತ್ ಸಿನ್ಹ್ ಪಾಟೀಲ್, ನಮಿತಾ ಮುಂಡದಾ, ಪಾಂಡುರಂಗ ಬರೋರಾ, ನಿರ್ಮಲಾ ಗಾವಿತ್, ಮಾಜಿ ಸಚಿವ ಹರ್ಷವರ್ಧನ್ ಪಾಟೀಲ್ ಸೇರಿದಂತೆ ಇತರ ಮುಖಂಡರು ಸಹ ತಮ್ಮ ಎದುರಾಳಿಗಳಾದ ಎನ್‌ಸಿಪಿ-ಕಾಂಗ್ರೆಸ್ ಅಭ್ಯರ್ಥಿಗಳಿಂದ ಪರಾಭವಗೊಂಡಿದ್ದಾರೆ.