ರಾಜ್ಯ ಸರ್ಕಾರದ ಅನಮತಿ ಇಲ್ಲದೆ ಸಿಬಿಐ ಮಹಾರಾಷ್ಟ್ರದಲ್ಲಿ ತನಿಖೆ ನಡೆಸುವಂತಿಲ್ಲ ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ಉತ್ತರ ಪ್ರದೇಶ ಪೊಲೀಸರ ಮನವಿ ಹಾಗೂ ಕೇಂದ್ರ ಸರ್ಕಾರದ ಆದೇಶದಂತೆ ಲಕ್ನೋದಲ್ಲಿ ನಡೆದ ಟಿಆರ್‌ಪಿ ಹಗರಣ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.

TRP ಹಗರಣ ತನಿಖೆಗೆ ಆದೇಶವಾದ ಬೆನ್ನಲ್ಲೇ ಉದ್ಧವ್ ಠಾಕ್ರೆ ಸಿಎಂ ನೇತೃತ್ವದ ಮೈತ್ರಿ ಸರ್ಕಾರ ಸಿಬಿಐ ಮಹಾರಾಷ್ಟ್ರದಲ್ಲಿ ತನಿಕೆ ನಡೆಸುವುದನ್ನು ತಡೆದಿದೆ. ಮೊದಲು ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಅಥವಾ ಮೇಲ್ಮಟ್ಟದ ಕಾನೂನಿನ ಅನುಮತಿ ಇಲ್ಲದೆ ಮಹಾರಾಷ್ಟ್ರದಲ್ಲಿ ಸಿಬಿಐ ತನಿಖೆ ನಡೆಸುವುದನ್ನು ತಡೆಯಲಾಗಿದೆ.

ಪಾಕಿಸ್ತಾನದಲ್ಲಿ ಪೊಲೀಸ್‌ ದಂಗೆ; ಸರ್ಕಾರದ ವಿರುದ್ಧ ಪ್ರಬಲ ಹೋರಾಟ ಶುರು

ಶಿವಸೇನೆ-ಕಾಂಗ್ರೆಸ್ ಸರ್ಕಾರದ ಈ ಆದೇಶ ಬಿಜೆಪಿ ಸರ್ಕಾರದ ಜೊತೆಗಿನ ಭಿನ್ನತೆಯನ್ನು ಸ್ಪಷ್ಟವಾಗಿ ತಿಳಿಸಿದೆ ಎಂದು ರಾಜ್ಯ ಸಾರ್ವಜನಿಕ ಸಚಿವ ಅಶೋಕ್ ಚವ್ಹಾಣ್ ತಿಳಿಸಿದ್ದಾರೆ.

ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆ 1946ರ ಪ್ರಕಾರ ಸಿಬಿಐ ತನಿಖೆ ನಡೆಸಬೇಕಾದರೆ ರಾಜ್ಯದ ಅನುಮತಿಯೂ ಬೇಕಾಗಿದೆ. ಇದಕ್ಕೆ ಮಹಾರಾಷ್ಟ್ರ ಸರ್ಕಾರ ನೀಡಿದ ಅನುಮತಿಯನ್ನು ಹಿಂಪಡೆಯಲಾಗಿದೆ.