Asianet Suvarna News Asianet Suvarna News

ಹಸುಗೂಸಿನೊಂದಿಗೆ ಅಸೆಂಬ್ಲಿಗೆ ಆಗಮಿಸಿದ NCP ಕಾಂಗ್ರೆಸ್‌ ಶಾಸಕಿ!

ರಾಷ್ಟ್ರೀಯ ಕಾಂಗ್ರೆಸ್‌ನ ಶಾಸಕಿ ಸರೋಜ್‌ ಅಹಿರೆ ವಾಘ್‌ (37) ತಮ್ಮ 10 ವಾರದ ಮಗುವಿನೊಂದಿಗೆ ಸೋಮವಾರ ಇಲ್ಲಿ ಆರಂಭವಾದ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನಕ್ಕೆ ಆಗಮಿಸಿ ಗಮನ ಸೆಳೆದರು.

Maharashtra Congress MLA Saroj Ahire Wagh was arrived assembly with new born baby akb
Author
First Published Dec 20, 2022, 9:53 AM IST

ನಾಗ್ಪುರ: ರಾಷ್ಟ್ರೀಯ ಕಾಂಗ್ರೆಸ್‌ನ (NCP) ಶಾಸಕಿ ಸರೋಜ್‌ ಅಹಿರೆ ವಾಘ್‌ (37) ತಮ್ಮ 10 ವಾರದ ಮಗುವಿನೊಂದಿಗೆ ಸೋಮವಾರ ಇಲ್ಲಿ ಆರಂಭವಾದ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನಕ್ಕೆ ಆಗಮಿಸಿ ಗಮನ ಸೆಳೆದರು. ‘ನಾನು ತಾಯಿ ಮಾತ್ರವಲ್ಲ. ಜನಪ್ರತಿನಿಧಿ ಕೂಡ. ಹೀಗಾಗಿ ಜನರ ಸಮಸ್ಯೆಗಳನ್ನು ಚರ್ಚಿಸಲು ಮಗುವಿನ ಜತೆಗೇ ಆಗಮಿಸಿದ್ದೇನೆ’ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು. ‘ಪ್ರತಿದಿನ ನಾನು ನನ್ನ ಮಗನನ್ನು ಕರೆತರುತ್ತೇನೆ. ಇದರಿಂದ ಅವನ ಆರೈಕೆ ಮಾಡಲು ಸುಲಭವಾಗುತ್ತದೆ. ಆದರೆ ಇಲ್ಲಿ ಮಹಿಳಾ ಶಾಸಕಿಯರಿಗೆ ಸರಿಯಾದ ವಿಶ್ರಾಂತಿ ಕೊಠಡಿ ಮತ್ತು ಶಿಶುಪಾಲನಾ ವ್ಯವಸ್ಥೆಗಳಿಲ್ಲ, ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು’ ಒತ್ತಾಯಿಸಿದರು. ‘ಭಾರತದಲ್ಲಿ ಇದೇ ಮೊದಲ ಬಾರಿಗೆ ಶಾಸಕಿಯೊಬ್ಬರು ಹಸುಗೂಸಿನೊಂದಿಗೆ ತನ್ನ ಕರ್ತವ್ಯ ನಿರ್ವಹಣೆಗೆ ಆದ್ಯತೆ ಕೊಟ್ಟಿರುವುದು, ಮೆಚ್ಚಗೆಗೆ ಪಾತ್ರವಾಗಿದೆ’ ಎಂದು ಶಾಸಕಿಯಾಪ್ತ ವಕೀಲ ಅನೂಪ್‌ ವಾನ್ಸೆ ತಿಳಿಸಿದ್ದಾರೆ.

ಚಳಿಗಾಲದ ಅಧಿವೇಶನ ಜನ ಪ್ರತನಿಧಿಗಳಿಗೆ ಅತ್ಯಂತ ಪ್ರಮುಖವಾಗಿದ್ದು, ಇಲ್ಲ ನಡೆಯುವ ಚರ್ಚೆಗಳಿಂದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗುತ್ತದೆ. ಆ ಕಾರಣದಿಂದ  ಪುಟ್ಟ ಮಗುವಿದ್ದರೂ, ಜನ ಪ್ರತಿನಿಧಿಯಾಗಿ ಸದನಕ್ಕೆ ಆಗಮಿಸುವುದು ಕರ್ತವ್ಯವಾಗಿದೆ. ಹಾಗಾಗಿ ನಾನು ಕಲಾಪವನ್ನು ಮಿಸ್ ಮಾಡಿ ಕೊಳ್ಳುವುದಿಲ್ಲವೆಂದು ಹೇಳಿದ್ದಾರೆ. ಶಾಸಕಿಯೊಂದಿಗೆ ಅವರ ಕುಟುಂಬದ ಸದಸ್ಯರೂ ವಿಧಾನಸಭೆಗೆ ಆಗಮಿಸಿದ್ದು, ಕಲಾಪದಲ್ಲಿ ಇವರು ನಿರತರಾಗಿದ್ದಾಗ ಕುಟುಂಬದ ಸದಸ್ಯರು ಮಗುವಿನ ಕಾಳಜಿ ವಹಿಸುತ್ತಾರೆಂದು ಹೇಳಿದ್ದಾರೆ. 

Breast Pain: ಹಾಲುಣಿಸುವ ತಾಯಂದಿರಲ್ಲಿ ಚಳಿಗಾಲದಲ್ಲಿ ಸ್ತನಗಳಲ್ಲಿ ನೋವುಂಟಾಗುವುದೇಕೆ?

ಸರೋಜ್ ಮಗುವನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿ, ಇತರೆ ಸದಸ್ಯರು ಎತ್ತಿ ಮುದ್ದಾಡಿದರು. ಶಾಸಕಿ ಮುಖ್ಯಮಂತ್ರಿಗೆ ತಮ್ಮ ಕ್ಷೇತ್ರದ ಕುಂದು ಕೊರತೆ ಆಲಿಸುವ ಆಗ್ರಹಿಸಿ, ಅರ್ಜಿ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಸರೋಜ್ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಅತೀವ ಶ್ಲಾಘನೆ ವ್ಯಕ್ತವಾಗಿದ್ದು, ಮಕ್ಕಳಾಗಿದೆ, ಬಾಣಂತಿ ಎನ್ನುವ ಕಾರಣಕ್ಕೆ ಕೆಲಸದಿಂದ ನುಣುಚಿಕೊಳ್ಳುವ ಮಹಿಳೆಯರಿಗೆ ಇವರು ಮಾದರಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಹೆಣ್ಣು ತನಗಾಗುವ ನೈಸರ್ಕಿಕ ಕ್ರಿಯೆಯನ್ನು ಸಹಜವಾಗಿ ಸ್ವೀಕರಿಸಿದಾಗ, ಯಾವುದಕ್ಕೂ ನೆಪ ಹೇಳುವ ಅಗತ್ಯವಿರುವುದಿಲ್ಲವೆನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಹೆಣ್ಣು ಮನಸ್ಸು ಮಾಡಿದರೆ, ಅವಳಿಗೆ ನಿಸರ್ಗ ಕೊಟ್ಟ ವಿಶೇಷತೆಯನ್ನು ಪಾಸಿಟಿವ್ ಆಗಿ ಉಪಯೋಗಿಸಿಕೊಳ್ಳಬಹುದು, ಸುಮ್ಮನೆ ಮನೆಯಲ್ಲಿ ಕೂರವ ಬದಲು ತನ್ನ ಕರ್ತವ್ಯವವನ್ನೂ ಸರಿಯಾಗಿಯೇ ನಿಭಾಯಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. 

ಸದನಕ್ಕೆ ಮಗು ಕರೆದುಕೊಂಡು ಬಂದಿದ್ದ ನ್ಯೂಚಿಲೆಂಡ್ ಪ್ರಧಾನಿ:
ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿದ ವಿಶ್ವದ ಎರಡನೇ ಪ್ರಧಾನಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. 37ರ ಹರೆಯದ ಜಸಿಂದಾ ನ್ಯೂಜಿಲೆಂಡ್‌ನ ಅತೀ ಕಿರಿಯ ಪ್ರಧಾನಿಯಾಗಿದ್ದು, ಮೊದಲ ಮಗುವಿಗೆ ಸರಕಾರ ಆಸ್ಪತ್ರೆಯಲ್ಲಿ ಜನ್ಮ ನೀಡಿ ಸುದ್ದಿಯಾಗಿದ್ದರು. ಅಷ್ಟೇ ತಮ್ಮ ಮೂರು ತಿಂಗಳ ಮಗುವನ್ನು 2018ರಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಗೆ ಕರೆ ತರುವ ಮೂಲಕ ಸಕ್ಕತ್ತೂ ಸುದ್ದಿಯಾಗಿದ್ದರು. 

Breast Feeding ಸಖತ್ ಈಸಿ ಅಂತಿದ್ದಾರೆ ಸೋನಂ, ಅವರ ದೇಹದಲ್ಲಿ ಸ್ಟ್ರೆಚ್ ಮಾರ್ಕ್ ಗಳೇ ಇಲ್ವಂತೆ!

ವಿಶ್ವಸಂಸ್ಥೆಯಲ್ಲಿ ಇವರು ಭಾಷಣ ಮಾಡುವಾಗ, ಇವರ ಸಂಗಾತಿ ಕ್ಲಾರ್ಕೆ ಗೇಫೋರ್ಡ್ ಮಗುವನ್ನು ತೊಡೆ (Nap) ಮೇಲೆ ಮಲಗಿಸಿಕೊಂಡಿದ್ದು, ಹೆಡ್ಲೈನ್‍ನಲ್ಲಿ (Headline) ರಾರಾಜಿಸಿತ್ತು. ಮಗುವಿಗೂ ವಿಶೇಷ ಐಡೆಂಟಿಟಿ ಕಾರ್ಡ್‌ನೊಂದಿಗೆ ವಿಶ್ವಸಂಸ್ಥೆ ಹಾಲ್ ಅನ್ನು ಪ್ರವೇಶಿಸಿದ್ದರು. ಪ್ರಧಾನಿಯ ಸಂಗಾತಿ ಈ ಮಗುವಿನಿ ನ್ಯಾಪಿ ಬದಲಾಯಿಸಿದ ಫೋಟೋ ಸಹ ಸದ್ದು ಮಾಡಿತ್ತು.  

Follow Us:
Download App:
  • android
  • ios